ಶುಕ್ರವಾರ, ನವೆಂಬರ್ 15, 2019
24 °C

ರೆನಾಲ್ಟ್ ಹೊಸ ಕಾರು

Published:
Updated:

ನವದೆಹಲಿ (ಪಿಟಿಐ): ರೆನಾಲ್ಟ್ ಕಂಪೆನಿ ಪ್ರವಾಸ ಉದ್ದೇಶಕ್ಕಾಗಿ ಸೆಡಾನ್ `ಸ್ಕಾಲಾ' ಕಾರಿನ ಹೊಸ  ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

`ಸ್ಕಾಲಾ ಆರ್‌ಎಕ್ಸ್‌ಜೆಡ್' ಡೀಸೆಲ್ ಮಾದರಿಗೆ ದೆಹಲಿ ಎಕ್ಸ್‌ಷೋರೂಂ ಬೆಲೆರೂ.9.78 ಲಕ್ಷ. ಈ ಸೀಮಿತ ಕೊಡುಗೆ ಮೇ 31ರವರೆಗೆ ಲಭ್ಯವಿದೆ ಎಂದು ಕಂಪೆನಿ ಹೇಳಿದೆ.ಉಕ್ಕು ಬೇಡಿಕೆ ಹೆಚ್ಚಳ

ನವದೆಹಲಿ (ಪಿಟಿಐ): ದೇಶದ ಉಕ್ಕು ಬೇಡಿಕೆಯು 2012-13ನೇ ಸಾಲಿನಲ್ಲಿ ಶೇ 3.3ರಷ್ಟು ಹೆಚ್ಚಿದ್ದು 733 ಲಕ್ಷ ಟನ್‌ಗಳಿಗೆ ಏರಿಕೆ ಕಂಡಿದೆ.ಜಾಗತಿಕ ಆರ್ಥಿಕ ಅಸ್ಥಿರತೆ, ಹಣದುಬ್ಬರ ಮತ್ತು ಬ್ಯಾಂಕ್ ಬಡ್ಡಿ ದರ ಏರಿಕೆಯಿಂದ ಕಟ್ಟಡ ನಿರ್ಮಾಣ ಕಾಮಗಾರಿ ಕುಸಿದಿದೆ. ಇದು ಒಟ್ಟಾರೆ ಉಕ್ಕಿನ ಬೇಡಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಉಕ್ಕು ಸಚಿವಾಲಯ ಹೇಳಿದೆ. 400 ಲಕ್ಷ ಟನ್ ಇ-ತ್ಯಾಜ್ಯ

ನವದೆಹಲಿ (ಪಿಟಿಐ): ಪ್ರಪಂಚದಾದ್ಯಂತ ವಾರ್ಷಿಕ 400 ಲಕ್ಷ ಟನ್‌ಗಳಷ್ಟು ಎಲೆಕ್ಟ್ರಾನಿಕ್ ತ್ಯಾಜ್ಯ  ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಭಾರತದ ಪಾಲು ಕೇವಲ 0.80 ಲಕ್ಷದಷ್ಟಿದೆ ಎಂದು ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಇಲ್ಲಿ ತಿಳಿಸಿದರು. `ಇ-ತ್ಯಾಜ್ಯ' ನಿರ್ವಹಣೆ ನಿಟ್ಟಿನಲ್ಲಿ ಇನ್ನಷ್ಟು ಪರಿಸರ ಸ್ನೇಹಿ ಕ್ರಮಗಳನ್ನು ಅನುಸರಿಸಬೇಕಿದೆ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)