ಬುಧವಾರ, ನವೆಂಬರ್ 20, 2019
20 °C

ರೈತರಿಂದ ಹೊಸ ಟ್ರಾನ್ಸ್‌ಫಾರ್ಮರ್ ಬೇಡಿಕೆ;ಹೆಸ್ಕಾಂ ಎದುರು ಅನಿರ್ಧಿಷ್ಟಾವಧಿ ಪ್ರತಿಭಟನೆ

Published:
Updated:

ಹಿರೇಕೆರೂರ: ತಾಲ್ಲೂಕಿನಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಗೆ 50 ಹೊಸ ಟಾನ್ಸ್ ಫಾರ್ಮರ್‌ಗಳನ್ನು ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತಸಂಘದ ಕಾರ್ಯಕರ್ತರು ಗುರುವಾರ ಪಟ್ಟಣದ ಹೆಸ್ಕಾಂ ಕಚೇರಿಯ ಎದುರು ಅನಿರ್ದಿ ಷ್ಟಾವಧಿ ಪ್ರತಿಭಟನೆ ಆರಂಭಿಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ತಾಲೂಕಿನಲ್ಲಿ ಮಳೆ ಬಾರದೇ ಬೆಳೆಗಳು ಒಣಗುತ್ತಿವೆ. ಬೆಳೆಗಳು ಹಾಳಾ ಗುವುದನ್ನು ತಪ್ಪಿಸಲು ರೈತರು ಕೊಳವೆ ಬಾವಿಗಳನ್ನು ಕೊರೆಸಿ ವಿದ್ಯುತ್ ಸಂಪರ್ಕ ಪಡೆಯುತ್ತಿದ್ದು, ಹೆಚ್ಚಿನ ವಿದ್ಯುತ್ ಒತ್ತಡ ತಡೆದುಕೊಳ್ಳಲು ಆಗದೇ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋಗುತ್ತಿವೆ.ಇದರಿಂದ ರೈತರು ಮತ್ತಷ್ಟು ತೊಂದರೆಗೆ ಒಳಗಾ ಗುತ್ತಿದ್ದಾರೆ. ಆದ್ದರಿಂದ 25 ಕೆ.ವಿ. ಸಾಮರ್ಥ್ಯದ ಎಲ್ಲ ಟ್ರಾನ್ಸ್‌ಫಾರ್ಮರ್‌ಗಳನ್ನು ಬದಲಾಯಿಸಿ, 100ಕೆ.ವಿ. ಸಾಮರ್ಥ್ಯದ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.ಈ ಬಗ್ಗೆ ಸೋಮವಾರ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಅಧಿಕಾರಿಗಳು ನೀಡಿದ ಭರವಸೆ ಕಾರ್ಯರೂಪಕ್ಕೆ ಬಂದಿಲ್ಲ, ಟ್ರಾನ್ಸ್‌ಫಾರ್ಮರ್ ಮತ್ತು ಪಂಪ್‌ಸೆಟ್‌ಗಳು ಸುಟ್ಟು ರೈತ ಸಮುದಾಯ ಸಂಕಷ್ಟ ಎದುರಿ ಸುತ್ತಿದ್ದರೂ ರೈತರನ್ನು ಹೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಕೂಡಲೇ 100 ಕೆ.ವಿ. ಟ್ರಾನ್ಸ್ ಫಾರ್ಮರ್‌ಗಳನ್ನು ಪೂರೈಸಲು ಕ್ರಮ ಕೈಗೊಂಡು ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು.ಅಲ್ಲಿಯವರೆಗೆ ಹಗಲು-ರಾತ್ರಿ ಪ್ರತಿಭಟನೆ ನಡೆಸಲು ಸಿದ್ಧರಾಗಿ ಬಂದಿದ್ದೇವೆ ಎಂದು ತಿಳಿಸಿದರು.

ತಾಲ್ಲೂಕಿನಲ್ಲಿ ಬಹಳಷ್ಟು ಕಡೆಗಳಲ್ಲಿ 25 ಕೆ.ವಿ. ಸಾಮರ್ಥ್ಯದ ಹಳೆಯ ಟ್ರಾನ್ಸ್ ಫಾರ್ಮರ್‌ಗಳಿವೆ. ಇವುಗಳಿಗೆ ಕೇವಲ 5 ಕೊಳವೆ ಬಾವಿಗಳ ಸಂಪರ್ಕ ಕಲ್ಪಿಸುವ ಸಾಮರ್ಥ್ಯ ಇದ್ದರೂ ಕೆಲವು ಟ್ರಾನ್ಸ್‌ಫಾರ್ಮರ್‌ಗಳಿಗೆ 15 ಕೊಳವೆ ಬಾವಿಗಳ ಸಂಪರ್ಕ ಕಲ್ಪಿಸಿದ ಉದಾಹರಣೆ ಕಾಣಬಹುದು. ಇದರಿಂದ ಟ್ರಾನ್ಸ್‌ಫಾರ್ಮರ್ ಹಾಳಾಗಿ ಹೋಗುತ್ತಿವೆ. ಕಾರಣ ಇವುಗಳನ್ನು ಬದಲಾಯಿಸಿ 100 ಕೆ.ವಿ. ಸಾಮರ್ಥ್ಯದ 50 ಟ್ರಾನ್ಸ್‌ಫಾರ್ಮರ್‌ಗಳನ್ನು ನೀಡ ಬೇಕು ಎಂದು ಒತ್ತಾಯಿಸಿದರು.ರೈತಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಗಂಗಪ್ಪನವರ, ತಾಲ್ಲೂಕಿನ ಸಾವಯವ ಕೃಷಿ ಬಳಗದ ಅಧ್ಯಕ್ಷ ಸೋಮಣ್ಣ ಚಪ್ಪರದಹಳ್ಳಿ, ರೈತ ಮುಖಂಡರಾದ ಫಯಾಜ್‌ಸಾಬ್ ದೊಡ್ಡಮನಿ, ರಿಜ್ವಾನ್‌ಸಾಬ್ ದೊಡ್ಡ ಮನಿ, ಮಹೇಶ ಕೊಟ್ಟೂರ, ರುದ್ರಪ್ಪ ಆಣೂರ, ಮಹೇಶಪ್ಪ ಹುಲ್ಲತ್ತಿ, ಪ್ರಭು ಪ್ಯಾಟಿ, ಗಂಗನಗೌಡ ಮುದಿಗೌಡ್ರ, ಹೂವನಗೌಡ ಮಳವಳ್ಳಿ, ಶಂಕ್ರಗೌಡ ಮಕ್ಕಳ್ಳಿ  ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)