ರೆಸಾರ್ಟ್ ರಾಜಕೀಯ: ಸಚಿವ ಅಸ್ನೋಟಿಕರ ಬೆದರಿಕೆ

7

ರೆಸಾರ್ಟ್ ರಾಜಕೀಯ: ಸಚಿವ ಅಸ್ನೋಟಿಕರ ಬೆದರಿಕೆ

Published:
Updated:

ಕಾರವಾರ:`ಉಸಿರುಗಟ್ಟಿಸುವ ವಾತಾವರಣ ತಿಳಿಯಾಗಬೇಕು. ಜೂ. 15ರೊಳಗೆ ಸಂಪುಟ ಪುನರ‌್ರಚಿಸಬೇಕು ಮತ್ತು ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ನೀಡಬೇಕು~ ಎಂದು ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ ಆಗ್ರಹಿಸಿದರು.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಕೈಗೊಳ್ಳದೇ ಇದ್ದಲ್ಲಿ ಪುನಃ ರೆಸಾರ್ಟ್ ರಾಜಕೀಯ ಪ್ರಾರಂಭಿಸಬೇಕಾಗುತ್ತದೆ ಎಂದರು.~ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಎಮ್.ಡಿ.ಲಕ್ಷ್ಮಿನಾರಾಯಣ ಮಾಡಿರುವ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನವಿಯ ಮೇರೆಗೆ ಬಿಜೆಪಿ ಪಕ್ಷಕ್ಕೆ ಬಂದಿದ್ದೇನೆ~ ಎಂದರು.~ಕಮಲದ ಪಾಳಯಕ್ಕೆ ಬರುವಾಗ ಯಾರೂ ನನಗೆ ಹಣ ನೀಡಿಲ್ಲ. ನಾನೂ ಯಾರಿಂದಲೂ ಒಂದು ಪೈಸೆಯನ್ನೂ ಪಡೆಯಲಿಲ್ಲ. ಈ ಬಗ್ಗೆ ದೇವರ ಮೇಲೆ ಪ್ರಮಾಣ ಮಾಡಲು ನಾನು ಸಿದ್ಧ~ ಎಂದು ಸಚಿವ ಅಸ್ನೋಟಿಕರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry