ಮಂಗಳವಾರ, ಏಪ್ರಿಲ್ 20, 2021
24 °C

ರೂ 9 ಲಕ್ಷ ಕೋಟಿ ದಾಟಿದ ರಫ್ತುವಹಿವಾಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): 2010- 11ನೇ ಹಣಕಾಸು ವರ್ಷದ ಮೊದಲ 11 ತಿಂಗಳಲ್ಲಿ ದೇಶದ ರಫ್ತು ಪ್ರಮಾಣವು 200 ಶತಕೋಟಿ ಡಾಲರ್‌ಗಳಷ್ಟು (್ಙ 9,00,000 ಕೋಟಿ)  ದಾಟಿದೆ. ಅಮೆರಿಕ ಮತ್ತು ಇತರ ಮಾರುಕಟ್ಟೆಗಳಲ್ಲಿ ಹೆಚ್ಚಿದ ಬೇಡಿಕೆ ಫಲವಾಗಿ ಫೆಬ್ರುವರಿ ತಿಂಗಳಲ್ಲಿ ದೇಶದಿಂದ ಸಾಗಿಸುವ ಸರಕುಗಳ ಪ್ರಮಾಣವು ಶೇ 50ರಷ್ಟು ಹೆಚ್ಚಾಗಿದೆ. ವರ್ಷದಿಂದ ವರ್ಷದ ಲೆಕ್ಕಾಚಾರದಲ್ಲಿ ಫೆಬ್ರುವರಿ ತಿಂಗಳಲ್ಲಿ ರಫ್ತು ಪ್ರಮಾಣವು ಶೇ 49.8ರಷ್ಟು ಏರಿಕೆ ಕಂಡಿದೆ.ಇದರ ಫಲವಾಗಿ ಏಪ್ರಿಲ್ - ಜನವರಿ ತಿಂಗಳಲ್ಲಿನ ಒಟ್ಟಾರೆ ರಫ್ತು ಪ್ರಮಾಣವು 208 ಶತಕೋಟಿ ಡಾಲರ್‌ಗಳಷ್ಟಾಗಿದೆ. ಒಂದು ವರ್ಷದ ಹಿಂದಿನ ರಫ್ತಿಗೆ ಹೋಲಿಸಿದರೆ ಇದು ಶೇ 31ರಷ್ಟು ಹೆಚ್ಚಳ ಕಂಡಂತೆ ಆಗಿದೆ. ರಫ್ತು ಪ್ರಮಾಣವು ಈಗಾಗಲೇ 200 ಶತಕೋಟಿ ಡಾಲರ್‌ಗಳನ್ನು ದಾಟಿದ್ದು, ಪ್ರಸಕ್ತ ಹಣಕಾಸು ವರ್ಷದ ಒಟ್ಟು ರಫ್ತು ಅಂದಾಜು 230 ರಿಂದ 235 ಶತಕೋಟಿ ಡಾಲರ್‌ಗಳಷ್ಟಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ತಿಳಿಸಿದ್ದಾರೆ.ಫೆಬ್ರುವರಿ ತಿಂಗಳಲ್ಲಿ ಆಮದು ಪ್ರಮಾಣವೂ ಶೇ 21ರಷ್ಟು ಹೆಚ್ಚಳ ಕಂಡು 32 ಶತಕೋಟಿ ಡಾಲರ್‌ಗಳಷ್ಟಾಗಿದೆ. ಇದರಿಂದ ವ್ಯಾಪಾರ ಅಸಮತೋಲನವು (್ಙ 36,000 ಕೋಟಿ) 8 ಶತಕೋಟಿ  ಡಾಲರ್‌ಗಳಷ್ಟಾಗಿದೆ. ಮೊದಲ 11 ತಿಂಗಳಲ್ಲಿ ಆಮದು ಪ್ರಮಾಣವು 305 ಶತಕೋಟಿ ಡಾಲರ್‌ಗಳಷ್ಟಾಗಿ  (್ಙ13,72,500 ಕೋಟಿ) ಶೇ 18 ರಷ್ಟು ಹೆಚ್ಚಳಗೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.