ಸೋಮವಾರ, ಮೇ 17, 2021
26 °C
ಚೆಲ್ಲಾಪಿಲ್ಲಿ

ರೆಡಿ ಟು ಡ್ರಿಂಕ್ ವಿಭಾಗಕ್ಕೆ ರಸ್ನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೆಡಿ ಟು ಡ್ರಿಂಕ್ ವಿಭಾಗಕ್ಕೆ ರಸ್ನಾ

ನ್‌ಸ್ಟಂಟ್ ಪಾನೀಯ ಪುಡಿ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ರಸ್ನಾ ಇದೀಗ ನೇರವಾಗಿ ಕುಡಿಯಬಹುದಾದ ತಂಪುಪಾನೀಯ ವರ್ಗಕ್ಕೆ ಪ್ರವೇಶ ಪಡೆದಿದೆ. ಮಾವು, ಸೇಬು, ಕಿತ್ತಳೆ ಹಾಗೂ ಮಿಶ್ರಫಲದ ಸ್ವಾದದಲ್ಲಿ ಲಭ್ಯವಿರುವ ರಸ್ನಾ ತನ್ನ ಪೇಯಕ್ಕೆ `ಜೂ-ಸಿ' ಎಂದು ನಾಮಕರಣ ಮಾಡಿದೆ.

ನೈಸರ್ಗಿಕ ಸವಿರುಚಿಯೊಂದಿಗೆ ಪೌಷ್ಟಿಕಾಂಶ ಮೌಲ್ಯಗಳನ್ನು ಒಳಗೊಂಡಿರುವ ರಸ್ನಾ ಜೂ-ಸಿ ಗ್ರಾಹಕರು ನೀಡುವ ಹಣಕ್ಕೆ ತಕ್ಕ ಪೇಯ ಎಂದು ತಿಳಿಸಿದ್ದು ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.ರಸ್ನಾ ಬ್ರೀವರೀಸ್‌ನಿಂದ ಬಿಡುಗಡೆಯಾಗುತ್ತಿರುವ ರಸ್ನಾ ಜೂ-ಸಿಯನ್ನು ಆರೋಗ್ಯಕರ ಹಾಗು ಮೋಜಿನ ಪಾನೀಯವನ್ನಾಗಿ ಪರಚಯಿಸಲಾಗುತ್ತಿದೆ ಎಂದಿರುವ ಸಂಸ್ಥೆಯ ಸಿಎಂಡಿ ಪುರಜ್ ಖಂಭಟ್ಟ ಇದರ ಬೆಲೆಯನ್ನು 250 ಮಿಲೀ ಬಾಟಲಿ ಪಾನೀಯಕ್ಕೆರೂ 18, 1ಲೀ ಬಾಟಲಿಯ ಮಾವಿನ ಪೇಯಕ್ಕೆರೂ 65, ಕಿತ್ತಳೆ ಹಾಗೂ ಮಿಶ್ರಫಲದ ಪಾನೀಯಕ್ಕೆರೂ 75 ಎಂದು ಕಂಪೆನಿ ನಗದಿಪಡಿಸಿದೆ ಎಂದಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.