ಶುಕ್ರವಾರ, ನವೆಂಬರ್ 22, 2019
27 °C

ರೂ.10ಲಕ್ಷ ಮೌಲ್ಯದ ಅಕ್ರಮ ಮದ್ಯ ವಶ

Published:
Updated:

ಭದ್ರಾವತಿ: ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 10 ಲಕ್ಷ ಮೌಲ್ಯದ ಮದ್ಯ ಹಾಗೂ ಲಾರಿಯನ್ನು ಅಬ್ಕಾರಿ ವಿಚಕ್ಷಣ ದಳ ಮಂಗಳವಾರ ಬೆಳಗಿನ ಜಾವ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದೆ.ಕ್ಯಾಂಟರ್ ವಾಹನದಲ್ಲಿ ಸಾಗುತ್ತಿದ್ದ 250 ಬಾಕ್ಸ್ (4,752)ಲೀಟರ್) ಮದ್ಯ ತುಂಬಿದ ಲಾರಿಯನ್ನು ಇಲ್ಲಿನ ಜೇಡಿಕಟ್ಟೆ ಬಳಿ ತಡೆದು ತಪಾಸಣೆ ಮಾಡಿದಾಗ ಸದರಿ ವಾಹನ ಹಾಸನ-ಬಾಗಲಕೋಟೆ ಮಾರ್ಗದ ಪರವಾನಿಗೆ ಹೊಂದಿತ್ತು, ಆದರೆ, ಹಾದಿ ತಪ್ಪಿಸಿ ಹಾಸನ-ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹಿನ್ನೆಲೆಯಲ್ಲಿ ಅಬ್ಕಾರಿ ದಳ ಪ್ರಕರಣ ದಾಖಲಿಸಿದೆ.ವಾಹನದಲ್ಲಿದ್ದ ಮಡಿವಾಳಪ್ಪ, ಜಟ್ಟಪ್ಪ ಎಂಬುವರನ್ನು ಬಂಧಿಸಿರುವ ಧರಣೇಶ್‌ಕುಮಾರ್ ನೇತೃತ್ವದ ಅಬ್ಕಾರಿ ದಳ ತಂಡ ಲಾರಿ ಹಾಗೂ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದೆ.ಬಂಧನ: ಆನವೇರಿ ಬಸ್‌ನಿಲ್ದಾಣ ಬಳಿ ಟಿವಿಎಸ್ ವಾಹನದಲ್ಲಿ ಅಕ್ರಮವಾಗಿ ಒಂದು ಬಾಕ್ಸ್ ಮದ್ಯ ಸಾಗಿಸುತ್ತಿದ್ದ ಹನುಮಂತಪ್ಪ ಎಂಬಾತನನ್ನು ಗ್ರಾಮಾಂತರ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.ನ್ಯೂಟೌನ್ ಬೆಣ್ಣೆಕೃಷ್ಣ ಸರ್ಕಲ್ ಬಳಿ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ರೂ 800ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿರುವ ಪೊಲೀಸರು ಸಂಪತ್, ಜಾನ್ ಅವರನ್ನು ಬಂಧಿಸಿದ್ದಾರೆ.

 

ಪ್ರತಿಕ್ರಿಯಿಸಿ (+)