ರೆಡ್ಡಿಗೆ ವಾರೆಂಟ್ ಇಲ್ಲ- ಹೈಕೋರ್ಟ್ ಕಿಡಿ

ಬುಧವಾರ, ಜೂಲೈ 17, 2019
24 °C

ರೆಡ್ಡಿಗೆ ವಾರೆಂಟ್ ಇಲ್ಲ- ಹೈಕೋರ್ಟ್ ಕಿಡಿ

Published:
Updated:

ಬೆಂಗಳೂರು: `ಐದೂವರೆಗೆ ತಿಂಗಳು ಕಳೆದರೂ ಒಬ್ಬ ಸಚಿವರನ್ನು ಹುಡುಕಲು ಪೊಲೀಸರಿಗೆ ಸಾಧ್ಯವಾಗಲಿಲ್ಲವೇ, ನಮಗಂತೂ ಬಹಳ ಆಶ್ಚರ್ಯವಾಗುತ್ತಿದೆ. ಬಹುಶಃ ಇದು ಕರ್ನಾಟಕದಲ್ಲಿ ಮಾತ್ರ ಸಾಧ್ಯ ಎನಿಸುತ್ತದೆ..~- ಅಕ್ರಮ ಗಣಿಗಾರಿಕೆ, ಗಡಿ ಗುರುತು ನಾಶ ಇತ್ಯಾದಿ ಪ್ರಕರಣಗಳಲ್ಲಿ ಬಳ್ಳಾರಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಿಂದ ಜಾರಿಯಾಗಿರುವ ವಾರೆಂಟ್ ಅನ್ನು ಸಚಿವ ಬಿ.ಜನಾರ್ದನ ರೆಡ್ಡಿ ಅವರಿಗೆ ತಲುಪಿಸಲು ವಿಫಲವಾದ ಸರ್ಕಾರದ ಕ್ರಮಕ್ಕೆ ಶುಕ್ರವಾರ ಈ ರೀತಿ ಮಾತಿನ ಚಾಟಿ ಬೀಸಿದ್ದು ಹೈಕೋರ್ಟ್.

`ರೆಡ್ಡಿ ಅವರಿಗೆ ಒಂಬತ್ತು ಬಾರಿ ವಾರೆಂಟ್ ಜಾರಿಯಾಗಿದೆ. ಆದರೆ ಪ್ರತಿ ಬಾರಿಯೂ ಅದನ್ನು ಅವರು ಸ್ವೀಕರಿಸುತ್ತಿಲ್ಲ. ಇದು ಕಾನೂನಿನ ಉಲ್ಲಂಘನೆಯಾಗಿದೆ.

 

ಈ ರೀತಿಯ ಕ್ರಮವು ಕಾನೂನಿನ ಅಡಿ ಶಿಕ್ಷಾರ್ಹವಾಗಿದೆ~ ಎಂದು ವಕೀಲ ಜಿ.ಆರ್.ಮೋಹನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸಿತು.ಸರ್ಕಾರದ ಮೌನ:ರೆಡ್ಡಿ ಅವರಿಗೆ ವಾರೆಂಟ್ ಜಾರಿಯಾಗದ ಕುರಿತು ಸರ್ಕಾರದ ಪರ ವಕೀಲರಿಗೆ ಪೀಠ ಕೇಳಿದ ಪ್ರಶ್ನೆಗೆ ಉತ್ತರಿಸಲು ವಿಫಲರಾದರು.ವಾರೆಂಟ್ ಜಾರಿಯಾದ ಬಗ್ಗೆ ತಮಗೆ ಆದೇಶ ಪ್ರತಿ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಅದನ್ನು ಜಾರಿ ಮಾಡಲು ಆಗಿಲ್ಲ ಎಂಬ ಸಮಜಾಯಿಷಿ ನೀಡಲು ವಕೀಲರು ಮುಂದಾದಾಗ, ನ್ಯಾ. ಕೇಹರ್ ಅವರು `ಏನು? ಏನಿದು ವಿಚಿತ್ರ, ವಾರೆಂಟ್ ಜಾರಿ ಮಾಡಲು ನಿಮಗೆ ಆದೇಶದ ಪ್ರತಿ ಬೇಕೆ, ಅದೂ ಒಂಬತ್ತು ಬಾರಿ ಅವರಿಗೆ ಅದು ಜಾರಿಗೊಂಡಿಲ್ಲ. ಅವರೇನು ತಲೆಮರೆಸಿಕೊಂಡು ಹೋಗಿದ್ದಾರಾ~ ಎಂದು ಪ್ರಶ್ನಿಸಿದರು.

ರೆಡ್ಡಿ ಅವರಿಗೆ ಹೊರಡಿಸಿರುವ ವಾರೆಂಟ್‌ಗಳನ್ನು ಸೆಷನ್ಸ್ ಕೋರ್ಟ್ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಈ ಅರ್ಜಿಗೆ ಮಾನ್ಯತೆ ಇಲ್ಲ ಎಂದು ಸರ್ಕಾರದ ಪರ ವಕೀಲರು ಹೇಳಿದರು. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಪೀಠ ವಜಾ ಮಾಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry