ಸೋಮವಾರ, ಜೂನ್ 14, 2021
22 °C

ರೆಸಾರ್ಟ್ ರಾಜಕಾರಣಕ್ಕೆ ಬೆಳಮಗಿ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: `ಇನ್ನು ರೆಸಾರ್ಟ್ ರಾಜಕಾರಣಕ್ಕೆ ಹೋಗುವುದಿಲ್ಲ. ನನ್ನ ಹೇಳಿಕೆಗಾಗಿ ನನ್ನ ಕ್ಷೇತ್ರದ ಹಾಗೂ ರಾಜ್ಯದ ಜನತೆಯ ಕ್ಷಮೆ ಯಾಚಿಸುತ್ತೇನೆ. ವಿರೋಧ ಪಕ್ಷಗಳೂ ಸೇರಿದಂತೆ ಎಲ್ಲರೂ ನನಗೆ ಮಾರ್ಗದರ್ಶನ ಮಾಡಿ...~ -ಪಶು ಸಂಗೋಪನಾ ಮತ್ತು ಗ್ರಂಥಾಲಯ ಸಚಿವ ರೇವು ನಾಯಕ ಬೆಳಮಗಿ ಅವರು ಇತ್ತೀಚಿನ ರಾಜಕೀಯ ಬೆಳವಣಿಗೆ ಮತ್ತು ತಮ್ಮ ಹೇಳಿಕೆಯಿಂದ ನೊಂದು ಜನತೆಯಲ್ಲಿ ಕ್ಷಮೆ ಯಾಚಿಸಿದ್ದು ಹೀಗೆ.`ಕ್ಷೇತ್ರಕ್ಕೆ ಹೋದರೆ ಜನರು ಬರಗಾಲ, ನೀರಿಲ್ಲ, ವಿದ್ಯುತ್ ಇಲ್ಲ ಎಂದು ತಲೆ ತಿನ್ನುತ್ತಾರೆ. ಅವರ ಕಿರಿಕಿರಿಯನ್ನು ಸಹಿಸಲಾರದೆ ರೆಸಾರ್ಟ್‌ಗೆ ಬಂದಿದ್ದೇವೆ~ ಎಂದು ಅವರು ಈ ಹಿಂದೆ ನೀಡಿದ್ದ ಹೇಳಿಕೆ ಕುರಿತು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿದರು.`ಪತ್ರಕರ್ತರ ಜೊತೆ ಮಜಾಕ್ (ತಮಾಷೆ) ಮಾಡ್ಲಿಕ್ ಹೋಗಿ ಹೀಗೆ ಹೇಳಿದ್ದೆ. ಆದರೂ ಸಚಿವ ಸ್ಥಾನದಲ್ಲಿರುವ ನಾನು ಹಾಗೆ ಮಾಡಬಾರದಿತ್ತು...~ ಎಂದು ಸ್ಪಷ್ಟನೆ ನೀಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ನನ್ನನ್ನು ಮಂತ್ರಿ ಮಾಡಿದರು. ಈ ನಿಷ್ಠೆಯಿಂದ ರೆಸಾರ್ಟ್‌ಗೆ ಹೋಗಿದ್ದೇನೆ ಎಂದ ಅವರು, ನನ್ನ ಕ್ಷೇತ್ರದ ಜನತೆ ನಾಲ್ಕು ಬಾರಿ ಆಯ್ಕೆ ಮಾಡಿದ್ದರಿಂದ ಜನಪ್ರತಿನಿಧಿಯಾಗಿದ್ದೇನೆ. ಹಾಗಾಗಿ ಅವರ ಸೇವೆಗೇ ಬದ್ಧನಾಗಿರುತ್ತೇನೆ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.