ರೇಡಿಯೊ ಒನ್ ಚಾಂಪಿಯನ್

7

ರೇಡಿಯೊ ಒನ್ ಚಾಂಪಿಯನ್

Published:
Updated:
ರೇಡಿಯೊ ಒನ್ ಚಾಂಪಿಯನ್

ಕ್ವಿಕ್ ಹೀಲ್ ರೇಡಿಯೊ ಒನ್ ಕಾಲೇಜ್ ಚಾಂಪಿಯನ್‌ಗಳಾಗಿ ಜ್ಯೋತಿನಿವಾಸ್ ಕಾಲೇಜಿನ ಜೀಶಾ ಅಮ್ಲೋನಿ ಮತ್ತು ಆಕಾಂಕ್ಷಾ ಜಯ ಸಾಧಿಸಿದ್ದಾರೆ. ಇವರಿಗೆ 94.3 ರೇಡಿಯೊ ಒನ್‌ನಲ್ಲಿ ಮೂರು ತಿಂಗಳು ತಮ್ಮದೇ ಆದ ಕಾರ್ಯಕ್ರಮ ನೀಡುವ ಅವಕಾಶ ದೊರೆತಿದೆ.ವಿವಿಧ ಸುತ್ತು ದಾಟಿ ಬಂದ ನಗರದ 10 ಪ್ರತಿಷ್ಠಿತ ಕಾಲೇಜುಗಳ 10 ವಿದ್ಯಾರ್ಥಿಗಳು ಅಂತಿಮ ಸ್ಪರ್ಧೆಯಲ್ಲಿದ್ದರು. ರೇಡಿಯೊದಲ್ಲಿ ಸಂವಹನ ಸಾಮರ್ಥ್ಯ, ಸಂಗೀತ ಜ್ಞಾನ, ಹಾಸ್ಯ ಪ್ರಜ್ಞೆ, ಒತ್ತಡ ನಿರ್ವಹಣೆ ಮತ್ತು ಸಮಯಪ್ರಜ್ಞೆ, ತಂಡದಲ್ಲಿ ಕೆಲಸ ಮಾಡುವ ಕೌಶಲ್ಯಗಳನ್ನು ಪರಿಗಣಿಸಿ ತೀರ್ಪುಗಾರರು ಈ ಇಬ್ಬರನ್ನು ಆಯ್ಕೆ ಮಾಡಿದರು.ನಗರದ ಯುವ ಪೀಳಿಗೆ ಗುರಿಯಾಗಿರಿಸಿಕೊಂಡು 2006 ರ ಜುಲೈನಲ್ಲಿ  ಕಾರ್ಯಾರಂಭ ಮಾಡಿದ 94.3 ರೇಡಿಯೊ ಒನ್, ಮನರಂಜನೆ, ಹಾಸ್ಯಭರಿತ ಕಾರ್ಯಕ್ರಮಗಳಿಗೆ ಹೆಸರುವಾಸಿ. ಜತೆಗೆ ಮಾಹಿತಿಗಳನ್ನೂ ನೀಡುತ್ತಿದೆ. ಬೆಂಗಳೂರು ಫಟಾಫಟ್ ಎಂಬ ಬ್ರೇಕ್‌ಫಾಸ್ಟ್ ಶೊಗೆ `ಐಆರ್‌ಎ ಪ್ರೊಮ್ಯೋಕ್ಸ್ ಬೆಸ್ಟ್ ಶೊ~ ಪ್ರಶಸ್ತಿ ಪಡೆದುಕೊಂಡಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry