ಸೋಮವಾರ, ನವೆಂಬರ್ 18, 2019
26 °C

ರೇಣುಕಾಯಲ್ಲಮ್ಮದೇವಿ ಪ್ರತಿಪ್ಠಾಪನಾ ಮಹೋತ್ಸವ

Published:
Updated:

ಬೊಮ್ಮನಹಳ್ಳಿ: ಹೊಂಗಸಂದ್ರದಲ್ಲಿ ರೇಣುಕಾಯಲ್ಲಮ್ಮದೇವಿ ಮತ್ತು ಓಂ ಶಕ್ತಿ ದೇವತೆಗಳ ಪ್ರತಿಷ್ಠಾಪನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.ದೇವಾಲಯದಲ್ಲಿ 3 ದಿನಗಳ ಕಾಲ ವಿಶೇಷ ಪೂಜಾ ವಿಧಿವಿಧಾನಗಳು, ವಿವಿಧ ಹೋಮಾದಿಗಳನ್ನು ನಡೆಸಲಾಯಿತು. ದೇವರಿಗೆ ಜಲ, ಕ್ಷೀರ, ಪುಷ್ಪ, ರತ್ನ, ಚಿತ್ರಪಟಲ ದಿವಾಸ, ಲಾಲಿಸೇವೆ ಮತ್ತಿತರ ಪೂಜಾ ಕಾರ್ಯಗಳನ್ನು ನೆರವೇರಿಸಿ ಪ್ರತಿಷ್ಠೆ ಮಾಡಲಾಯಿತು. ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದ ಇಮ್ಮಡಿ ಮಹದೇವ ಸ್ವಾಮೀಜಿ, ಗುಂಡೆಗಾಲ ಶಿವಯೋಗಿ, ಶಿವನ ತೋಟದ ಮಠದ ವೃಷಭರಾಜೇಂದ್ರ ಸ್ವಾಮೀಜಿ, ಶಾಸಕ ಸತೀಶ್ ರೆಡ್ಡಿ, ಪಾಲಿಕೆ ಸದಸ್ಯರಾದ ಬಿ.ಎಸ್.ಮಂಜನಾಥರೆಡ್ಡಿ, ಸುಕಂದ ರಾಮಚಂದ್ರರೆಡ್ಡಿ, ದೇವಾಲಯ ಟ್ರಸ್ಟ್‌ನ ಎಂ.ಬಾಬು, ಎಂ.ಮುನಿರಾಜು, ವಿ.ನಾರಾಯಣ್, ಎಂ.ಮುನಿಯಪ್ಪ, ಒ.ಎಂ.ಪುರುಷೋತ್ತಮ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)