ಮಂಗಳವಾರ, ಜೂನ್ 15, 2021
21 °C
ಪಂಚವಾರ್ಷಿಕ ಯೋಜನೆ; ವಿಮಾನ ನಿಲ್ದಾಣ ಅಭಿವೃದ್ಧಿ

ರೂ 75,020ಕೋಟಿ ಹೂಡಿಕೆ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್(ಪಿಟಿಐ): ದೇಶದ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕ್ಷೇತ್ರ 12ನೇ ಪಂಚವಾರ್ಷಿಕ ಯೋಜನೆ (2012--17) ಅವಧಿಯಲ್ಲಿ 1210 ಕೋಟಿ ಅಮೆರಿಕನ್‌ ಡಾಲರ್‌ಗಳಷ್ಟು (ರೂ. 75,020 ಕೋಟಿ) ಹೂಡಿಕೆಯನ್ನು ಆಕರ್ಷಿಸುವ ನಿರೀಕ್ಷೆ ಇದೆ. ಇದರಲ್ಲಿ 930 ಕೋಟಿ ಡಾಲರ್‌ (ರೂ. 57,660 ಕೋಟಿ) ಖಾಸಗಿ ಕ್ಷೇತ್ರದಿಂದಲೇ ಬರಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಅಜಿತ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದರು.ಇಲ್ಲಿ ಬುಧವಾರ ‘ಭಾರತ ವೈಮಾನಿಕ ಪ್ರದರ್ಶನ 2014’ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ವಿಶ್ವದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಭಾರತ 9ನೇ ದೊಡ್ಡ ದೇಶವಾಗಿದ್ದು, 2020ರ ವೇಳೆಗೆ 3ನೇ ಸ್ಥಾನಕ್ಕೇರುವ ನಿರೀಕ್ಷೆ ಇದೆ  ಎಂದು ಹೇಳಿದರು.12ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ, ಹಳೆಯ ನಿಲ್ದಾಣಗಳ ವಿಸ್ತರಣೆ ಮತ್ತು ಆಧುನೀಕರಣ ಕಾಮಗಾರಿ ದೊಡ್ಡ ಮಟ್ಟದಲ್ಲಿ ನಡೆಯಲಿವೆ. ಇದೆಲ್ಲದರ ಪರಿಣಾಮವಾಗಿ ದೇಶದ ವಿಮಾನ ನಿಲ್ದಾಣಗಳು 2020ರ ವೇಳೆಗೆ ಒಟ್ಟಾರೆಯಾಗಿ 23.60 ಕೋಟಿ ದೇಶೀಯ ಪ್ರಯಾಣಿಕರು ಮತ್ತು 8.50 ಕೋಟಿ ವಿದೇಶಿ ಪ್ರಯಾಣಿಕರಿಗೆ ಸೇವೆ ಒದಗಿಸಲು ಸಮರ್ಥವಾಗಿರಲಿವೆ ಎಂದು ವಿವರಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.