ಮಂಗಳವಾರ, ಜೂನ್ 22, 2021
29 °C
ಹನ್ನೊಂದೂವರೆ ತಿಂಗಳ ಬಳಿಕ ಸಿಕ್ಕಿ ಬಿದ್ದ ಆರೋಪಿಗಳು

ರೆಕ್ಟರ್‌ ಥಾಮಸ್‌ ಕೊಲೆ ಪ್ರಕರಣ: ಮೂವರ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಾರ್ವಜನಿಕವಾಗಿ ಸಂಚಲನ ಸೃಷ್ಟಿಸಿದ್ದ ಮಲ್ಲೇಶ್ವರದ ಸೇಂಟ್ ಪೀಟರ್ಸ್‌ ಪೊಂಟಿಫಿಕಲ್ ಸೆಮಿನರಿಯ ರೆಕ್ಟರ್ (ಮುಖ್ಯಸ್ಥ) ಕೆ.ಜೆ.ಥಾಮಸ್ (62) ಕೊಲೆ ಪ್ರಕರಣ ಸಂಬಂಧ ಚರ್ಚ್‌ಗಳ ಫಾದರ್‌ಗಳು ಸೇರಿದಂತೆ ಮೂವರನ್ನು ನಗರ ಪೊಲೀಸರು ಬಂಧಿಸಿದ್ದಾರೆ.ಸಾಕಷ್ಟು ಕಗ್ಗಂಟಾಗಿದ್ದ ಈ ಪ್ರಕರಣವನ್ನು ಕೊಲೆ ನಡೆದ ಹನ್ನೊಂದೂವರೆ ತಿಂಗಳ ಬಳಿಕ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

‘ಗುಲ್ಬರ್ಗದ ನವಚೇತನ ಚರ್ಚ್‌ನ ಫಾದರ್ ಇಲಿಯಾಸ್ (44), ಕೆಂಗೇರಿಯ ಸಂತ ಫ್ರಾನ್ಸಿಸ್‌ ಚರ್ಚ್‌ನ ಫಾದರ್‌ ವಿಲಿಯಂ ಪ್ಯಾಟ್ರಿಕ್‌ (45) ಮತ್ತು ಅವರ ಸಹಚರ ಪೀಟರ್‌ (22) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಬೈಕ್ ಹಾಗೂ ಮೊಬೈಲ್‌ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌ ತಿಳಿಸಿದರು.ವರ್ಗಾವಣೆ ನಂತರ ದ್ವೇಷ ಹೆಚ್ಚಿತು

‘ಮೂಲತಃ ಮಂಡ್ಯದ ಇಲಿಯಾಸ್,  ನಗರದ ವಿವಿಧ ಚರ್ಚ್‌ಗಳಲ್ಲಿ ಈ ಹಿಂದೆ ಫಾದರ್‌ ಆಗಿ ಕೆಲಸ ಮಾಡಿದ್ದರು. ಕನ್ನಡ ಪರ ಚಳವಳಿಗಳಲ್ಲಿ ತೊಡ­ಗಿಸಿ­ಕೊಂಡಿದ್ದ  ಅವರನ್ನು ಆರ್ಚ್‌ ಬಿಷಪ್‌  ಅವರು ಎರಡು ವರ್ಷಗಳ ಹಿಂದೆ ಗುಲ್ಬರ್ಗದ ನವಚೇತನ ಚರ್ಚ್‌ಗೆ ವರ್ಗಾವಣೆ ಮಾಡಿದ್ದರು’ ಎಂದು ತನಿಖಾಧಿ­ಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ್ದಾರೆ.ಮೊದಲಿ­ನಿಂದಲೂ ಥಾಮಸ್‌ ಅವರ ಆಡ­ಳಿತ ವೈಖರಿಯನ್ನು ದ್ವೇಷಿಸುತ್ತಿದ್ದ ಇಲಿ­ಯಾಸ್, ವರ್ಗಾವಣೆ ನಂತರ ಥಾಮಸ್‌ ಅವರನ್ನು ಮತ್ತಷ್ಟು ದ್ವೇಷಿಸ­ಲಾರಂಭಿಸಿದ್ದರು. ಕೊಲೆ ಮಾಡಿ ದಾಖಲೆಪತ್ರಗಳನ್ನು ಕಳವು ಮಾಡಲು ಸಂಚು ರೂಪಿಸಿ ಕೃತ್ಯಕ್ಕೆ ಪ್ಯಾಟ್ರಿಕ್‌ನ ನೆರವು ಕೇಳಿದರು. ಜತೆಗೆ ತಾನೇ ಸಾಕಿ ಬೆಳೆಸಿದ ಪೀಟರ್‌ನನ್ನು ಕೃತ್ಯದಲ್ಲಿ ತೊಡಗಿಸಿಕೊಂಡರು ಎಂದು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.