ರೂ.347.07 ಕೋಟಿ ವಿಶೇಷ ಅನುದಾನ ರದ್ದು

7

ರೂ.347.07 ಕೋಟಿ ವಿಶೇಷ ಅನುದಾನ ರದ್ದು

Published:
Updated:

ಬೆಂಗಳೂರು:  ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 2013-14ನೇ ಸಾಲಿನ ಬಜೆಟ್‌ಗೆ ಹಲವು ಬದಲಾವಣೆ ಮಾಡುವ ಮೂಲಕ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ವಾರ್ಡ್‌ಗಳಿಗೆ ಪ್ರತ್ಯೇಕವಾಗಿ ಮೀಸಲು ಇಡಲಾಗಿದ್ದರೂ. 347.07 ಕೋಟಿ ಮೊತ್ತದ ವಿಶೇಷ ಅನುದಾನವನ್ನು ರದ್ದುಪಡಿಸಲಾಗಿದೆ.ಮೇಯರ್ ವಿವೇಚನಾ ಕಾಮಗಾರಿಗಳಿಗೆ ಕಲ್ಪಿಸಲು ಉದ್ದೇಶಿಸಲಾಗಿದ್ದರೂ. 150 ಕೋಟಿ ಮೊತ್ತದ ಅನುದಾನವನ್ನುರೂ. 50 ಕೋಟಿಗೆ ಇಳಿಸಲಾಗಿದೆ. ತುರ್ತು ಮೀಸಲು ನಿಧಿಯನ್ನುರೂ. 50 ಕೋಟಿಯಿಂದರೂ. 25 ಕೋಟಿಗೆ ಕಡಿತಗೊಳಿಸಲಾಗಿದೆ.ಬಜೆಟ್ ವಿವೇಚನಾ ಅನುದಾನವಾಗಿ ಎತ್ತಿಡಲು ಉದ್ದೇಶಿಸಲಾಗಿದ್ದರೂ. 50 ಕೋಟಿ ಮೊತ್ತದ ನಿಧಿಯನ್ನು ರದ್ದುಗೊಳಿಸಲಾಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ನಿಲ್ದಾಣ ನಾಮಕರಣ ಸಮಾರಂಭಕ್ಕೆ ಮೀಸಲು ಇಡಲಾಗಿದ್ದರೂ. 5 ಕೋಟಿಯನ್ನುರೂ. 1 ಕೋಟಿಗೆ ಕಡಿತಗೊಳಿಸಲಾಗಿದೆ. ಕೆಲವು ಯೋಜನೆಗಳ ಮೊತ್ತವನ್ನು ಹೆಚ್ಚಿಸಲೂ ಆದೇಶಿಸಲಾಗಿದೆ.ಬೆಂಗಳೂರು ನಗರದ ಅಭಿವೃದ್ಧಿ ಕಾಮಗಾರಿಗಳಿಗೆ ಎತ್ತಿಡಲಾಗಿದ್ದರೂ. 235 ಕೋಟಿಯನ್ನುರೂ. 350 ಕೋಟಿಗೆ ಹೆಚ್ಚಿಸಲಾಗಿದೆ. ಒಳರಸ್ತೆಗಳ ಗುಂಡಿಮುಚ್ಚಲು ಮೀಸಲಿಡಲಾಗಿದ್ದರೂ. 20 ಕೋಟಿಯನ್ನು ದುಪ್ಪಟ್ಟುಗೊಳಿಸಲಾಗಿದ್ದು, ಪರಿಷ್ಕೃತ ಮೊತ್ತರೂ. 40 ಕೋಟಿಯಾಗಿದೆ. ಒಳರಸ್ತೆಗಳಿಗೆ ಡಾಂಬರು ಹಾಕಲು ಒದಗಿಸಿದ್ದರೂ. 100 ಕೋಟಿ ಮೊತ್ತವನ್ನುರೂ. 400 ಕೋಟಿಗೆ ಹೆಚ್ಚಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry