ಬುಧವಾರ, ಜೂನ್ 23, 2021
30 °C

ರೆಸಾರ್ಟ್‌ನಲ್ಲಿ ಜಾಲಿಯೋ ಜಾಲಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಯಡಿಯೂರಪ್ಪ ಪರವಾಗಿ ರೆಸಾರ್ಟ್‌ಗೆ ತೆರಳಿರುವ ಕೆಲ ಶಾಸಕರು `ಜಾಲಿ ಮೂಡ್~ನಲ್ಲಿದ್ದರೆ ಇನ್ನೂ ಕೆಲವರು ಮಧ್ಯಂತರ ಚುನಾವಣೆಯ ಭೀತಿಯಲ್ಲಿದ್ದಾರೆ. ಮತ್ತೆ ಮುಖ್ಯಮಂತ್ರಿ ಆಗಲೇಬೇಕೆಂದು ಯಡಿಯೂರಪ್ಪ ಅವರು ತಮ್ಮ ಬೆಂಬಲಿಗ ಸಚಿವರು ಮತ್ತು ಶಾಸಕರ ಜತೆ ನೆಲಮಂಗಲ ಸಮೀಪದ ಗೋಲ್ಡನ್ ಪಾಮ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದು, ಅಲ್ಲಿ ಒಂದು ರೀತಿಯ ಸಂಭ್ರಮ... ಮತ್ತೊಂದೆಡೆ ಆತಂಕವೂ ಮನೆ ಮಾಡಿದೆ.`ನಾಯಕರ ಜಗಳ ಅತಿರೇಕಕ್ಕೆ ಹೋಗಿ ಚುನಾವಣೆ ಎದುರಾದರೆ...~ ಎಂಬ ಆತಂಕ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಆದರೆ, ಆ ಬಗ್ಗೆ ಯೋಚನೆ ಮಾಡದಂತೆ ಕೆಲ ಸಚಿವರು, ಶಾಸಕರನ್ನು ಸಮಾಧಾನಪಡಿಸುವ ಮತ್ತು ಸಚಿವ ಸ್ಥಾನದ ಆಮಿಷ ಒಡ್ಡುವ ಕೆಲಸವೂ ರೆಸಾರ್ಟ್‌ನಲ್ಲಿ ನಡೆದಿದೆ.ತುಂಬಾ ಆತಂಕದಲ್ಲಿರುವ ಕೆಲ ಶಾಸಕರನ್ನು ಸಚಿವರನ್ನಾಗಿ ಮಾಡುವ ಭರವಸೆ ಕೊಡುವುದರ ಜತೆಗೆ ಅವರು ಪ್ರತಿನಿಧಿಸುವ ಕ್ಷೇತ್ರಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವುದರ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ. ಈ ಮಾತುಕತೆಗಳ ಮಧ್ಯೆಯೇ ಇನ್ನೂ ಕೆಲ ಶಾಸಕರು ನಿರಾತಂಕವಾಗಿ ಇದ್ದರು.ನಾಯಕರ ತೀರ್ಮಾನವೇ ಅಂತಿಮ ಎಂದು ರೆಸಾರ್ಟ್‌ನಲ್ಲಿ ಆರಾಮವಾಗಿದ್ದರು. ಕೆಲವರು ಇಡೀ ದಿನ ನಿದ್ದೆ ಮಾಡಿದರೆ ಇನ್ನೂ ಕೆಲವರು ಈಜು ಕೊಳದಲ್ಲಿ ಈಜಾಡಿದರು. ಕೆಲವರು ಜಿಮ್‌ಗೆ ಹೋಗಿ ವ್ಯಾಯಾಮ ಮಾಡಿದರು.ಅನಿರೀಕ್ಷಿತವಾಗಿ ರೆಸಾರ್ಟ್‌ನತ್ತ ಪ್ರಯಾಣ ಬೆಳೆಸಿದ್ದು ಕೆಲ ಶಾಸಕರಿಗೆ ಅನಾನುಕೂಲವೂ ಆಗಿದೆ. ಯಡಿಯೂರಪ್ಪ ಅವರು ಸಭೆ ಕರೆದಿದ್ದಾರೆಂದು ಕೈಬೀಸಿಕೊಂಡು ರೇಸ್‌ಕೋರ್ಸ್ ರಸ್ತೆ ಮನೆಗೆ ಹೋಗಿದ್ದ ಶಾಸಕರನ್ನು ಅಲ್ಲಿಂದಲ್ಲೇ ನೇರವಾಗಿ ರೆಸಾರ್ಟ್‌ಗೆ ಕರೆದೊಯ್ಯಲಾಯಿತು. ಹೀಗಾಗಿ ಬಟ್ಟೆಬರೆ ಸಮಸ್ಯೆ ಎದುರಾಗಿತ್ತು. ಅಂತಹವರಿಗೆ ಅದರ ವ್ಯವಸ್ಥೆ ಕೂಡ ಮಾಡಲಾಗಿತ್ತು.ಬಿಎಸ್‌ವೈ ನೇತೃತ್ವ: ತಮ್ಮ ಸಲುವಾಗಿ ರೆಸಾರ್ಟ್‌ಗೆ ಬಂದಿರುವ ಶಾಸಕರ ಆತಿಥ್ಯವನ್ನು ಸ್ವತಃ ಯಡಿಯೂರಪ್ಪ ಅವರೇ ವಹಿಸಿಕೊಂಡಿದ್ದಾರೆ. ಇಡೀ ರೆಸಾರ್ಟ್‌ನಲ್ಲಿ ತಮ್ಮ ಕಿರಿಯ ಪುತ್ರ ಬಿ.ವೈ.ವಿಜಯೇಂದ್ರ ಅವರ ಜತೆ ಲವಲವಿಕೆಯಿಂದ ಓಡಾಡಿಕೊಂಡು ಎಲ್ಲರ ಯೋಗಕ್ಷೇಮ ವಿಚಾರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.