ಸೋಮವಾರ, ಅಕ್ಟೋಬರ್ 14, 2019
28 °C

ರೇಷ್ಮೆ ಬಟ್ಟೆ ಪ್ರದರ್ಶನಕ್ಕೆ ಚಾಲನೆ

Published:
Updated:

ಬೆಳಗಾವಿ: ಪ್ರಿಯದರ್ಶಿನಿ ಹ್ಯಾಂಡಲೂಮ್ಸ (ಕೈಮಗ್ಗ) ವತಿಯಿಂದ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶುಕ್ರವಾರ ಆರಂಭವಾದ ರೇಷ್ಮೆ ಬಟ್ಟೆಗಳ ಪ್ರದರ್ಶನ ಹಾಗೂ ಮಾರಾಟಕ್ಕೆ ಚಾಲನೆ ನೀಡಲಾಯಿತು.ಪ್ರದರ್ಶನಕ್ಕೆ ಚಾಲನೆ ನೀಡಿದ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹ್ಮದ್ ಮೋಹ್ಸಿನ್ ಮಾತನಾಡಿ, ಪರಿಶುದ್ಧ ರೇಷ್ಮೆ ಸೀರೆ, ಪಂಚೆ, ಶರ್ಟ್‌ಗಳು ಪ್ರದರ್ಶನಕ್ಕೆ ಇದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.`ಪ್ರದರ್ಶನವು ಜ.6 ರಿಂದ ಜ.15ರ ವರೆಗೆ ಬೆಳಿಗ್ಗೆ 10 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ಶೇ 50 ರಷ್ಟು ರಿಯಾಯ್ತಿಯನ್ನು ಗ್ರಾಹಕರಿಗೆ ನೀಡಲಾಗುವುದು~ ಎಂದು ಅವರು ಹೇಳಿದರು.`ನೇಕಾರರಿಗೆ ನೇಯ್ದ ಬಟ್ಟೆಗಳಿಗೆ ಮಾರುಕಟ್ಟೆ ಒದಗಿಸಲು ಪ್ರಿಯದರ್ಶಿನಿ ಎಂಬ ಹೆಸರಿನ ಅಡಿಯಲ್ಲಿ ರೇಷ್ಮೆ ಬಟ್ಟೆಗಳ ಮಾರಾಟ ಮಾಡಲಾಗುತ್ತಿದೆ.  ಪ್ರಸ್ತುತ 55 ಮಾರಾಟ ಮಳಿಗೆಗಳನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರ ಹಾಗೂ ದೇಶದ ವಿವಿಧ ಮಹಾನಗರಗಳಲ್ಲಿ ವಹಿವಾಟು ನಡೆಸುತ್ತಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಮೂರು, ಕೊಪ್ಪಳದಲ್ಲಿ ನೂತನ ಮಳಿಗೆ ಪ್ರಾರಂಭಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಮಾರಾಟ ಮಳಿಗೆ ಸಂಖ್ಯೆ ಹೆಚ್ಚಿಸುವ ಪ್ರಯತ್ನ ನಡೆದಿದೆ~ ಎಂದು ಅವರು ಹೇಳಿದರು.ಪ್ರಸಕ್ತ ಆರ್ಥಿಕ ವರ್ಷ 200 ಕೋಟಿ ರೂ ವಹಿವಾಟು ನಡೆಸುವ ಗುರಿ ಹಾಕಿಕೊಳ್ಳಲಾಗಿದೆ. ಈಗಾಗಲೇ 12.4 ಕೋಟಿ ರೂಪಾಯಿಯನ್ನು ನೇಕಾರರಿಗೆ ಪರಿವರ್ತನಾ ದರವಾಗಿ ಪಾವತಿಸಲಾಗಿದೆ. ಪ್ರಸಕ್ತ ಮಾರುಕಟ್ಟೆ ಹಾಗೂ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ಹೊಸ ವಿನ್ಯಾಸದ ಸೀರೆಗಳನ್ನು ಉತ್ಪಾದಿಸಲು ಬೆಂಗಳೂರಿನ ನ್ಯಾಷನಲ್ ಇನ್ಸ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.ನಿಗಮದ ಪ್ರಭಾರ ಯೋಜನಾ ಆಡಳಿತಾಧಿಕಾರಿ ಎನ್.ಬಸವರಾಜ, ಉಪಮಾರುಕಟ್ಟೆ ವ್ಯವಸ್ಥಾಪಕ ಮಾರುತಿ ಹಮಿಲಪುರೆ ಹಾಜರಿದ್ದರು.

Post Comments (+)