ಭಾನುವಾರ, ಏಪ್ರಿಲ್ 18, 2021
30 °C

ರೇಷ್ಮೆ ಕೃಷಿಯಲ್ಲಿ ತಾಂತ್ರಿಕ ವಿಧಾನ ಅಳವಡಿಸಿಕೊಳ್ಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: `ರೇಷ್ಮೆ ಕೃಷಿಯಲ್ಲಿ ನೂತನ ತಾಂತ್ರಿಕತೆ ಅಳವಡಿಸಿಕೊಂಡು ಹೆಚ್ಚು ಇಳುವರಿ ಪಡೆಯಲು ರೈತರು ಆಸಕ್ತಿವಹಿಸಬೇಕು~ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮಹಾದೇವಿ ಸಲಹೆ ನೀಡಿದರು.ತಾಲ್ಲೂಕಿನ ವೆಂಕಟಯ್ಯನಛತ್ರ ಗ್ರಾಮದ ರೇಷ್ಮೆ ವಲಯಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ಚೆನ್ನಪ್ಪನಪುರ ಗ್ರಾಮದ ಪರಿಶಿಷ್ಟ ಜಾತಿಯ ರೈತ ಫಲಾನುಭವಿಗಳಿಗೆ ತಾಲ್ಲೂಕು ಪಂಚಾಯಿತಿಯ ವಿಶೇಷ ಘಟಕ ಯೋಜನೆಯಡಿ ರೇಷ್ಮೆ ಕೃಷಿ ಪರಿಕರ ವಿತರಿಸಿ ಅವರು ಮಾತನಾಡಿದರು.ಪ್ರತಿವರ್ಷವೂ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪ ಯೋಜನೆಯಡಿ ಹಿಂದುಳಿದ ಗ್ರಾಮಗಳನ್ನು ಗುರುತಿಸಿ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಗೊಂಚಲು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ರಸ್ತೆ, ಚರಂಡಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುತ್ತಿದೆ. ಕೃಷಿ, ರೇಷ್ಮೆ, ತೋಟಗಾರಿಕೆ, ಕೈಗಾರಿಕೆ ಮತ್ತು ಪಶು ಸಂಗೋಪನಾ ಇಲಾಖೆಯಿಂದ ಸವಲತ್ತು ನೀಡಲಾಗುತ್ತಿದೆ ಎಂದರು.ಸರ್ಕಾರದ ವಿವಿಧ ಯೋಜನೆಯಡಿ ದೊರೆಯುವ ಸೌಲಭ್ಯ ಬಳಸಿಕೊಂಡು ಫಲಾನುಭವಿಗಳು ಆರ್ಥಿಕ ಸ್ವಾವಲಂಬನೆ ಸಾಧಿಸಬೇಕಿದೆ. ಕೃಷಿ ಪರಿಕರಗಳ ಪ್ರಯೋಜನ ಪಡೆದುಕೊಂಡು ಉತ್ತಮ ಫಸಲು ಬೆಳೆಯಬೇಕು ಎಂದು ಹೇಳಿದರು.ತಾಲ್ಲೂಕು ಪಂಚಾಯಿತಿ ಸದಸ್ಯ ಚಿಕ್ಕಮಹದೇವು ಮಾತನಾಡಿ, `ಗ್ರಾಮದ ರೇಷ್ಮೆ ಕಚೇರಿ ಜಾಗದ ಮೇಲೆ ಭೂಗಳ್ಳರ ಕಣ್ಣುಬಿದ್ದಿದೆ. ಹೀಗಾಗಿ, ಸರ್ಕಾರಿ ಜಮೀನಿನ ಒತ್ತುವರಿ ನಡೆಯುತ್ತಿದೆ. ಇಲಾಖೆಯಿಂದ ಜಾಗವನ್ನು ಅಳತೆ ಮಾಡಿ ತಂತಿಬೇಲಿ ಅಳವಡಿಸಬೇಕು. ಅಧಿಕಾರಿಗಳು ಈ ಭಾಗದಲ್ಲಿ ರೇಷ್ಮೆ ಬೆಳೆಯ ಅಭಿವೃದ್ಧಿಗಾಗಿ ರೈತರಿಗೆ ಸೂಕ್ತ ಸಲಹೆ, ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.ಮುಖಂಡರಾದ ಶೇಷಣ್ಣ, ವೀರಭದ್ರಯ್ಯ, ರೇಷ್ಮೆ ವಿಸ್ತರಣಾಧಿಕಾರಿ ರೇಣುಕೇಶ್, ವಲಯಾಧಿಕಾರಿ ಮಲ್ಲಿಕಾರ್ಜುನ, ಸೋಮಣ್ಣ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.