ರೂ.30 ಸಾವಿರ ಕೋಟಿ ಹೂಡಿಕೆ ನಿರೀಕ್ಷೆಯಲ್ಲಿ ವಿಮಾ ಕ್ಷೇತ್ರ

7

ರೂ.30 ಸಾವಿರ ಕೋಟಿ ಹೂಡಿಕೆ ನಿರೀಕ್ಷೆಯಲ್ಲಿ ವಿಮಾ ಕ್ಷೇತ್ರ

Published:
Updated:

ಹೈದರಾಬಾದ್ (ಪಿಟಿಐ): ವಿಮಾ ಕ್ಷೇತ್ರದಲ್ಲಿ  ಶೇ 49ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ   (ಎಫ್‌ಡಿಐ) ಅವಕಾಶ ನೀಡಿರುವುದರಿಂದ ರೂ.30 ಸಾವಿರ ಕೋಟಿಯಷ್ಟು ಬಂಡವಾಳ ಹರಿದು ಬರುವ ಸಾಧ್ಯತೆ ಇದೆ ಎಂದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ಹೇಳಿದೆ.ದೇಶದ ವಿಮಾ ವಲಯವು ವಾರ್ಷಿಕ ಸರಾಸರಿ ಶೇ 11 ರಿಂದ 12ರಷ್ಟು ಪ್ರಗತಿ ದಾಖಲಿಸಲು ಮುಂದಿನ 5 ವರ್ಷಗಳಲ್ಲಿ  ರೂ.30 ಸಾವಿರ ಕೋಟಿಯಷ್ಟು ಬಂಡವಾಳ ಅಗತ್ಯವಿದೆ. `ಎಫ್‌ಡಿಐ~ ಮಿತಿ ಹೆಚ್ಚಿಸಿರುವುದರಿಂದ ಬಂಡವಾಳದ ಹರಿವು ಹೆಚ್ಚಲಿದೆ ಎಂದು `ಐಆರ್‌ಡಿಎ~ ಅಧ್ಯಕ್ಷ ಜೆ.ಹರಿನಾರಾಯಣ್ ಹೇಳಿದ್ದಾರೆ.ಕೇಂದ್ರ ಸಚಿವ ಸಂಪುಟವು ವಿಮಾ ಕ್ಷೇತ್ರದಲ್ಲಿನ `ಎಫ್‌ಡಿಐ~ ಮಿತಿಯನ್ನು   ಶೇ 26ರಿಂದ 49ಕ್ಕೆ ಹೆಚ್ಚಿಸಲು ಗುರುವಾರ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಹರಿನಾರಾಯಣ್ ಅವರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಪ್ರಸಕ್ತ ಹಣಕಾಸು ವರ್ಷದ ಮೊದಲ ಐದು ತಿಂಗಳಲ್ಲಿ ಸರ್ಕಾರಿ ಸ್ವಾಮ್ಯದ ನಾಲ್ಕು ಮತ್ತು  ಖಾಸಗಿ ವಲಯದ 21 ವಿಮಾ ಸಂಸ್ಥೆಗಳು ರೂ.27,942 ಕೋಟಿಯಷ್ಟು ಬಂಡವಾಳ ಸಂಗ್ರಹಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 18ರಷ್ಟು ಹೆಚ್ಚಳ ದಾಖಲಿಸಿವೆ. ಕಳೆದ ವರ್ಷ ವಿಮಾ ಕಂಪೆನಿಗಳು ಪ್ರೀಮಿಯಂ ಮೂಲಕ ರೂ.2.83 ಲಕ್ಷ ಕೋಟಿ ಬಂಡವಾಳ ಸಂಗ್ರಹಿಸಿದ್ದವು ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry