ಮಂಗಳವಾರ, ನವೆಂಬರ್ 12, 2019
28 °C

ರೇಣುಕಾಚಾರ್ಯ ವಿರುದ್ಧ ಜಯಲಕ್ಷ್ಮಿ?

Published:
Updated:
ರೇಣುಕಾಚಾರ್ಯ ವಿರುದ್ಧ ಜಯಲಕ್ಷ್ಮಿ?

ಬೊಮ್ಮನಹಳ್ಳಿ: `ಪಕ್ಷ ಟಿಕೆಟ್ ನೀಡಿದರೆ ಹೊನ್ನಾಳಿ ವಿಧಾನ ಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಬಿಎಸ್‌ಆರ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ಧ' ಎಂದು ನರ್ಸ್ ಜಯಲಕ್ಷ್ಮಿ ತಿಳಿಸಿದರು.ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅರಕೆರೆಯಲ್ಲಿ ಬಿಎಸ್‌ಆರ್ ಪಕ್ಷದ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಶ್ರೀರಾಮುಲು ಅವರ ಜನ ಸೇವೆಯನ್ನು ಮೆಚ್ಚಿ ಹಾಗೂ ಪಕ್ಷದ ಸಿದ್ದಾಂತವನ್ನು ಒಪ್ಪಿ ಪಕ್ಷವನ್ನು ಸೇರುತ್ತಿದ್ದೇನೆ. ನನಗೆ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರ ಬಗ್ಗೆ ಅಪಾರ ಕಾಳಜಿ ಇದೆ. ರಾಜಕೀಯದ ಮೂಲಕ ಜನಸೇವೆ ಮಾಡಬೇಕು ಎಂಬುದು ನನ್ನಾಸೆ' ಎಂದು ಅವರು ಹೇಳಿದರು.ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ `ಯುವಶಕ್ತಿಯನ್ನು ರಾಜಕಾರಣದಲ್ಲಿ ತೊಡಗಿಸಿಕೊಂಡು ಉತ್ತಮ ಆಡಳಿತ ನೀಡಬೇಕು ಎಂಬ ಉದ್ದೇಶದಿಂದ ಬಿಎಸ್‌ಆರ್ ಪಕ್ಷವು ಟಿಕೆಟ್ ಹಂಚಿಕೆಯಲ್ಲಿ ಯುವ ಜನತೆಗೆ ಆದ್ಯತೆ ನೀಡಿದೆ' ಎಂದರು.ಬೊಮ್ಮನಹಳ್ಳಿ ಕ್ಷೇತ್ರದ ಪಕ್ಷದ ಅಭ್ಯರ್ಥಿ ಎಸ್.ಟಿ.ಶ್ರೀನಿವಾಸ್, ಬಿಎಸ್‌ಆರ್ ಯುವ ಘಟಕದ ಅಧ್ಯಕ್ಷ ಜಿತೇಂದ್ರರೆಡ್ಡಿ, ನಟ ಮದನ್ ಪಟೇಲ್, ಮರಸೂರು ಮಂಜುನಾಥ್ ರೆಡ್ಡಿ, ಮಂಜುನಾಥ್, ಅಶೋಕ್ ಬೊಮ್ಮನಹಳ್ಳಿ ಹಾಗೂ ರಾಮರೆಡ್ಡಿ ಮುಂತಾದವರು ಹಾಜರಿದ್ದರು.

ಪ್ರತಿಕ್ರಿಯಿಸಿ (+)