ಮಂಗಳವಾರ, ಜೂನ್ 15, 2021
27 °C

ರೂ.43.63 ಲಕ್ಷ ಉಳಿತಾಯ ಬಜೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೂ.43.63 ಲಕ್ಷ ಉಳಿತಾಯ ಬಜೆಟ್

ಚಿತ್ರದುರ್ಗ: ನಗರಸಭೆಯ 2012-13ನೇ ಸಾಲಿಗೆರೂ. 43.63 ಲಕ್ಷ ಉಳಿತಾಯ ಬಜೆಟ್‌ಮಂಡಿಸಲಾಗಿದೆ.

ಒಟ್ಟುರೂ. 54.69 ಕೋಟಿ ಜಮಾ ಆಗಲಿದ್ದು,ರೂ. 54.26 ಪಾವತಿಯಾಗಲಿದೆ. ಈ ಮೂಲಕ ಉಳಿತಾಯ ಬಜೆಟ್ ಮಂಡಿಸಲಾಗಿದೆ.ಸೋಮವಾರ ನಗರಸಭೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್ ಬಜೆಟ್ ಮಂಡಿಸಿದರು.ರೂ.31.71 ಕೋಟಿ ರಾಜಸ್ವ ಜಮಾ ಮತ್ತುರೂ. 25.89 ರಾಜಸ್ವ ಪಾವತಿ,ರೂ. 2.65 ಕೋಟಿ ಬಂಡವಾಳ ಜಮಾ ಹಾಗೂರೂ. 15.69 ಕೋಟಿ  ಬಂಡವಾಳ ಪಾವತಿಯಾಗಲಿದೆ.

ಬಜೆಟ್‌ನ ವಿವರಗಳನ್ನು ಓದಿದ ಅಧ್ಯಕ್ಷರು, ಮುಂದಿನ ಹಣಕಾಸು ವರ್ಷದಲ್ಲಿ ಕೈಗೊಳ್ಳುವ ಯೋಜನೆಗಳು ಹಾಗೂ ಖರ್ಚು, ವೆಚ್ಚಗಳನ್ನು ಮಂಡಿಸಿದರು.2009-10 ಮತ್ತು 2010-11ನೇ ಸಾಲಿನ ಕೆಎಂಆರ್‌ಪಿ ಯೋಜನೆಗೆರೂ. 30.50 ಕೋಟಿ ಬಿಡುಗಡೆಯಾಗಿದ್ದು, ಇದುವರೆಗೆರೂ. 23.18 ಕೋಟಿ ವೆಚ್ಚವಾಗಿದೆ. ಉಳಿದರೂ. 7.32 ಕೋಟಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿದ್ದು, ಕಾರ್ಯಾಚರಣೆ ಹಾಗೂ ನಿರ್ವಹಣೆ ಅಗತ್ಯವಿದೆ. ವರ್ಷವೊಂದಕ್ಕೆರೂ. 48 ಲಕ್ಷ ಬಜೆಟ್‌ನಲ್ಲಿ ಕಾಯ್ದಿರಿಸಲಾಗಿದೆ ಎಂದು ವಿವರಿಸಿದರು.ಸೂಪರ್ ಮಾರ್ಕೆಟ್


2009-10 ಮತ್ತು 2010-11ನೇ ಸಾಲಿನ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆ ಅಡಿಯಲ್ಲಿರೂ. 30 ಕೋಟಿ ನಿರೀಕ್ಷಿಸಲಾಗಿತ್ತು. ಇದುವರೆಗೆರೂ. 22.08 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ವಿಶೇಷವಾಗಿ ನಗರದ ಗಾಂಧಿ ವೃತ್ತದ ಬಳಿ ನೂತನವಾಗಿ ಸೂಪರ್ ಮಾರ್ಕೆಟ್ ನಿರ್ಮಾಣಕ್ಕೆರೂ. 2 ಕೋಟಿ ಕಾಯ್ದಿರಿಸಲಾಗಿದೆ. ಗಾಂಧಿ ವೃತ್ತದಲ್ಲಿನ ಮಾರುಕಟ್ಟೆಯಲ್ಲಿನ ಮಳಿಗೆಗಳನ್ನು ತೆರವುಗೊಳಿಸಿ ನೂತನ ಸೂಪರ್ ಮಾರ್ಕೆಟ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಮತ್ತು ಸಂತೆ ಮೈದಾನದಲ್ಲಿ ಮಳಿಗೆಗಳನ್ನು ನಿರ್ಮಿಸಲುರೂ. 1.59 ಕೋಟಿ ವೆಚ್ಚ ಮಾಡಲಾಗಿದೆ ಎಂದು ತಿಳಿಸಿದರು.ಹಿಂದುಳಿದ ಪ್ರದೇಶಾಭಿವೃದ್ಧಿ ನಿಧಿ (ಬಿಆರ್‌ಜಿಎಫ್) ಅಡಿಯಲ್ಲಿ ಬೀದಿ ದೀಪಗಳ ಖರೀದಿಗೆರೂ. 3.97 ಲಕ್ಷ ವೆಚ್ಚ ಮಾಡಲಾಗಿದೆ.ರೂ. 20 ಲಕ್ಷ ಮೊತ್ತದ ಬೀದಿ ದೀಪಗಳನ್ನು ಖರೀದಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ಒದಗಿಸಿದರು.2011-12ನೇ ಸಾಲಿನಲ್ಲಿ 13ನೇ ಹಣಕಾಸು ಯೋಜನೆ ಅಡಿಯಲ್ಲಿರೂ. 1.15 ಕೋಟಿ ನಿರೀಕ್ಷಿಸಲಾಗಿದ್ದು, ಇದರಲ್ಲಿರೂ. 57.81 ಲಕ್ಷ ಬಿಡುಗಡೆಯಾಗಿದೆ. ಈಗಾಗಲೇ  ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ, ನೀರು ಸರಬರಾಜು ಕಾಮಗಾರಿ, ಒಳಚರಂಡಿ ಕಾಮಗಾರಿ, ಮಳೆನೀರು ಚರಂಡಿ ಕಾಮಗಾರಿ, ವಿದ್ಯುತ್ ಬೀದಿ ದೀಪಗಳ ಅಳವಡಿಕೆ, ಕಚೇರಿ ಕಟ್ಟಡಗಳ ನಿರ್ಮಾಣ ಹಾಗೂ ಉದ್ಯಾನಗಳ ನಿರ್ಮಾಣಕ್ಕೆ ಒಟ್ಟುರೂ. 115.62 ಲಕ್ಷಗಳಿಗೆ ಟೆಂಡರ್ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ವಿವರಿಸಿದರು.ಪ್ರತಿಮೆಗಳ ಸ್ಥಾಪನೆ: ನಗರದ ಗಾಂಧಿ ವೃತ್ತದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ, ಜೆಎಂಐಟಿ ವೃತ್ತದಲ್ಲಿ ಬಸವಣ್ಣನವರ ಪ್ರತಿಮೆ, ಕರುವಿನಕಟ್ಟೆ ವೃತ್ತದಲ್ಲಿ ಹಸು-ಕರುವಿನ ಪ್ರತಿಮೆ, ಶೇ. 22.75ರ ಯೋಜನೆ ಅಡಿಯಲ್ಲಿ ಡಾ.ಬಾಬುಜಗಜೀವನ್ ರಾಂ ಪ್ರತಿಮೆ, ಚಳ್ಳಕೆರೆ ವೃತ್ತದಲ್ಲಿ ವಾಲ್ಮೀಕಿ ಅವರ ಪ್ರತಿಮೆ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.ಕಸಾಯಿ ಖಾನೆ: ನಗರದ ಕಸಾಯಿ ಖಾನೆಗಳನ್ನು ಆಧುನೀಕರಣಗೊಳಿಸಲು ನಗರದ ಹೊರ ವಲಯದಲ್ಲಿ ಜಮೀನು ಖರೀದಿಸಿದ್ದು, ಮುಂದಿನ ದಿನಗಳಲ್ಲಿ ಆಧುನಿಕ ಕಸಾಯಿಖಾನೆ ನಿರ್ಮಿಸಲು ಕಾರ್ಯಕ್ರಮ ರೂಪಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.ಮಂಡಕ್ಕಿಬಟ್ಟಿ ಸ್ಥಾವರಗಳಿಗೆ ನಗರದ ಹೊರ ವಲಯದಲ್ಲಿ ಜಾಗ ನೀಡಲಾಗಿದ್ದು, ಇದನ್ನು ಕೆಎಂಆರ್‌ಪಿ ಯೋಜನೆ ಅಡಿಯಲ್ಲಿರೂ. 48 ಲಕ್ಷಗಳಲ್ಲಿ ಆಧುನೀಕರಣಗೊಳಿಸಲು ಅಬಿರಾಮ್ ಕಂಪೆನಿಗೆ ಕಾಮಗಾರಿ ನಿರ್ವಹಿಸಲು ಕೊಡಲಾಗಿದೆ ಎಂದು ತಿಳಿಸಿದರು.ತೆರಿಗೆ ಸಂಗ್ರಹ ಗುರಿ

ಆದಾಯದ ಮೂಲವಾದ ಆಸ್ತಿ ತೆರಿಗೆ ಸಂಗ್ರಹ ಕಳೆದ ಮೂರು ವರ್ಷಗಳಲ್ಲಿ ಆಶಾದಾಯಕವಾಗಿಲ್ಲ. ಇದರಿಂದ ನಗರಸಭೆ ಸರ್ಕಾರದ ಅನುದಾನಗಳನ್ನೆ ಅವಲಿಂಬಿಸಿದೆ.ಈ ಬಾರಿ 2012-13ನೇ ಸಾಲಿನ ಆಸ್ತಿ ತೆರಿಗೆರೂ. 4.40 ಕೋಟಿ ದೊರೆಯುವ ನಿರೀಕ್ಷೆ ಇದೆ. ನೀರು ಸರಬರಾಜು ಶುಲ್ಕ ವಸೂಲಿ ಚುರುಕುಗೊಳಿಸುವ ಮೂಲಕರೂ. 2.2 ಕೋಟಿ ಸಂಗ್ರಹವಾಗುತ್ತದೆ ಎಂದು ತಿಳಿಸಿದರು.ನಗರಸಭೆಯ ವಾಣಿಜ್ಯ ಮಳಿಗೆಗಳ ಬಾಡಿಗೆಯಿಂದರೂ. 45 ಲಕ್ಷ ನಿರೀಕ್ಷಿಸಲಾಗಿದೆ. ಒಟ್ಟುರೂ. 145 ಲಕ್ಷ ಮೊತ್ತದಲ್ಲಿ ನಗರದ ಗಾಂಧಿ ವೃತ್ತ, ಖಾಸಗಿ ಬಸ್ ನಿಲ್ದಾಣ ಹಾಗೂ ಸರ್ಕಾರಿ ಆಸ್ಪತ್ರೆ ಮುಂಭಾಗದ ಸ್ಥಳಗಳಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ. ಉದ್ದಿಮೆ ಪರವಾನಗಿ ತೆರಿಗೆಯನ್ನು ಶೇ. 100ರಷ್ಟು ವಸೂಲಿ ಮಾಡುವ ಉದ್ದೇಶವಿದ್ದು, ವಾರ್ಷಿಕರೂ. 25.50 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ಕಟ್ಟಡ ಪರವಾನಗಿ, ಖಾತೆ ಬದಲಾವಣೆಯಿಂದರೂ. 30 ಲಕ್ಷ ಆದಾಯ ನಿರೀಕ್ಷಿಸಲಾಗಿದೆ ಎಂದು ವಿವರಿಸಿದರು.ನಿಯಮಾವಳಿ ಉಲ್ಲಂಘನೆಯೇ?


ನಗರಸಭೆ ಬಜೆಟ್ ಮಂಡಿಸುವ ಪ್ರಕ್ರಿಯೆಯಲ್ಲಿ ನಿಯಮಾವಳಿಗಳ ಉಲ್ಲಂಘನೆ ಆಗಿರುವ ವಿಷಯ ಸದಸ್ಯರಲ್ಲಿ ಚರ್ಚೆಗೆ ಗ್ರಾಸವಾಯಿತು.ಜನವರಿ 12ರ ಒಳಗೆ ಸ್ಥಳೀಯ ಸಂಸ್ಥೆಗಳು ಬಜೆಟ್ ಮಂಡಿಸಬೇಕು ಮತ್ತು ಸಾರ್ವಜನಿಕರು ಹಾಗೂ ಸಂಘ- ಸಂಸ್ಥೆಗಳ ಜತೆ ಸಮಾಲೋಚನೆ ನಡೆಸಬೇಕು ಎಂದು ನಿಯಮಾವಳಿಗಳಲ್ಲಿ ಸೂಚಿಸಲಾಗಿದೆ. ಆದರೆ, ಈ ಬಾರಿಯೂ ಸೇರಿದಂತೆ ಹಲವು ವರ್ಷಗಳಿಂದ ಸಮಾಲೋಚನೆ ಮಾಡಿಲ್ಲ ಎಂದು ಸರ್ದಾರ್ ಬಾಷಾ, ರವಿಶಂಕರ್ ಬಾಬು ದೂರಿದರು.ನಿಯಮಗಳನ್ನು ಉಲ್ಲಂಘಿಸಿದ ಬಜೆಟ್ ಮಂಡಿಸಿದ್ದರೆ ತಮ್ಮ ವಿರೋಧವಿದೆ ಎಂದು ರವಿಶಂಕರ್‌ಬಾಬು ತಿಳಿಸಿದರು.ಈ ಬಗ್ಗೆ ಸ್ಪಷ್ಟನೆ ನೀಡಿದ ಪೌರಾಯುಕ್ತ ವಿಜಯಕುಮಾರ್, ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ. ತೆರಿಗೆ ಹೆಚ್ಚಿಸುವುದಾದರೆ ಸಾರ್ವಜನಿಕರ ಜತೆ ಸಮಾಲೋಚಿಸಬೇಕಾಗುತ್ತದೆ. ತೆರಿಗೆಗಳ ಬಗ್ಗೆ ಸರ್ಕಾರವೇ ನಿರ್ಧಾರ ಕೈಗೊಳ್ಳುವುದರಿಂದ ಸಂಘ- ಸಂಸ್ಥೆಗಳ ಜತೆ ಸಮಾಲೋಚಿಸಿಲ್ಲ. ಬಜೆಟ್ ಮಂಡಿಸುವ ಮುನ್ನ ಸದಸ್ಯರ ಪೂರ್ವಭಾವಿ ಸಭೆ ಕರೆಯಲಾಗಿದೆ  ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.