ಮಂಗಳವಾರ, ನವೆಂಬರ್ 12, 2019
28 °C

ರೂ.27000ರ ಗಡಿ ದಾಟಿದ ಬಂಗಾರ

Published:
Updated:

ಮುಂಬೈ (ಪಿಟಿಐ): ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆ ಮತ್ತೆ ಶುಕ್ರವಾರ ರೂ.330ರಷ್ಟು ಏರಿಕೆ ಕಂಡು ರೂ.27000 ಗಡಿ ದಾಟಿ ಮುನ್ನಡೆಯಿತು.ಗುರುವಾರ ರೂ.26,970ರಲ್ಲಿ ಮಾರಾಟವಾಗಿದ್ದ 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನ ರೂ.27,300ಕ್ಕೆ ಏರಿತು. ಅಪರಂಜಿ ಚಿನ್ನವೂ ರೂ.27,110ರಿಂದ ರೂ.27,440ಕ್ಕೆ ಹೆಚ್ಚಳ ಕಂಡಿತು.ಬೆಳ್ಳಿಯೂ ರೂ.1120ರಷ್ಟು ಮೌಲ್ಯ ಹೆಚ್ಚಿಸಿಕೊಂಡಿತು. ಕೆ.ಜಿ. ಸಿದ್ಧ ಬೆಳ್ಳಿ ರೂ.45,315ರಿಂದ ರೂ.46,435ಕ್ಕೇರಿತು.

ನವದೆಹಲಿಯಲ್ಲಿ ಮಾತ್ರ ಶುಕ್ರವಾರ ಬಂಗಾರದ ಧಾರಣೆ ಗುರುವಾರ ಇದ್ದಷ್ಟೇ  ಮುಂದುವರಿಯಿತು. 10 ಗ್ರಾಂ ಅಪರಂಜಿ ಚಿನ್ನ ರೂ.28,000ರಲ್ಲೂ, ಸ್ಟ್ಯಾಂಡರ್ಡ್ ಚಿನ್ನ ರೂ.27,800ರಲ್ಲೂ ಮಾರಾಟವಾಯಿತು. ಬೆಳ್ಳಿ ಮಾತ್ರ 1900ರಷ್ಟು ತುಟ್ಟಿಯಾಯಿತು. ಕೆ.ಜಿ ಸಿದ್ಧ ಬೆಳ್ಳಿ ಶುಕ್ರವಾರ 47,400ಕ್ಕೇರಿತು.

ಪ್ರತಿಕ್ರಿಯಿಸಿ (+)