ಭಾನುವಾರ, ಮೇ 16, 2021
22 °C

ರೇವಣ್ಣ ಅವರನ್ನೂ ಕರೆತನ್ನಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೇವಣ್ಣ ಅವರನ್ನೂ ಕರೆತನ್ನಿ...

ಬೆಂಗಳೂರು: ಕಾವೇರಿ ವಿಚಾರವಾಗಿ ಇನ್ನು ಮುಂದೆ ನಡೆಯುವ ಸಭೆಗಳಿಗೆ ನೀವು (ಎಚ್.ಡಿ. ಕುಮಾರಸ್ವಾಮಿ) ಬರುವಾಗ ಎಚ್.ಡಿ.ರೇವಣ್ಣ ಅವರನ್ನೂ ಕರೆದುಕೊಂಡು ಬನ್ನಿ. ಇಲ್ಲದಿದ್ದರೆ ನಿಮಗೇ ತೊಂದರೆ ಆಗುತ್ತದೆ.ವಿಧಾನಸಭೆಯ ವಿರೋಧ ಪಕ್ಷದ ನಾಯಕ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಛೇಡಿಸಿದ್ದು ಹೀಗೆ.ಕುಮಾರಸ್ವಾಮಿ ಭಾಷಣ ಮುಗಿಸು ತ್ತಿದ್ದಂತೆಯೇ ಎದ್ದು ನಿಂತ ರೇವಣ್ಣ, `ಕಾವೇರಿ ನದಿ ನೀರಿನ ವಿಚಾರವಾಗಿ ಗುರುವಾರ ಬೆಳಿಗ್ಗೆ ನಡೆದ ಸಭೆಗೆ ರಾಮ ನಗರದವರಾದ ಕುಮಾರಸ್ವಾಮಿ ಅವರನ್ನು ಕರೆದಿದ್ದೀರಿ. ಹಾಸನ ಜಿಲ್ಲೆಯವರಾದ ನನ್ನನ್ನು ಕರೆಯದೇ ಇರುವುದು ಸರಿಯಲ್ಲ. ನನ್ನನ್ನೂ ಕರೆಯ ಬೇಕಾಗಿತ್ತು' ಎಂದು ಮುಖ್ಯಮಂತ್ರಿ ಅವರನ್ನು ಉದ್ದೇಶಿಸಿ ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ `ನಿಮ್ಮನ್ನೂ ಕರೆಯಲು ವ್ಯವಸ್ಥೆ ಮಾಡೋಣ' ಎಂದು ಸಮಾಧಾನ ಪಡಿಸಿ ದರು. `ಅವರೂ (ಕುಮಾರ ಸ್ವಾಮಿ) ಕಾವೇರಿ ಜಲಾನಯನ ಪ್ರದೇ ಶದ ವ್ಯಾಪ್ತಿಯಲ್ಲಿ ಬರುತ್ತಾರೆ' ಎಂದು ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.ಧಾರಾಳತನ ಇರಲಿ... ಹಿಂದುಳಿದ ವರ್ಗದವರು ಅಧಿಕಾರದ ಚುಕ್ಕಾಣಿ ಹಿಡಿದಾಗ ಅದನ್ನು ಸಹಿಸಿಕೊಳ್ಳುವ ಸಹನೆ, ಧಾರಾಳತನ ಪ್ರಬಲ ಜಾತಿಯ ವರಲ್ಲಿ ಇರಬೇಕು. ಬಹಳ ವರ್ಷ ಪ್ರಬಲ ಜಾತಿಯವರ ಕೈಯಲ್ಲೇ ಅಧಿಕಾರ ಇತ್ತು. ಜನ ಬದಲಾವಣೆ ಬಯಸಿ ಕೆಳಜಾತಿ ಯವರಿಗೆ ಅಧಿಕಾರ ಕೊಟ್ಟಾಗ ವಿರೋಧ ಮಾಡುವುದು ಸರಿಯಲ್ಲ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯವೈಖರಿ ಬಗ್ಗೆ ಪದೇ ಪದೇ ಟೀಕೆ ಮಾಡುತ್ತಿದ್ದ ಬಿಜೆಪಿಯ ಜಗದೀಶ ಶೆಟ್ಟರ್ ಅವರನ್ನು ಉದ್ದೇಶಿಸಿ ಕಾಂಗ್ರೆಸ್‌ನ ರಮೇಶ್‌ಕುಮಾರ್ ಆಡಿದ ಮಾತಿದು.`ಅರಸು ಅಧಿಕಾರದಲ್ಲಿ ಇದ್ದಾಗ ಹಾದಿ - ಬೀದಿಯಲ್ಲಿ ಹೋಗುವವರು ಕೂಡ ಅವರ ಬಗ್ಗೆ ನಕಾರಾತ್ಮಕವಾಗಿ ಮಾತನಾ ಡಲು ಶುರು ಮಾಡಿದರು. ಅವರ ವ್ಯಕ್ತಿ ತ್ವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಿದರು. ನೀವು (ಶೆಟ್ಟರ್) ಈಗ ಅದೇ ರೀತಿಯ ಟೀಕೆಗಳನ್ನು ಒಂದು ಲಕ್ಷ ಬಾರಿ ಮಾಡಿದರೂ ಜನ ನಂಬುವುದಿಲ್ಲ. ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಬದ್ಧತೆ ಇದೆ' ಎಂದು ವಿಶ್ಲೇಷಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.