ಸೋಮವಾರ, ಮೇ 23, 2022
21 °C

ರೇವಣಸಿದ್ಧ ಶರಣರು ಸರ್ವಧರ್ಮ ಸಂಗಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಳಂದ:  ಅಕ್ಕಲಕೋಟದ ಸದ್ಗುರು ರೇವಣಸಿದ್ಧ ಶಿವಶರಣ ಸ್ವಾಮೀಜಿ ಭಕ್ತರಿಗೆ ಐತಾನಾಗುವ ಮಾರ್ಗ ತೋರಿದವರು, ಸರ್ವ ಧರ್ಮಗಳ ಸಾರ ಒಂದೇ ಆಗಿದೆ. ಮಾನವ ಜನ್ಮ ದೊಡ್ಡದು ಸಾರ್ಥಕ ಮಾಡಿಕೊಳ್ಳಬೇಕು ಎಂದು ಸಂದೇಶ ನೀಡಿದ್ದಾರೆ ಎಂದು ಅಕ್ಕಲಕೋಟ ಮಠದ ಚಿಕ್ಕರೇವಣಸಿದ್ಧ ಸ್ವಾಮಿಗಳು ಹೇಳಿದರು.ಸ್ಥಳೀಯ ಶರಣ ನಗರದ ಸದ್ಗುರು ರೇವಣಸಿದ್ಧ ಶಿವಶರಣ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವದ ಶತಮಾನೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟನೆ ಸಮಾರಂಭ ಮತ್ತು 63 ಪುರಾತನ ಶಿವಶರಣರ ಲಿಂಗ ಪ್ರತಿಷ್ಠಾಪನೆ ಸಾಮೂಹಿಕ ವಿವಾಹ, ತುಲಾಬಾರ, ಲಕ್ಷ ದೀಪೋತ್ಸವ ಸಿದ್ಧತಾ ಕಾರ್ಯಕ್ರಮದಲ್ಲಿ ಶನಿವಾರ ಆಶೀರ್ವಚನ ನೀಡಿದರು.ರೇವಣಸಿದ್ಧ ಶರಣರು ಅಕ್ಕಲಕೋಟದಿಂದ ಆಳಂದಕ್ಕೆ ಬಂದು ಅನೇಕ ಕಷ್ಟಗಳನು ಎದುರಿಸಿ ಭಕ್ತರಿಗೆ ಆಧ್ಯಾತ್ಮಿಕ ಮತ್ತು ಸಾಮಾಜಿಕ ಮಾರ್ಗತೋರಿ ಈ ನೆಲವನ್ನು ಪುಣ್ಯಭೂಮಿಯನ್ನಾಗಿಸಿದ್ದಾರೆ ಎಂದರು.ಈ ಮುನ್ನದಿನ ಆಳಂದ ಸಂಸ್ಥಾನ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಪ್ರಣವ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿ, ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದರು. ಶರಣ ಮಠದ ಚನ್ನಬಸವ ಪಟ್ಟದೇವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬರೂರದ ಆನಂದ ಶಾಸ್ತ್ರಿಗಳು, ಕಮಿಟಿ ಅಧ್ಯಕ್ಷ ಗುರುನಾಥ ಷಣ್ಮುಖ, ಸೂರ್ಯಕಾಂತ ತಟ್ಟಿ, ಸಿದ್ಧಾರೂಢ ಕಂಠೆ, ನಾಗೇಂದ್ರಪ್ಪ ಹೊಸಮನಿ, ವಿರೂಪಾಕ್ಷಪ್ಪ ದುಲಂಗೆ, ಎಗಪ್ಪ ಅಂಕದ, ಭೀಮಣ್ಣಪ್ಪ ಶಟಗುಂಡೆ, ಸಂಗನಬಸವ ವಿ. ಪಾಟೀಲ ಅನೇಕರು ಪಾಲ್ಗೊಂಡಿದ್ದರು.

ಇಂದಿನ ವಿಶೇಷ ಕಾರ್ಯಕ್ರಮಗಳು

ಫೆ. 13ರಂದು ಬೆಳಗಿನ 9ಗಂಟೆಗೆ ಮಠದ ಚನ್ನಬಸವ ಪಟ್ಟದೇವರು, ಮೈಂದರ್ಗಿ ಹಿರೇಮಠದ ಅಭಿನವ ರೇವಣಸಿದ್ಧ ಶ್ರೀಗಳಿಗೆ ಆನೆ, ಅಂಬಾರಿಯ ವೈಭದ ಮೆರವಣಿಗೆ, 63 ಪುರಾತನ ಶಿವಶರಣರ ಲಿಂಗಗಳು ಹಾಗೂ ನಂದಿ ಶಿಲಾಮೂರ್ತಿ ಮತ್ತು ನವಗ್ರಹಗಳ ವೈಭವದ ಮೆರವಣಿಗೆ, 501 ಸುಮಂಗಲೆಯರೊಂದಿಗೆ ಕುಂಭಮೇಳ, ವಾದ್ಯ ಡೊಳ್ಳು, ಭಜನೆ ಸಾಂಸ್ಕೃತಿಕ ಕಲಾತಂಡದೊಂದಿಗೆ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ದೇವಂತಗಿ ರೇಣುಕ ಶಿವಾಚಾರ್ಯ ಸೇರಿದಂತೆ ಅನೇಕರು ಪಾಲ್ಗೊಳ್ಳುವರು. ಸಂಜೆ 6.15ಕ್ಕೆ ಪ್ರವಚನದ ಅಧ್ಯಕ್ಷತೆ ಜಿಡಗಾ, ಅಚಲೇರ ಮಠದ ಮುರುಘರಾಜೇಂದ್ರ ಸ್ವಾಮಿಗಳು ವಹಿಸುವರು, ಖಜೂರಿ ಮುರುಘೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಚಿಕ್ಕರೇವಣಸಿದ್ಧ ಶಿವಶರಣ ಸ್ವಾಮೀಜಿಗೆ ಭಕ್ತಾದಿಗಳಿಂದ ನಾಣ್ಯದ ತುಲಾಭಾರ ನಡೆಯಲಿದೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.