`ರೂ2500ಕೋಟಿ ಆದಾಯ ನಿರೀಕ್ಷೆ'

7
ಪುರವಂಕರ `ಪ್ರಾವಿಡೆಂಟ್ ಸನ್ವರ್ಥ್' ಯೋಜನೆ

`ರೂ2500ಕೋಟಿ ಆದಾಯ ನಿರೀಕ್ಷೆ'

Published:
Updated:

ಬೆಂಗಳೂರು: `ಪುರವಂಕರ ಪ್ರಾಜೆಕ್ಟ್ಸ್ ಲಿ.'ನ ಅಂಗಸಂಸ್ಥೆ `ಪ್ರಾವಿಡೆಂಟ್ ಹೌಸಿಂಗ್ ಲಿ.' ನಗರದ ಹೊರವಲಯದಲ್ಲಿ `ಸಮಗ್ರ ಸೌಕರ್ಯಗಳ ಬೃಹತ್ ಉಪನಗರ' ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದೆ. `ಪ್ರಾವಿಡೆಂಟ್ ಸನ್ವರ್ಥ್' ಹೆಸರಿನ ಈ ವಸತಿ ನಿರ್ಮಾಣ ಬೃಹತ್ ಯೋಜನೆಯಾಗಿದ್ದು, ರೂ2500 ಕೋಟಿ ವರಮಾನ ನಿರೀಕ್ಷೆ ಇದೆ.

ಈ ವಿಶಿಷ್ಟ ಯೋಜನೆಯನ್ನು ಮುಂಬರುವ ದಿನಗಳಲ್ಲಿ ಮಂಗಳೂರು, ಹೈದರಾಬಾದ್, ಜೈಪುರ, ಅಹಮದಾಬಾದ್, ದೆಹಲಿ, ಪುಣೆ, ಮುಂಬೈ, ಬರೋಡಾ, ಕೋಲ್ಕೊತಾ, ನಾಗ್ಪುರಕ್ಕೂ ವಿಸ್ತರಿಸಲಾಗುವುದು ಎಂದು ಸಂಸ್ಥೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅಶೀಶ್ ಪುರವಂಕರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.`ಪ್ರಾವಿಡೆಂಟ್ ಸನ್ವರ್ಥ್'ನಲ್ಲಿ ಮಲ್ಟಿಪಲ್ ಕ್ಲಬ್ ಹೌಸ್, ಈಜುಕೊಳ, ವ್ಯಾಯಾಮ ಶಾಲೆ ಉದ್ಯಾನವನ, ಆಟದ ಜಾಗ,  ಸೂಪರ್ ಮಾರ್ಕೆಟ್ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳು ಇಲ್ಲಿರಲಿವೆ. ಹಾಗಿದ್ದೂ ಇಲ್ಲಿನ ಮನೆಗಳು ಮಾರುಕಟ್ಟೆಗಿಂತ ಶೇ 20ರಷ್ಟು ಕಡಿಮೆ ದರದಲ್ಲಿ ಲಭ್ಯವಿವೆ. 2 ಕೊಠಡಿ ಮನೆಗೆ ರೂ. 29.75 ಲಕ್ಷ ಮತ್ತು 3 ಕೊಠಡಿ ಗೃಹಕ್ಕೆ ರೂ. 35.96 ಲಕ್ಷ ದರವಿದೆ ಎಂದರು.ಈ ಉಪ ನಗರ ಮೈಸೂರು ರಸ್ತೆಯಲ್ಲಿ ನೈಸ್ ವೃತ್ತದ ಸಮೀಪ ನಿರ್ಮಾಣಗೊಳ್ಳುತ್ತಿದೆ. 60 ಲಕ್ಷ ಚದರಡಿಯ ಈ ಬೃಹತ್ ನಿರ್ಮಾಣ ಯೋಜನೆ 60 ಎಕರೆಯಲ್ಲಿ ವ್ಯಾಪಿಸಿಕೊಳ್ಳಲಿದೆ ಎಂದು `ಪುರವಂಕರ ಸಮೂಹ'ದ `ಸಿಇಒ' ಜಾಕ್‌ಬಾಸ್ಟಿಯನ್ ನಝರತ್ ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry