ರೂ1.2 ಲಕ್ಷ ಕೋಟಿ ಚೀನಾ ಬಂಡವಾಳ

7
ವಾಣಿಜ್ಯ, ಆರ್ಥಿಕ ಒಪ್ಪಂದ

ರೂ1.2 ಲಕ್ಷ ಕೋಟಿ ಚೀನಾ ಬಂಡವಾಳ

Published:
Updated:

ನವದೆಹಲಿ (ಪಿಟಿಐ): ಚೀನಾದೊಂದಿಗಿನ ವಾಣಿಜ್ಯ ವ್ಯವಹಾರದಲ್ಲಿ ಸಮತೋಲನ ಕಾಯ್ದುಕೊಳ್ಳುವ ಹಾಗೂ ಆರ್ಥಿಕ ಸಹಕಾರ ಸಾಧಿಸುವ ಉದ್ದೇಶದಿಂದ ಮಹತ್ವದ ಒಪ್ಪಂದಕ್ಕೆ ಗುರುವಾರ ಸಹಿ ಹಾಕಲಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಚೀನಾವು ಭಾರತದಲ್ಲಿ 2000 ಕೋಟಿ ಅಮೆರಿಕ ಡಾಲರ್‌ (ಸುಮಾರು ರೂ1.20ಲಕ್ಷ ಕೋಟಿ) ಹೂಡಿಕೆ ಮಾಡಲಿದೆ.ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಸಮ್ಮುಖದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಅವರ ಚೀನಾ ಸಹವರ್ತಿ ಗಾವೊ ಹುಚೆಂಗ್‌ ಅವರು ಒಪ್ಪಂದ ಪತ್ರಗಳಿಗೆ ಸಹಿ ಹಾಕಿದರು.ಉಭಯ ದೇಶಗಳ ನಡುವೆ ಪಾರದರ್ಶಕ, ಸ್ಥಿರ ಮತ್ತು ಹೂಡಿಕೆದಾರ ಸ್ನೇಹಿ ವ್ಯಾಪಾರದ ವಾತಾವರಣ, ವಾಣಿಜ್ಯೋದ್ಯಮ ಸಂಘಗಳು ಮತ್ತು ಆರ್ಥಿಕ ವಲಯಗಳ ಮಧ್ಯೆ ಉತ್ತಮ ಸಹಕಾರ ಇರುವಂತೆ ನೋಡಿಕೊಳ್ಳುವುದೂ ಒಪ್ಪಂದದ ಉದ್ದೇಶವಾಗಿದೆ. ಭಾರತದ ಕೃಷಿ ಉತ್ಪನ್ನಗಳು, ಔಷಧ ಉತ್ಪನ್ನಗಳು ಹಾಗೂ ಸೇವಾ ವಲಯಕ್ಕೆ ಚೀನಾದಲ್ಲಿ ಮಾರುಕಟ್ಟೆ ಅವಕಾಶ ಕಲ್ಪಿಸುವ ಕುರಿತೂ ಸಭೆಯಲ್ಲಿ ಚರ್ಚಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry