ಶನಿವಾರ, ಜೂನ್ 19, 2021
26 °C

ರೇಣುಕಾಚಾರ್ಯ ಜಯಂತಿ ಇಂದಿನಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ, ಕ್ಷೇತ್ರ­ನಾಥ ವೀರಭದ್ರಸ್ವಾಮಿ ರಥೋತ್ಸವ ಬಾಳೆಹೊನ್ನೂರು ರಂಭಾಪುರಿ ಮಠ­ದಲ್ಲಿ ಇದೇ 12ರಿಂದ 16ರವರೆಗೆ ನಡೆಯಲಿದೆ. ಇದರ ಅಂಗವಾಗಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯ­ಕ್ರಮ ಹಮ್ಮಿಕೊಳ್ಳ­ಲಾಗಿದೆ ಎಂದು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿ­ದರು.ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಇದೇ 12­ರಂದು ಬೆಳಿಗ್ಗೆ 11ಗಂಟೆಗೆ ವೀರ­ಭದ್ರಸ್ವಾಮಿ ಹಿರಿಯ ಪ್ರಾಥಮಿಕ ಶಾಲೆ ನೂತನ ಕಟ್ಟಡ ಉದ್ಘಾಟನೆ, ರುದ್ರ­ಮುನೀಶ್ವರರ ವಸತಿ ಪ್ರೌಢಶಾಲೆ ನವೀಕೃತ ಕಟ್ಟಡ ಅನಾವರಣ ನಡೆಯಲಿದೆ ಎಂದರು.ಸಂಜೆ 6.30ಕ್ಕೆ ಧರ್ಮ ಸಂಗ್ರಾಮ ಸಮಾವೇಶದೊಂದಿಗೆ ಸಭಾ ಕಾರ್ಯ­ಕ್ರಮ ಜರುಗಲಿವೆ. ಮರು ದಿನ ಸಂಜೆ 6.30ಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.­ಯಡಿಯೂರಪ್ಪ ಸಮಾರಂಭ ಉದ್ಘಾಟಿ­ಸುವರು. ಮಾಜಿ ಉಪ­ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ‘ಬಾಳಿಗೆ ಬೆಳಕು’ ಕೃತಿ ಬಿಡುಗಡೆ­ಗೊಳಿಸುವರು. ಬೆಂಗಳೂರಿನ ಅಧ್ಯಾತ್ಮ ಚಿಂತಕಿ ರೂಪಾ ಅಯ್ಯರ್ ಉಪನ್ಯಾಸ ನೀಡುವರು. ಮಾಜಿ ಸಚಿವ ಸಿ.ಟಿ.ರವಿ ಭಾಗವಹಿಸುವರು. ಬೆಂಗಳೂರಿನ ಪೂಜಾ ಮತ್ತು ಮೇಘನಾ ಭರತನಾಟ್ಯ ಪ್ರಸ್ತುತಪಡಿಸುವರು ಎಂದು ತಿಳಿಸಿದರು.ಇದೇ 14ರಂದು ಬೆಳಿಗ್ಗೆ 11.30ಕ್ಕೆ ರೇಣುಕಾ­ಚಾರ್ಯ ಜಯಂತಿ ಯುಗ­ಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ರಥೋತ್ಸವ ಅಂಗ­ವಾಗಿ ನಡೆಯುವ ಧರ್ಮ ಸಮಾರಂಭ­ವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಚ್.ಕೆ.­ಪಾಟೀಲ ಉದ್ಘಾಟಿಸುವರು. ನೀರಾವರಿ ತಜ್ಞ ದಿ.ಜಿ.ಎಸ್.­ಪರಮ­ಶಿವಯ್ಯ ಅವರಿಗೆ ರೇಣುಕಾಚಾರ್ಯ ಗೌರವ  ಪ್ರಶಸ್ತಿ ಪ್ರದಾನ ಮಾಡಲಾಗುವುದು.ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ನೂತನ ಯಾತ್ರಿ ನಿವಾಸ ಉದ್ಘಾಟಿಸುವರು. ’ವೀರಭದ್ರ ಪರಂಪರೆ ಮತ್ತು ಸಂಸ್ಕೃತಿ’ ಕೃತಿಯನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ ಬಿಡುಗಡೆಗೊಳಿಸುವರು. ಸಂಸದ ಜಯಪ್ರಕಾಶ ಹೆಗ್ಡೆ, ಶಾಸಕ ಡಿ.ಎನ್.ಜೀವರಾಜ್, ಮಾಜಿ ಸಂಸದ ಮಂಜುನಾಥ ಕುನ್ನೂರ, ಬ್ಯಾಡಗಿಯ ಶಂಭಣ್ಣ ಶಿರೂರ, ಬೆಂಗಳೂರಿನ ಎನ್.ಎಂ.ನಂಜುಂಡೇಶ ಭಾಗವಹಿಸು­ವರು.ಇದೇ 15ರಂದು ಧರ್ಮ ಮತ್ತು ಸಮಾಜ ಚಿಂತನ ಸಮಾವೇಶ ನಡೆಯು­ವುದು. ಶಾಸಕರಾದ ಬಿ.ಬಿ.ನಿಂಗಯ್ಯ, ಶ್ರೀನಿವಾಸ, ಅಖಿಲ ಭಾರತ ವೀರಶೈವ ಮಹಾಸಭಾ ಕಾರ್ಯದರ್ಶಿ ಬಿ.ಎಸ್.­ವಾಗೀಶ ಪ್ರಸಾದ್ ಪಾಲ್ಗೊಳ್ಳು­ವರು. 16ರಂದು ವಸಂತೋತ್ಸವ ನಂತರ ಭದ್ರಾನದಿ ತಟದಲ್ಲಿ ಸುರಗೀ ಸಮಾರಾಧನೆ ನಡೆಯುವುದು ಎಂದು ಹೇಳಿದರು. ತಾಲ್ಲೂಕು ವೀರಶೈವ ಮಹಾ­ಸಭಾ ಮುಖಂಡರಾದ ಗೌರಮ್ಮ ಬಸವೇ­ಗೌಡ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.