ಮಂಗಳವಾರ, ಅಕ್ಟೋಬರ್ 15, 2019
29 °C

ರೆಹಮಾನ್ ಗೀಗ 46ರ ಸಂಭ್ರಮ

Published:
Updated:

ನವದೆಹಲಿ (ಐಎಎನ್ಎಸ್): ಸಿನಿಮಾ ಸಂಗೀತ ಸಂಯೋಜನೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಹಾಗೂ ಅದಕ್ಕಾಗಿ ಆಸ್ಕರ್ ಪ್ರಶಸ್ತಿಗೆ ಭಾಜನರಾದ, ಖ್ಯಾತ ಸಿನಿಮಾ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರು ಶುಕ್ರವಾರ 46ನೆ ವಸಂತಕ್ಕೆ ಕಾಲಿರಿಸುತ್ತಿದ್ದಾರೆ. ಜನ್ಮದಿನಕ್ಕೆ ಶುಭಾಶಯಗಳನ್ನು ಕೋರಿರುವ ವಿಶ್ವದಾದ್ಯಂತ ಇರುವ ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿರುವ ಅವರು ತಮ್ಮ ಜನ್ಮದಿನಾಚರಣೆಯನ್ನು ವಿದೇಶದಲ್ಲಿ ಆಚರಿಸಿಕೊಂಡು ಸಂಭ್ರಮಿಸುತ್ತಿದ್ದಾರೆ. 

~ಹಾಯ್, ಇದು ರೆಹಮಾನ್,  ನಿಮಗೆ 2012ರ ನೂತನ ವರ್ಷದ ಶುಭಾಶಯಗಳು. ನನ್ನ ಜನ್ಮದಿನಾಚರಣೆಗೆ ಶುಭಾಶಯಗಳನ್ನು ಕೋರಿರುವ ನಿಮಗೆ ಧನ್ಯವಾದಗಳು. ಈ ಬಾರಿ ನಾನು ಚೆನ್ನೈನಲ್ಲಿ ಇರಬೇಕಾಗಿತ್ತು. ನಾನೀಗ ವಿದೇಶ ಪ್ರವಾಸದಲ್ಲಿದ್ದೇನೆ. ಎಲ್ಲರಿಗೂ ದೇವರು ಒಳ್ಳೆಯದನ್ನು ಮಾಡಲಿ~ ಎಂದು ರೆಹಮಾನ್ ತಮ್ಮ ಟ್ವಿಟ್ಟರ್ ನಲ್ಲಿ  ಹೇಳಿಕೊಂಡಿದ್ದಾರೆ. ರೆಹಮಾನ್ ಅವರು ಜನವರಿ 20ರಿಂದ ಮುಂಬೈ ನಿಂದ ಆರಂಭಿಸಿ ದೆಹಲಿ, ಚೆನ್ನೈ, ಕೊಲ್ಕತ್ತಾ ಹಾಗೂ ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. 

 

 

Post Comments (+)