ರೈತರಿಂದ ಖರೀದಿಸುವ ಹಾಲು ದರ ₨ 1.25 ಹೆಚ್ಚಳ

7

ರೈತರಿಂದ ಖರೀದಿಸುವ ಹಾಲು ದರ ₨ 1.25 ಹೆಚ್ಚಳ

Published:
Updated:

ತುಮಕೂರು: ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ₨ 1.25 ದರ ಹೆಚ್ಚಿಸಲಾಗಿದೆ ಎಂದು ತುಮಕೂರು ಹಾಲು ಒಕ್ಕೂಟ ತಿಳಿಸಿದೆ.ಹೊಸ ದರವು ಜ. 1ರಿಂದ ಜಾರಿಯಾಗಲಿದೆ. ಹಾಲು ಉತ್ಪಾದಕರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ₨ 22.25, ಸಹಕಾರ ಸಂಘದಿಂದ ಒಕ್ಕೂಟ ಖರೀದಿಸುವ ಪ್ರತಿ ಕೆ.ಜಿ. ಹಾಲಿಗೆ ₨ 22.76 ದರ ನಿಗದಿಯಾಗಿದೆ (ಶೇ 3.5 ಜಿಡ್ಡು ಹಾಗೂ ಶೇ 8.5 ಎಸ್‌ಎನ್‌ಎಫ್‌). ಬರಗಾಲದಿಂದ ಕಂಗಾಲಾಗಿರುವ ರೈತರ ಆರ್ಥಿಕ ಸ್ಥಿತಿ ಸುಧಾರಿಸುವ ಉದ್ದೇಶದಿಂದ ಡೇರಿ ಬೆಲೆ ಹೆಚ್ಚಳದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry