ರೇಜರ್, ಗುಲಾಬಿಯ ಎದೆಗಾರಿಕೆ

ಭಾನುವಾರ, ಮೇ 26, 2019
26 °C

ರೇಜರ್, ಗುಲಾಬಿಯ ಎದೆಗಾರಿಕೆ

Published:
Updated:
ರೇಜರ್, ಗುಲಾಬಿಯ ಎದೆಗಾರಿಕೆ

`ಆ ದಿನಗಳು~ ಗುಂಗಿನಿಂದ ನಿರ್ದೇಶಕಿ ಸುಮನಾ ಕಿತ್ತೂರು ಇನ್ನೂ ಹೊರಬಂದಿರಲಿಲ್ಲ. `ಎದೆಗಾರಿಕೆ~ ಚಿತ್ರದ  ಹೆಸರಿನ ಬದಲು `ಆ ದಿನಗಳು~ ಎಂದರು. ಅವರು ಹಾಗೆನ್ನಲು `ಆ ದಿನಗಳು~ ವರ್ಚಸ್ಸು ಕಾರಣವಂತೆ. ಆದರೆ ಅದರ ಕತೆಗೂ ಎದೆಗಾರಿಕೆಯ ಕತೆಗೂ ಭಿನ್ನತೆ ಇದೆಯಂತೆ. ಅಲ್ಲಿನ ಕೆಲವು ಪಾತ್ರಗಳೇ ಇಲ್ಲಿ ಮೂಡಿ ಬಂದರೂ ಅವು ಬಹಳಷ್ಟು ಮಾಗಿವೆಯಂತೆ.ಅಗ್ನಿ ಶ್ರೀಧರರ ಎದೆಗಾರಿಕೆ ಕೃತಿಯಲ್ಲಿ ಬರುವ ಸೋನ ಎಂಬ ಪಾತ್ರದ ಸುತ್ತ ಚಿತ್ರದ ಕತೆ ಹೆಣೆದುಕೊಂಡಿದೆ. ಚಂದ್ರಶೇಖರ ಕಂಬಾರ, ದೇವನೂರು ಮಹದೇವ ಮುಂತಾದ ಸಾಹಿತಿಗಳು ಕೃತಿಯನ್ನು ಚಿತ್ರ ಮಾಡಲು ಪ್ರೋತ್ಸಾಹಿಸಿದ್ದು, ಹಿರಿಯ ರಂಗ ನಿರ್ದೇಶಕ ಸಿ. ಬಸವಲಿಂಗಯ್ಯ ಎದೆಗಾರಿಕೆಯನ್ನು ರಂಗರೂಪಕ್ಕಿಳಿಸಿದ್ದು ಚಿತ್ರಕ್ಕೆ ಮೂಲ ಪ್ರೇರಣೆ.ಹಾಗೆಂದು ಪುಸ್ತಕದಲ್ಲಿರುವ ಎಲ್ಲಾ ಕತೆಯೂ ಚಿತ್ರದಲ್ಲಿಲ್ಲ, ಬದಲಿಗೆ ಅದರ ಆಶಯವನ್ನು ಹಾಗೆಯೇ ಇಟ್ಟುಕೊಂಡು ಸುತ್ತಲೂ ಹೊಸತೊಂದು ಕಟ್ಟಡ ಕಟ್ಟಲಾಗಿದೆಯಂತೆ.`ಎದೆಗಾರಿಕೆ~ಯನ್ನು ಚಿತ್ರವಾಗಿ ತರಬೇಕು ಎಂದುಕೊಂಡವರಲ್ಲಿ ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಕೂಡ ಒಬ್ಬರು. ನಾಲ್ಕೈದು ವರ್ಷಗಳ ಹಿಂದೆಯೇ ಈ ಬಗ್ಗೆ ಅವರಿಗೆ ಹೊಳೆದಿತ್ತಂತೆ. ಶ್ರೀಧರ್ ಬಳಗವೇ ಅದನ್ನು ತರುತ್ತಿರುವುದು ತಿಳಿದು ಖುಷಿಯಾಯಿತಂತೆ. ಕನ್ನಡದಲ್ಲಿ ಕತೆಯಿಲ್ಲ ಎನ್ನುವವರು ಇಂಥ ಪುಸ್ತಕಗಳನ್ನು ಓದಬೇಕು ಎನ್ನುವುದು ಅವರ ಮಾತು.`ಎದೆಗಾರಿಕೆ~ಗೆ ಅವಕಾಶ ದೊರೆತಾಗ ನಟ ಆದಿತ್ಯ `ವಿಲನ್~ ಚಿತ್ರದಲ್ಲಿ ಮಗ್ನರಾಗಿದ್ದರು. ಸಕಲೇಶಪುರದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಸೋನಾ ಪಾತ್ರವನ್ನು ನಿರ್ವಹಿಸಬೇಕಿದೆ ಎಂದು ತಂದೆ ಬಾಬು ಅವರಿಗೆ ವಿಷಯ ತಿಳಿಸಿದಾಗ ಅವರು ಕಣ್ಮುಚ್ಚಿ ಒಪ್ಪಿಕೊಳ್ಳಲು ಸೂಚಿಸಿದರಂತೆ. ನಟ ಧರ್ಮ ಚಿತ್ರದಲ್ಲಿ ಮುತ್ತಪ್ಪ ರೈ ಪಾತ್ರ ಮಾಡುತ್ತಿದ್ದಾರೆ. ಮತ್ತೊಬ್ಬ ನಟ ಸೃಜನ್ ಲೋಕೇಶರಿಗೆ ಸೈಯದ್ ಬಚ್ಚನ್ ಅವರ ಪಾತ್ರ. ಎರಡೂ ಜೀವಂತ ಪಾತ್ರಗಳೇ. ಧರ್ಮ ಹಾಗೂ ಸೃಜನ್‌ಗೆ ಈ ಪಾತ್ರಗಳನ್ನು ನಿರ್ವಹಿಸುವುದು ಸವಾಲಿನ ಕೆಲಸವಾಗಿತ್ತು.`ಸ್ಲಂಬಾಲ~ ಮತ್ತಿತರ ಚಿತ್ರಗಳಲ್ಲಿ ಅಭಿನಯಿಸಿದ್ದ ಧರ್ಮ ಈ ಅವಕಾಶವನ್ನು ಉತ್ತಮವಾಗಿ ಬಳಸಿಕೊಂಡಿದ್ದಾರಂತೆ. ಸೈಯದ್ ಪಾತ್ರದಿಂದ ದೊರೆಯಬಹುದಾದ ಮನ್ನಣೆಯ ನಿರೀಕ್ಷೆಯಲ್ಲಿದ್ದಾರೆ ಸೃಜನ್.ಚಿತ್ರದ ಕುರಿತು ಆಳವಾಗಿ ಮಾತನಾಡಿದ್ದು ಅಗ್ನಿ ಶ್ರೀಧರ್. ಅವರ ಪ್ರಕಾರ ಸರಿ ತಪ್ಪಿನ ತೂಗುಯ್ಯಾಲೆಯ ಕತೆ ಇದು. ನೆತ್ತರ ಲೋಕದ ಸೋನನಿಗೆ ಪ್ರೀತಿಯ ಬಳ್ಳಿಯೂ ಉಂಟು. ಕತ್ತು ಕುಯ್ಯುವ ರೇಜರ್ ಜತೆಗೆ ರಮಿಸುವ ನಲ್ಲೆಯೂ ಉಂಟು. `ಒಲವೇ ಮಂದಾರ~ ಚಿತ್ರದ ಮೂಲಕ ಗಮನ ಸೆಳೆದ ಆಕಾಂಕ್ಷಾ ಸೋನನ ಮನದನ್ನೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

 

`ಆ ದಿನಗಳು~ ಚಿತ್ರದಲ್ಲಿ ಶ್ರೀಧರ್ ಪಾತ್ರದಲ್ಲಿ ನಟಿಸಿದ್ದ ಅತುಲ್ ಕುಲಕರ್ಣಿ ಇಲ್ಲಿಯೂ ಅದೇ ಪಾತ್ರ ನಿರ್ವಹಿಸುತ್ತಿದ್ದಾರೆ. ನಟ ಅಚ್ಯುತ್ ಕುಮಾರ್ ಮುಂಬೈ ಉದ್ಯಮಿಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬರುವ ಸೆಪ್ಟೆಂಬರ್‌ನಲ್ಲಿ ಚಿತ್ರ ತೆರೆ ಕಾಣುವ ಸಾಧ್ಯತೆಗಳಿವೆ.ನಿರ್ದೇಶಕ ಓಂಪ್ರಕಾಶ್ ರಾವ್, ನಿರ್ಮಾಪಕ ಎಂ.ಎಸ್. ರವೀಂದ್ರ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry