ರೈತರಲ್ಲಿ ಕಾಣದ ಹಬ್ಬದ ಸಂಭ್ರಮ

7

ರೈತರಲ್ಲಿ ಕಾಣದ ಹಬ್ಬದ ಸಂಭ್ರಮ

Published:
Updated:

ಹಿರೇಕೆರೂರ: ತಾಲ್ಲೂಕಿನಲ್ಲಿ ಅಸಮರ್ಪಕ ಮಳೆಯಿಂದಾಗಿ ಉತ್ತಮ ಬೆಳೆಯನ್ನು ಕಾಣದೇ ಸಂಕಷ್ಟದಲ್ಲಿದ್ದ ರೈತ ಸಮುದಾಯ ಬಿ.ಟಿ.ಹತ್ತಿ ಬೆಳೆಗೆ ಹಲವಾರು ರೋಗಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸದಂತೆ ಆಗಿದೆ.ನಾಲ್ಕು ವರ್ಷಗಳಿಂದೀಚೆಗೆ ಅತೀ ಕಡಿಮೆ ಮಳೆಯಾದ ವರ್ಷ ಇದಾಗಿದೆ. ಸಕಾಲಕ್ಕೆ ಸಾಕಷ್ಟು ಮಳೆಯಾಗದೇ ಇರುವುದರಿಂದ ಸಾಧಾರಣವಾಗಿದ್ದ ಬಿ.ಟಿ.ಹತ್ತಿ ಬೆಳೆ ರೋಗದ ಕಾರಣ ದಿಂದ ಎಲೆ ಹಾಗೂ ಕಾಯಿಗಳು ಕೆಂಪು ಬಣ್ಣಕ್ಕೆ ತಿರುಗುತ್ತಿದ್ದು, ಅಕಾಲಿಕವಾಗಿ ಬಾಡುತ್ತಿವೆ. ಎಲೆ ಮತ್ತು ಹೂವು ಉದುರುತ್ತಿವೆ. ಉತ್ತಮ ಫಸಲು ಬರ ಲಿದೆ ಎಂಬ ರೈತರ ಭರವಸೆಯ ಮೇಲೆ `ಬರೆ~ ಬಿದ್ದಿದೆ.ಕೆಲವು ಕಡೆಗಳಲ್ಲಿ `ಜಂಗು ರೋಗ~ದ  ಲಕ್ಷಣಗಳು ಕಾಣಿಸಿಕೊಂಡಿವೆ. ಮತ್ತೆ ಕೆಲವು ಕಡೆ ರಸ ಹೀರುವ ಕೀಟದ ಬಾಧೆ ಕಂಡು ಬಂದಿದ್ದು, ಇನ್ನು ಕೆಲವೆಡೆ ಪೋಷಕಾಂಶಗಳ ಕೊರತೆಯಿಂದ ಹತ್ತಿ ಬೆಳೆ ಅನಾರೋಗ್ಯಕರವಾಗಿ ಕಾಣುತ್ತಿವೆ. ಈ ಎಲ್ಲ ಬಾಧೆಗಳಿಂದ ಇಳು ವರಿಯ ಮೇಲೆ ಭಾರಿ ಹೊಡೆತ ಬೀಳ ಲಿದೆ ಎಂಬುದು ರೈತರ ಆತಂಕಕ್ಕೆ ಕಾರಣವಾಗಿದೆ.`ಹಿಂದಿನ ವರ್ಷಗಳಲ್ಲಿ ಬಿ.ಟಿ.ಹತ್ತಿ ಯನ್ನು ಪ್ರತಿ ಎಕರೆಗೆ 12-15 ಕ್ವಿಂಟಲ್‌ವರೆಗೆ ಬೆಳೆದಿದ್ದೆವು. ಈ ವರ್ಷ ವಿವಿಧ ರೋಗಗಳಿಂದಾಗಿ 6-7 ಕ್ವಿಂಟಲ್ ಸಹ ಬರುವ ಭರವಸೆ ಇಲ್ಲ. ಇದರಿಂದ ಮಾಡಿದ ಖರ್ಚಿನಷ್ಟು ಉತ್ಪಾದನೆ ಬರುವ ಸಾಧ್ಯತೆ ಇಲ್ಲ~ ಎನ್ನುತ್ತಾರೆ ತಾವರಗಿ ಗ್ರಾಮದ ರೈತ ಶಂಕ್ರಗೌಡ ಅಜ್ಜಪ್ಪನವರ.ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಹಾ ಯಕ ಕೃಷಿ ನಿರ್ದೇಶಕ ಡಾ.ಪಿ.ಸೇವಾ ನಾಯ್ಕ “ತಾಲ್ಲೂಕಿನಲ್ಲಿ ಹತ್ತಿ ಬೆಳೆ ಯಲ್ಲಿ ರಸ ಹೀರುವ ಕೀಟ (ಮಿರಿಡ್ ಬಗ್)ದ ಬಾಧೆ ಕಂಡು ಬಂದಿದ್ದು, ನಿಯಂತ್ರಣಕ್ಕೆ ಅಸಿಪೇಟ್ 1ಗ್ರಾಂನ್ನು ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.

 

ಜಂಗು ರೋಗದ ಲಕ್ಷಣಗಳು ಇದ್ದಲ್ಲಿ ಮೊನೊಕ್ರೋಟ ಪಾಸ್ ಅಥವಾ ಕೋರೋಫೆರಿಪಾಸ್‌ನ್ನು ಸಿಂಪರಣೆ ಮಾಡಬೇಕು. ಮೆಗ್ನೇಷಿಯಂ ಕೊರತೆಯಿಂದಾಗಿ ಎಲೆ ಹಾಗೂ ಕಾಯಿಗಳು ಕೆಂಪು ಬಣ್ಣಕ್ಕೆ ತಿರುಗುತ್ತಿವೆ. ಮೆಗ್ನೇಷಿಯಂ ದ್ರಾವಣ ಸಿಂಪರಣೆ ಮಾಡುವ ಮೂಲಕ ನಿಯಂತ್ರಣ ಮಾಡಬಹುದು” ಎಂದು ತಿಳಿಸಿದರು.“ಕೇವಲ ರಾಸಾಯನಿಕ ಗೊಬ್ಬರ ಗಳ ಅಸಮರ್ಪಕ ಬಳಕೆಯಿಂದ ಭೂಮಿಯಲ್ಲಿನ ಫಲವತ್ತತೆ ನಾಶ ವಾಗಲಿದೆ. ಸಾವಯವ ಕೃಷಿಯ ಮೂಲಕ, ಎರೆಹುಳು ಗೊಬ್ಬರ ಬಳಕೆಯ ಮೂಲಕ ಹಾಗೂ ಬೇವಿನ ಬೀಜದ ಕಷಾಯಿ ಬಳಸುವ ಮೂಲಕ ಎಲ್ಲ ಬೆಳೆಗಳಲ್ಲಿ ರೋಗಗಳು ಬಾರ ದಂತೆ ನಿಯಂತ್ರಿಸಲು ಸಾಧ್ಯವಿದೆ” ಎಂದು ಅವರು ತಿಳಿಸಿದರು.ತಾಲ್ಲೂಕಿನಲ್ಲಿ ಒಟ್ಟು ಬಿತ್ತನೆ ಕ್ಷೇತ್ರ 56867 ಹೆಕ್ಟರ್ ಪೈಕಿ ಗೋವಿನ ಜೋಳವನ್ನು 30718 ಹೆಕ್ಟರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಬಿ.ಟಿ.ಹತ್ತಿ ಯನ್ನು 21707 ಹೆಕ್ಟರ್‌ನಲ್ಲಿ ಬಿತ್ತನೆ ಮಾಡಲಾಗಿದ್ದು, ಉಭಯ ವಾಣಿಜ್ಯ ಬೆಳೆಗಳು ಹಿಂದಿನ ವರ್ಷಗಳಂತೆ ಸಾಕಷ್ಟು ಇಳುವರಿ ನೀಡದ ಹಿನ್ನೆಲೆ ಯಲ್ಲಿ ರೈತರು ಸಂತಸದಿಂದ ಬೆಳಕಿನ ಹಬ್ಬ ಆಚರಿಸಲು ಆಗುತ್ತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry