ರೇವ್ ಪಾರ್ಟಿ: ಇಬ್ಬರು ಐಪಿಎಲ್ ಆಟಗಾರರು ಭಾಗಿ?

7

ರೇವ್ ಪಾರ್ಟಿ: ಇಬ್ಬರು ಐಪಿಎಲ್ ಆಟಗಾರರು ಭಾಗಿ?

Published:
Updated:
ರೇವ್ ಪಾರ್ಟಿ: ಇಬ್ಬರು ಐಪಿಎಲ್ ಆಟಗಾರರು ಭಾಗಿ?

 ಮುಂಬೈ (ಪಿಟಿಐ):  ಮಹಾನಗರದ ಜುಹೂ ಬೀಚ್ ಪ್ರದೇಶದಲ್ಲಿರುವ ಓಕ್ಸ್‌ವುಡ್ ಹೋಟೆಲ್‌ನಲ್ಲಿ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ 100 ಜನರನ್ನು ಭಾನುವಾರ ಸಂಜೆ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಅದರಲ್ಲಿ ಇಬ್ಬರು ಐಪಿಎಲ್ ಆಟಗಾರರೂ ಇದ್ದರು ಎನ್ನಲಾಗಿದೆ. ಸಿಕ್ಕಿ ಬಿದ್ದ ಇಬ್ಬರು ಆಟಗಾರರಲ್ಲಿ ಒಬ್ಬ ವಿದೇಶೀಯರಾಗಿದ್ದರೆ ಮತ್ತೊಬ್ಬರು ದೇಶಿ ಆಟಗಾರರಾಗಿದ್ದಾರೆ.  ಇಬ್ಬರೂ ಪುಣೆ ವಾರಿಯರ್ಸ್ ತಂಡಕ್ಕೆ ಸೇರಿದವರು ಎಂದು ಉನ್ನತ ಮೂಲಗಳು ತಿಳಿಸಿವೆ. ಆದರೆ ಆಟಗಾರರ ಹೆಸರು ಬಹಿರಂಗಪಡಿಸಲು ಪೊಲೀಸ್ ಕಮಿಷನರ್ ನಿರಾಕರಿಸಿದ್ದಾರೆ.ಪುಣೆ ವಾರಿಯರ್ಸ್‌ನ ರಾಹುಲ್ ಶರ್ಮ ಅವರೂ ಈ ಸಂದರ್ಭದಲ್ಲಿ ಅಲ್ಲಿದ್ದುದು ಖಚಿತಪಟ್ಟಿದೆ. `ನಾನು ಅದೇ ಹೋಟೆಲ್‌ನಲ್ಲಿ ಇದ್ದಿದ್ದು ನಿಜ. ಆದರೆ, ಜನ್ಮದಿನದ ಪಾರ್ಟಿ ಇದ್ದ ಕಾರಣ ಅಲ್ಲಿಗೆ ತೆರಳಿದ್ದೆ. ಅದೇ ತಾನೆ ಹೋಟೆಲ್ ತಲುಪಿದ್ದೆ~ ಎಂದು ಶರ್ಮ ಸ್ಪಷ್ಟನೆ ನೀಡಿದ್ದಾರೆ.ಸಾಕಷ್ಟು ವಿವಾದಗಳಿಂದ ಸುದ್ದಿ ಮಾಡಿರುವ ಐಪಿಎಲ್ ಈ ಘಟನೆಯಿಂದ ಈಗ ಮತ್ತೊಂದು ಹೊಸ ವಿವಾದಕ್ಕೆ ಸಿಲುಕಿಕೊಂಡಿದೆ.`ರೇವ್ ಪಾರ್ಟಿಯ ಮೇಲೆ ದಾಳಿ ಮಾಡಿ ಮಾದಕ ವಸ್ತುಗಳಾದ ಕೊಕೆನ್, ಚರಸ್‌ಗಳನ್ನು ವಶಪಡಿಸಿ ಕೊಂಡಿದ್ದೇವೆ. ಇವರಲ್ಲಿ 58 ಮಹಿಳೆಯರು ಹಾಗೂ 38 ಪುರುಷರು ಸೇರಿದ್ದಾರೆ~ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry