ಭಾನುವಾರ, ಜೂನ್ 20, 2021
21 °C

ರೇಖಲಗೆರೆ: ಸಂಭ್ರಮದ ಸುಭಾನ್ ಸ್ಮರಣೆಯ ಗ್ಯಾರವಿ ಹಬ್ಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯೂರು: ವಿಶ್ವಬ್ಯಾಂಕ್ ಆರ್ಥಿಕ ನೆರವಿನ ಸಮುದಾಯ ಆಧಾರಿತ ಕೆರೆ ನಿರ್ವಹಣೆ, ಜಲಸಂವರ್ಧನೆ ಯೋಜನೆ ಯನ್ನು  ಸಮುದಾಯ ಆಧಾರಿತ ಕೆರೆ ಬಳಕೆದಾರರ ಸಂಘಗಳ ಮೂಲಕ ಪುನಶ್ಚೇತನ ಗೊಳಿಸುವ ಕಾರ್ಯಕ್ರಮ ಮುಂದುವರಿಸುವಂತೆ ಸಮುದಾಯ ಆಧಾರಿತ ಕೆರೆ ಬಳಕೆದಾರರ ಸಂಘದ ಸದಸ್ಯರು ಸೋಮವಾರ ತಹಶೀಲ್ದಾರರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.ಮೇ 31ಕ್ಕೆ ಸದರಿ ಯೋಜನೆಗೆ ವಿಶ್ವಬ್ಯಾಂಕಿನ ನೆರವು ಸ್ಥಗಿತಗೊಳ್ಳಲಿದೆ. ಸದರಿ ಯೋಜನೆ ಅಡಿಯಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ 28 ಕೆರೆಗಳಿಗೆ ಅನುಷ್ಠಾನಗೊಳಿಸಿ ಅಂತರ್ಜಲ ಅಭಿವೃದ್ಧಿ, ಕೃಷಿ ಅಭಿವೃದ್ಧಿ, ಮೀನುಗಾರಿಕೆ, ಅರಣ್ಯ ಅಭಿವೃದ್ಧಿ, ಸಮುದಾಯ ಆರ್ಥಿಕಮಟ್ಟ ಅಭಿವೃದ್ಧಿಯನ್ನು ಕೆರೆ ಬಳಕೆದಾರರ ಸಂಘಗಳ ಮೂಲಕ ಅನುಷ್ಠಾನಗೊಳಿಸಲಾಗಿದೆ.ಕೆರೆ ಪುನಶ್ಚೇತನ ಕಾರ್ಯಕ್ರಮಗಳಾದ ಕೆರೆ ಏರಿ ಅಭಿವೃದ್ಧಿ, ಕೆರೆ ಒತ್ತುವರಿ ತಡೆಯಲು ಗಡಿಕಂದಕ, ಪೋಷಕ ಕಾಲುವೆ, ಕೆರೆ ಅಂಗಳದಲ್ಲಿನ ಹೂಳು ತೆಗೆಯುವುದು, ತೂಬು-ಕೋಡಿ ದುರಸ್ತಿ, ಜತೆಗೆ ಮಹಿಳಾ ಸಂಘಗಳಿಗೆ ಸುತ್ತುನಿಧಿ, ಕೈತೋಟ ಕಾರ್ಯಕ್ರಮ, ಕೆರೆ ಅಂಗಳದಲ್ಲಿ ಕೃಷಿ ಮತ್ತು ಅರಣ್ಯೀಕರಣ ಮೊದಲಾದ ಕಾಮಗಾರಿಗಳನ್ನು ಕೆರೆ ಬಳಕೆದಾರರ ಸಂಘಗಳ ಮೂಲಕ ಅನುಷ್ಠಾನಗೊಳಿಸಲಾಗಿದೆ. ಪ್ರಯುಕ್ತ ಸರ್ಕಾರ ಈ ಯೋಜನೆಯನ್ನು ಮುಂದುವರಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.ಮುಂದಿನ ದಿನಗಳಲ್ಲಿ ಕೆರೆಗಳ ಉಸ್ತುವಾರಿ ಮತ್ತು ನಿರ್ವಹಣೆ ಮಾಡಿಕೊಂಡು ಹೋಗಲು, ಕೆರೆ ಆಧಾರಿತ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಜಲಸಂವರ್ಧನೆ ಯೋಜನೆ ಅಗತ್ಯವಿದ್ದು, ಕೆರೆ ಬಳಕೆದಾರರ ಸಂಘಗಳ ಮೂಲಕ ಯೋಜನೆಯನ್ನು ಮುಂದುವರಿಸಬೇಕು ಎಂದು ಕೆರೆ ಬಳಕೆದಾರರ ಒಕ್ಕೂಟದ ಪದಾಧಿಕಾರಿಗಳು ಮತ್ತು ಸದಸ್ಯರು ಒತ್ತಾಯ ಮಾಡಿದರು.ಈ ಸಂದರ್ಭದಲ್ಲಿ ತಾಲ್ಲೂಕಿನ ವಿವಿಧ ಕೆರೆ ಬಳಕೆದಾರರ ಸಂಘಗಳ ಭೋಜರಾಜು, ಜಿ. ಕರಿಯಣ್ಣ, ಟಿ. ರಾಮಚಂದ್ರಪ್ಪ, ಬಿ. ನಾಗರಾಜಪ್ಪ, ಮುಂಡಪ್ಪ, ಶಿವಣ್ಣ, ಸದಾಶಿವಯ್ಯ, ಮೂಡ್ಲಪ್ಪ, ಎಸ್.ಭೂತೇಶ್, ಕಾಂತೇಶ್ವರ, ಕೆ. ಓಬಣ್ಣ, ಮಂಜಣ್ಣ, ಪಾಂಡುರಂಗಪ್ಪ, ಹೊನ್ನೂರಪ್ಪ, ಎನ್. ದೇವೇಗೌಡ, ಜಿ.ಕೆ. ಜಯರಾಮಪ್ಪ, ಪಿ. ಜಯಣ್ಣ, ಜಿ. ಗಿರಿಸ್ವಾಮಿ, ಎಂ. ಸತೀಶ್, ಪುಟ್ಟರಂಗನಾಯಕ, ಟಿ.ಎಸ್. ನಾಗರಾಜಪ್ಪ, ಬಿ.ಕೆ. ಲಿಂಗಣ್ಣ, ಶಿವಪ್ರಕಾಶ್, ಶ್ರೀರಂಗಪ್ಪ, ಕೆ. ತಿಪ್ಪೇಸ್ವಾಮಿ ಇತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.