ರೇಡ್ ಡಿ ಹಿಮಾಲಯ: ಸುರೇಶ್ ರಾಣಾ ಚಾಂಪಿಯನ್

7

ರೇಡ್ ಡಿ ಹಿಮಾಲಯ: ಸುರೇಶ್ ರಾಣಾ ಚಾಂಪಿಯನ್

Published:
Updated:

ಲೇಹ್ (ಪಿಟಿಐ): ಹಾಲಿ ಚಾಂಪಿಯನ್ ಸುರೇಶ್ ರಾಣಾ ಶುಕ್ರವಾರ ಕೊನೆಗೊಂಡ 14ನೇ ಮಾರುತಿ ಸುಜುಕಿ ರೇಡ್ ಡಿ ಹಿಮಾಲಯ ಮೋಟಾರ್    ಸ್ಪೋರ್ಟ್ಸ್ ರ‌್ಯಾಲಿಯ `ಎಕ್ಸ್‌ಟ್ರೀಮ್ ನಾಲ್ಕು ಚಕ್ರ~ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.ಸಿ.ಎಸ್. ಸಂತೋಷ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಚಾಂಪಿಯನ್ ಆದರು. ಐದು ದಿನಗಳ ಕಾಲ ನಡೆದ ಈ ರ‌್ಯಾಲಿ ಸಾಕಷ್ಟು ಸವಾಲಿನಿಂದ ಕೂಡಿತ್ತು. ಒಟ್ಟು 1,800 ಕಿ.ಮೀ. ಕ್ರಮಿಸಬೇಕಿತ್ತು.

ಗ್ರಾಂಡ್ ವಿತಾರಾ ಚಾಲನೆ ಮಾಡಿದ ಸುರೇಶ್ ರಾಣಾ 9 ಗಂಟೆ ಎಂಟು ನಿಮಿಷ ಮತ್ತು 46 ಸೆಕೆಂಡ್‌ಗಳನ್ನು ತೆಗೆದುಕೊಂಡರು. ಪರ್ಮಿಂದರ್ ಠಾಕೂರ್ `ನೇವಿಗೇಟರ್~ ಆಗಿ ರಾಣಾ ಜೊತೆಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry