ರೈತರಿಂದ ಜಾಕ್‌ವೆಲ್‌ಗೆ ಮುತ್ತಿಗೆ

7

ರೈತರಿಂದ ಜಾಕ್‌ವೆಲ್‌ಗೆ ಮುತ್ತಿಗೆ

Published:
Updated:

ಸವದತ್ತಿ: ತಾಲ್ಲೂಕಿನ ಹೂಲಿ ಗ್ರಾಮದ ಸುತ್ತಮುತ್ತಲಿನ ಪರಿಸರದಲ್ಲಿ ಬೆಳೆದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಸಂಬಂಧಪಟ್ಟವರು ತಕ್ಷಣ ಕಾಲುವೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಕರವೇ ಕಾರ್ಯಕರ್ತರು ಹಾಗೂ ರೈತರು ಶುಕ್ರವಾರ ರಸ್ತೆ ತಡೆ ನಡೆಸಿ ಹಾಗೂ ಏತ ನೀರಾವರಿ ಜಾಕ್‌ವೆಲ್‌ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.ಕಾಲುವೆಗೆ ಒಂದು ತಿಂಗಳಿಂದ ನೀರು ಹರಿಸದ ಕಾರಣ ಪೈರುಗಳು ಒಣಗುತ್ತಿವೆ. ಕಾಲುವೆಗೆ ನೀರು ಹರಿಸದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು. ಪಂಚನಗೌಡ ದ್ಯಾಮನಗೌಡರ ಅವರು  ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ವಾರ ನೀರು ಹರಿಸುವುದಾಗಿ ಕಳೆದ ವಾರ ಹೇಳಿದ್ದೀರಿ. ಈಗ ಮತ್ತೆ ಅದೇ ಮಾತನ್ನೇ ಹೇಳುತ್ತಿದ್ದೀರಿ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.ಸಹಾಯಕ ಎಂಜಿನಿಯರ್ ಎ.ಎಸ್. ಕಂಡಪ್ಪನವರ, ಹಳೆಯಯಂತ್ರ ಇವೆ. ಅವುಗಳ ದುರಸ್ತಿಗೆ ಅನುದಾನ ಲಭ್ಯವಿಲ್ಲ. ಹೀಗಾಗಿ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಆದರೂ ಸಾಧ್ಯವಿರುವ ಕ್ರಮಕೈಗೊಳ್ಳ ಲಾಗುವುದು ಎಂದು ಭರವಸೆ ನೀಡಿದರು.ರೈತ ನಾಗಪ್ಪ ಕಾರ್ಲಕಟ್ಟಿ, ವಿರೂಪಾಕ್ಷ ತೊರಗಲ. ಅಶೋಕ ಕುಲಕರ್ಣಿ, ಕರವೇ ಅಧ್ಯಕ್ಷ ಮಹಾದೇವ ಕಿಚಡಿ, ಹನಂತ ಗೊರಮ ಕೊಳ್ಳ, ಸಿದ್ದಪ್ಪ ಪೂಜೇರ ಹಾಗೂ ನೂರಾರು ರೈತರು ಹಾಗೂ ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry