ರೆಡ್ಡಿ ಕುಟುಂಬಕ್ಕೆ ಕಾರು ಮರಳಿಸಿದ ಸಿಬಿಐ

7

ರೆಡ್ಡಿ ಕುಟುಂಬಕ್ಕೆ ಕಾರು ಮರಳಿಸಿದ ಸಿಬಿಐ

Published:
Updated:

ಬಳ್ಳಾರಿ: ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಬಂಧನದ ಸಂದರ್ಭ ವಶಪಡಿಸಿಕೊಳ್ಳಲಾಗಿದ್ದ 5.25 ಕೋಟಿ ಮೌಲ್ಯದ ರೋಲ್ಸ್‌ರಾಯ್ ಕಾರನ್ನು ಸಿಬಿಐ ಸಿಬ್ಬಂದಿ ಗುರುವಾರ ರೆಡ್ಡಿ ಅವರ ಕುಟುಂಬ ಸದಸ್ಯರಿಗೆ ಮರಳಿ ನೀಡಿದರು.2011ರ ಸೆಪ್ಟೆಂಬರ್ 5ರಂದು ಜನಾರ್ದನರೆಡ್ಡಿ ಅವರನ್ನು ಬಂಧಿಸಿದ ಬಳಿಕ, ಕೋಟ್ಯಂತರ ರೂಪಾಯಿ ನಗದು, ಚಿನ್ನಾಭರಣ, ಬೆಲೆ ಬಾಳುವ ಕಾರ್, ಬಸ್, ಹೆಲಿಕಾಪ್ಟರ್ ಮತ್ತಿತರ ವಾಹನಗಳನ್ನು ವಶಪಡಿಸಿಕೊಂಡಿದ್ದ ಸಿಬಿಐ, ರೆಡ್ಡಿ ಕುಟುಂಬದವರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ ಗುರುವಾರ ರೋಲ್ಸ್‌ರಾಯ್ ಕಾರ್ ಮರಳಿಸಿದರು.ಬಿಎಂಡಬ್ಲ್ಯೂ ಮತ್ತು ರೋಲ್ಸ್‌ರಾಯ್ ಕಾರ್‌ಗಳ ಬೀಗದ ಕೈ ತನ್ನ ವಶಕ್ಕೆ ತೆಗೆದುಕೊಂಡಿದ್ದ ಸಿಬಿಐ, ಆ ವಾಹನಗಳನ್ನು ರೆಡ್ಡಿ ಅವರ ನಿವಾಸದ ಆವರಣದಲ್ಲೇ ಇರಿಸಿದ್ದರು.ಗುರುವಾರ ಕೌಲ್‌ಬಝಾರ್ ಪೊಲೀಸ್ ಠಾಣೆ ಸಿಪಿಐ ವೈ.ಡಿ. ಅಗಸೀಮನಿ, ಪಿಎಸ್‌ಐ ಮಹಮ್ಮದ್ ಗೌಸ್ ಅವರೊಂದಿಗೆ ಹವಂಭಾವಿಯಲ್ಲಿನ ರೆಡ್ಡಿ ನಿವಾಸಕ್ಕೆ ತೆರಳಿದ ಸಿಬಿಐ ಇನ್ಸ್‌ಪೆಕ್ಟರ್ ನಂದಕುಮಾರ್ ನೇತೃತ್ವದ ತಂಡ ಮನೆಯವರಿಗೆ ಒಂದು ಕಾರ್‌ನ ಬೀಗದ ಕೈ ವಾಪಸ್ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry