ಶುಕ್ರವಾರ, ಮೇ 27, 2022
27 °C

ರೇಟಿಂಗ್ ಸಂಸ್ಥೆಗಳು ಬಹಳ ಬಲಿಷ್ಠ!: ಆರ್‌ಬಿಐ ಮಾಜಿ ಗವರ್ನರ್ ರೆಡ್ಡಿ ವ್ಯಾಖ್ಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): `ಕೆಲವು ದೇಶಗಳಲ್ಲಿ ರೇಟಿಂಗ್ ಮತ್ತು ಲೆಕ್ಕಪತ್ರ ಪರಿಶೀಲನೆ ಸಂಸ್ಥೆಗಳು ಅದೆಷ್ಟು ಶಕ್ತಿಶಾಲಿಯಾಗಿವೆ ಎಂದರೆ ಅವು ಆಯಾ ದೇಶದ ಕೇಂದ್ರ ಬ್ಯಾಂಕ್‌ಗಿಂತಲೂ ಬಲಿಷ್ಠವಾಗಿವೆ~!

ಹೀಗೆ ಹೇಳಿದ್ದು ಆರ್‌ಬಿಐ ಮಾಜಿ ಗವರ್ನರ್ ವೈ.ವಿ.ರೆಡ್ಡಿ!

ವಿವಿಧ ದೇಶಗಳ ಆರ್ಥಿಕ ಸ್ಥಿತಿ, ಪ್ರಮುಖ ಬ್ಯಾಂಕ್‌ಗಳು ಶ್ರೇಣಿ, ನಗದು  ಹಣದ ಮೌಲ್ಯ ಕುರಿತು ವಿಶ್ಲೇಷಣಾ ವರದಿ ಪ್ರಕಟಿಸುತ್ತಿರುವ ಕೆಲವು ರೇಟಿಂಗ್ ಮತ್ತು ಲೆಕ್ಕಪತ್ರ ಪರಿಶೀಲನಾ ಸಂಸ್ಥೆಗಳತ್ತ ಬೊಟ್ಟು ಮಾಡಿ ರೆಡ್ಡಿ ಅವರು ತುಸು ವ್ಯಂಗ್ಯವಾಗಿಯೇ ಈ ಮಾತು ಹೇಳಿದರು.

ಸ್ವಿಟ್ಜರ್ಲೆಂಡ್‌ನಲ್ಲಿ ಭಾನುವಾರ ಪೆರ್   ಜಾಕೊಬ್‌ಸನ್ ಪ್ರತಿಷ್ಠಾನದ ಉಪನ್ಯಾಸ ನೀಡಿದ ಅವರು, ಕೆಲವು ಅಂತರರಾಷ್ಟ್ರೀಯ ಬ್ಯಾಂಕ್‌ಗಳು ವಿವಿಧ ದೇಶಗಳಲ್ಲಿ ರಾಜಕೀಯ ಮತ್ತು ಆರ್ಥಿಕ ವಲಯದ ಮೇಲೆ ಪ್ರಭಾವದ ಅನುಕೂಲವನ್ನೂ ಪಡೆದುಕೊಳ್ಳುತ್ತಿವೆ ಎಂದು ಗಮನ ಸೆಳೆದರು.

ಬೆರಳೆಣಿಕೆಯಷ್ಟಿರುವ ರೇಟಿಂಗ್ ಮತ್ತು ಲೆಕ್ಕಪತ್ರ ಪರಿಶೀಲನೆ ಸಂಸ್ಥೆಗಳಂತೂ ಅದೆಷ್ಟು ಪ್ರಬಲವಾಗಿವೆ ಎಂದರೆ ಒಂದು ದೇಶದ ರಾಜಕೀಯ-ಆರ್ಥಿಕ ಶಕ್ತಿಯ ಮೇಲಷ್ಟೇ ಅಲ್ಲ, ಆ ದೇಶದ ಕಾರ್ಪೊರೇಟ್ ವಲಯವನ್ನೂ ತಮಗೆ ಅನುಕೂಲವಾಗುವಂತೆ  ಪ್ರಭಾವಿತಗೊಳಿಸುವಷ್ಟು ಬಲಾಢ್ಯವಾಗಿವೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.