ಸೋಮವಾರ, ಏಪ್ರಿಲ್ 12, 2021
30 °C

ರೈತರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತರಿಂದ ಬೃಹತ್ ಪ್ರತಿಭಟನಾ ಮೆರವಣಿಗೆ

ಗೋಕಾಕ: ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿ ರೈತರು ಪಡೆದ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವಂತೆ ಆಗ್ರಹಿಸಿ ನಾಗರಿಕ ಹಿತ ರಕ್ಷಣಾ ವೇದಿಕೆ ಆಶ್ರಯದಲ್ಲಿ ಶುಕ್ರವಾರ ನಗರದಲ್ಲಿ ನಡೆದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.ನಗರದ ಕೊಳವಿ ಹನುಮಂತ ದೇವಸ್ಥಾನ ಆವರಣದದಿಂದ ಆರಂಭವಾದ ಮೆರವಣಿಗೆಯಲ್ಲಿ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಅಶೋಕ ಪೂಜೇರಿ ಹಾಗೂ ಜಿ.ಪಂ. ಅಧ್ಯಕ್ಷ ಈರಣ್ಣ ಕಡಾಡಿ ಸೇರಿದಂತೆ ಕೃಷಿಕರು, ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.ಅಪ್ಸರಾ ಕೂಟ, ರಾಯಣ್ಣ ವೃತ್ತ ಹಾಗೂ ಬಸ್ ನಿಲ್ದಾಣದ ರಸ್ತೆಯ ಮೂಲಕ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನೆ ನಡೆಯಿತು.ಅಶೋಕ ಪೂಜೇರಿ ಮಾತನಾಡಿ, ಯಾವ ವ್ಯವಸ್ಥೆಯ ಬಗ್ಗೆಯಾಗಲಿ, ಸರ್ಕಾರದ ವಿರುದ್ಧವಾಗಲಿ ಪ್ರತಿಭಟನೆ ನಡೆಸುತ್ತಿಲ್ಲ. ಭೀಕರ ಬರಗಾಲದ ಹಿನ್ನೆಲೆ ಯಲ್ಲಿ ಕೃಷಿಕರು ತೊಂದರೆಗೆ ಸಿಲುಕಿದ್ದು, ಅವರ ಬೇಡಿಕೆಗಳ ಈಡೇರಿಕೆಗೆ ಹೋರಾಟಕ್ಕಿಳಿದಿದ್ದೇವೆ. ಕಾರಣ ನೀಡದೇ ವಿಧವಾ, ಅಂಗವಿಲಕಲ ಹಾಗೂ ವೃದ್ಧಾಪ್ಯ ವೇತನವನ್ನು ತಡೆಹಿಡಿದಿರುವ ತಾಲ್ಲೂಕು ಆಡಳಿತದ ಕ್ರಮವನ್ನು ಖಂಡಿಸಿದ ಅವರು ಶೀಘ್ರವೇ ಮಾಸಾಶನ ಆರಂಭಿಸಬೇಕು ಎಂದು ಆಗ್ರಹಿಸಿದರು.ಜಿ.ಪಂ. ಅಧ್ಯಕ್ಷ ಈರಣ್ಣ ಕಡಾಡಿ ಮಾತನಾಡಿ, ಈಚೆಗೆ ರಾಜ್ಯ ಸರ್ಕಾರ ಮನ್ನಾ ಮಾಡಿರುವ ಸಾಲದ ಸೌಲಭ್ಯವನ್ನು ಜಿಲ್ಲೆಯ 2,77,382 ರೈತರು ಹಾಗೂ ತಾಲ್ಲೂಕಿನ 32,923 ರೈತರು ಪಡೆದುಕೊಂಡಿದ್ದಾರೆ. ಕೇಂದ್ರ ಸರ್ಕಾರದ ವ್ಯಾಪ್ತಿಯ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೇ75 ರಷ್ಟು ರೈತರು ಸಾಲ ಪಡೆದುಕೊಂಡಿದ್ದು ಕೇಂದ್ರ ಸರ್ಕಾರ ಸಾಲವನ್ನು ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.ರೈತರು ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಸ್ವಾಮೀಜಿ, ದಯಾನಂದ ಸರಸ್ವತಿ, ಜಿ.ಪಂ. ಸದಸ್ಯರಾದ ರಮೇಶ ಉಟಗಿ, ಪರಮೇಶ್ವರ ಹೊಸಮನಿ, ವಾಸುದೇವ ಸವತಿಕಾಯಿ ಹಾಗೂ ಭೀಮಶಿ ಮಗದುಮ್ಮ, ಬಸವಣ್ಣೆಪ್ಪ ಕಂಬಾರ, ಭೀಮಶಿ ಗಡಾದ, ಶಂಕರಗೌಡ ಪಾಟೀಲ, ಜಯಾನಂದ ಮುನವಳ್ಳಿ, ಬಿ.ಆರ್.ಕೊಪ್ಪ.  ಶಂಕರಗೌಡ ಪಾಟೀಲ, ಶಿವಪುತ್ರಪ್ಪ ಜಕಬಾಳ, ದುಂಡಪ್ಪ ಚೌಕಶಿ, ತಮ್ಮಣ್ಣ ಪಾರ್ಶಿ, ಲಕ್ಷ್ಮಣ ಹುಳ್ಳೇರ, ಈಶ್ವರ ಕತ್ತಿ, ಬಸವಣ್ಣೆಪ್ಪ ಕಂಬಾರ ಪ್ರತಿಭಟನೆಯಲ್ಲಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.