ರೇಸಿಂಗ್ ವೇಳೆ ಸಾವನ್ನಪ್ಪಿದ ವೆಲ್ಡನ್

7

ರೇಸಿಂಗ್ ವೇಳೆ ಸಾವನ್ನಪ್ಪಿದ ವೆಲ್ಡನ್

Published:
Updated:

ಲಾಸ್ ವೆಗಾಸ್ (ಎಎಫ್‌ಪಿ): ಇಂಡಿಯಾನಪೊಲೀಸ್ 500 ರೇಸ್‌ನಲ್ಲಿ ಎರಡು ಬಾರಿ ಪ್ರಶಸ್ತಿ ಜಯಿಸಿರುವ ಇಂಗ್ಲೆಂಡ್‌ನ ಡ್ಯಾನ್ ವೆಲ್ಡನ್ ರೇಸಿಂಗ್ ವೇಳೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಲಾಸ್ ವೆಗಾಸ್ 300 ಇಂಡಿಕಾರ್ ಸರಣಿ ಫೈನಲ್‌ನಲ್ಲಿ ಈ ಅವಘಡ ಸಂಭವಿಸಿದೆ.

ಕಾರು ಅಪಘಾತದ ಕಾರಣ ಬೆಂಕಿ ಹತ್ತಿಕೊಂಡಿತು. ಇದರಿಂದ ಮತ್ತಷ್ಟು ಕಾರುಗಳು ಅಪಘಾತಕ್ಕೀಡಾದವು. ತೀವ್ರವಾಗಿ ಗಾಯಗೊಂಡ 33 ವರ್ಷ ವಯಸ್ಸಿನ ವೆಲ್ಡನ್ ಸ್ಥಳದಲ್ಲೇ ಮೃತಪಟ್ಟರು.

`ಇದೊಂದು ಆಘಾತಕಾರಿ ಸುದ್ದಿ. ಇಂಡಿಕಾರ್ ಚಾಲಕರು ಹಾಗೂ ಮಾಲೀಕರು ಈ ರೇಸ್‌ನ್ನು ಇಲ್ಲಿಗೆ ಕೊನೆಗೊಳಿಸಲು ನಿರ್ಧರಿಸಿದ್ದೇವೆ~ ಎಂದು ಇಂಡಿಕಾರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರ‌್ಯಾಂಡಿ ಬರ್ನಾಡ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry