ಮಂಗಳವಾರ, ನವೆಂಬರ್ 12, 2019
19 °C

ರೆಕ್ಕೆ ಬಿಚ್ಚಲಿದೆ `ಜಟಾಯು'

Published:
Updated:

`ನನ್ನ ಚಿತ್ರದಲ್ಲಿ ಆಕ್ಷನ್, ಲವ್, ಸೆಂಟಿಮೆಂಟ್ ಎಲ್ಲಾ ಇದೆ. ನೂರು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇಲ್ಲಿ ಬಿಡುಗಡೆಯಾದ 15 ದಿನಗಳ ನಂತರ ತೆಲುಗಿನ `ಜಟಾಯು' ಬಿಡುಗಡೆಯಾಗಲಿದೆ...'ರಾಜ್ ಅವರ ಮಾತುಗಳಲ್ಲಿ ತಮ್ಮ ಚಿತ್ರದ ಬಗ್ಗೆ ಅಪರಿಮಿತ ಆತ್ಮವಿಶ್ವಾಸ ಇದ್ದಂತಿತ್ತು. ಅವರು `ಜಟಾಯು' ಚಿತ್ರದ ನಿರ್ದೇಶಕ ಮತ್ತು ನಾಯಕ. ಅಂದಹಾಗೆ, ಏ. 26ರಂದು ಚಿತ್ರ ಬಿಡುಗಡೆ ಮಾಡಲು ತಂಡ ನಿರ್ಧರಿಸಿದೆ.ಸುರಭಿ `ಜಟಾಯು'ವಿನ ನಾಯಕಿ. ಚಿತ್ರದಲ್ಲಿ ತಮ್ಮ ವಯಸ್ಸಿಗೆ ಮೀರಿದ ಪಾತ್ರ ನಿರ್ವಹಿಸಿರುವುದಾಗಿ ಅವರು ಹೇಳಿದರು. `ನನ್ನ ತಾಯಿ ಕೂಡ ಈ ಪಾತ್ರವನ್ನುಆಕ್ಷೇಪಿಸಿದರು. ಆದರೆ ನಾನು ನಿರ್ವಹಿಸಿದೆ. `ದುಷ್ಟ' ಚಿತ್ರದ ನಂತರ ನನಗೆ ಸಿಕ್ಕಿದ ಗಂಭೀರ ಪಾತ್ರ ಇದು. ಅದು ತುಂಬಾ ಒತ್ತಡ ನೀಡಿತ್ತು. ಆದರೂ ನಿಭಾಯಿಸಿದ ತೃಪ್ತಿ ಇದೆ' ಎಂದರು.ನಿರ್ಮಾಪಕ ಪ್ರಭಾಕರ್, ಈ ಮುಂಚೆ ಎರಡು ಬಾರಿ ಚಿತ್ರ ಬಿಡುಗಡೆಯ ದಿನಾಂಕ ಯೋಚಿಸಿ ಕೈಬಿಟ್ಟರಂತೆ. ಅದಕ್ಕೆ ಕಾರಣ ಒಳ್ಳೆಯ ಥಿಯೇಟರ್ ಸಿಗದೇ ಇರುವುದು. ಇದೀಗ ಉತ್ತಮ ಥಿಯೇಟರ್‌ಗಳು ಸಿಕ್ಕಿರುವುದು ಅವರಲ್ಲಿ ಹುಮ್ಮಸ್ಸು ತುಂಬಿದೆ.ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು ಚಿತ್ರದ ಆಕ್ಷನ್ ಸನ್ನಿವೇಶಗಳನ್ನು ನೆನಪಿಸಿಕೊಂಡು, ಕೆಸರು ಗದ್ದೆಯಲ್ಲಿ ತೆಗೆದ ಫೈಟನ್ನು ಮೆಚ್ಚಿಕೊಂಡರು. ಸಂಗೀತ ನಿರ್ದೇಶಕ ವಿನಯ್ ಚಂದ್ರ ಅವರಿಗೆ ಚಿತ್ರದ ಸಂಗೀತಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ಖುಷಿ ನೀಡಿದೆ. 

ಪ್ರತಿಕ್ರಿಯಿಸಿ (+)