ರೇಸ್... ಚಿಯರ್ಸ್

ಪಿಕ್ಚರ್ ಪ್ಯಾಲೆಸ್
ಕುದುರೆ ರೇಸಿನ ಕಣದಲ್ಲಿ ಇದೆಂಥ ಮಾರ್ಜಾಲ ನಡಿಗೆ? ಭಾನುವಾರ ಬೆಂಗಳೂರಿನಲ್ಲಿ ನಡೆದ ಡರ್ಬಿ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಮಿಂಚಿದ ಬಳ್ಳಿಯಂಥ ಹುಡುಗಿಯರು ಇವರು. ಹಸಿರು ಹುಲ್ಲುಹಾಸಿನ ಮೇಲೆ ಗಾಳಿಯಲೆಗೆ ತೇಲುವಂತೆ ಹೆಜ್ಜೆ ಇಡುತ್ತಿದ್ದ ಇವರ ಕಂಗಳು ಮಾತ್ರ ತಮ್ಮ ಪ್ರೀತಿಯ ಕುದುರೆಯತ್ತಲೇ ನೆಟ್ಟಿದ್ದವು.
ಶರವೇಗದಿಂದ ಓಡುತ್ತಿದ್ದ ಕುದುರೆಯ ಖರಪುಟಗಳ ಸದ್ದಂತೂ ರೇಸಿನಲ್ಲಿ ಕೇಳುವಂತಿರಲಿಲ್ಲ. ಆದರೆ ಇವರ ಖುಷಿಯ ಕೇಕೆ ಗಗನ ಮುಟ್ಟುವಂತಿತ್ತು. ಕತ್ತೆತ್ತಿ ಕೊನೆಯ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಿದ್ದ ಇವರಲ್ಲಿ, ಗೆಲುವಿನ ಆಸೆ, ಸೋಲಿನ ನಿರಾಸೆ, ಹಿಂದಿಕ್ಕಿದ ಸಂಭ್ರಮ, ಹಿಂದೆ ಬಿದ್ದ ನೋವು ಎಲ್ಲ ಮನೆಮಾಡಿತ್ತು. ಇಲ್ಲಿ ಕಣ್ಣು ಮಾತಾಡುತ್ತಿದ್ದವು.
ಚಿತ್ರಗಳು: ಬಿ.ಎಚ್.ಶಿವಕುಮಾರ್, ಶ್ರೀಕಂಠ ಶರ್ಮ ಆರ್.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.