`ರೈತರಿಗಾಗಿ ಅಧಿಕಾರ ತ್ಯಾಗಕ್ಕೂ ಸಿದ್ಧ'

7

`ರೈತರಿಗಾಗಿ ಅಧಿಕಾರ ತ್ಯಾಗಕ್ಕೂ ಸಿದ್ಧ'

Published:
Updated:

ಹುಣಸಗಿ: ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವುದು ಈ ಭಾಗದ ರೈತರು ನನಗೆ ನೀಡಿದ ಬಿಕ್ಷೆ. ಅಂತಹ ಪರಿಸ್ಥಿತಿ ಬಂದಲ್ಲಿ ರೈತರಿಗಾಗಿ ನಾವು ಅಧಿಕಾರದಿಂದ ಹೊರಬರಲು ಸಿದ್ಧ. ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರು ಎರಡನೇ ಅವಧಿಗೆ ನೀರು ಹರಿಸುವ ವಿಷಯದಲ್ಲಿ ಯಾರೂ ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜುಗೌಡ ತಿಳಿಸಿದರು.ಹುಣಸಗಿ ಸಮೀಪದ ನಾರಾಯಣಪುರದಲ್ಲಿ ಕೃಷ್ಣಾ ಭಾಗ್ಯಜಲ ನಿಗಮದ ಅಧಿಕಾರಿಗಳ ಸಭೆ ನಂತರ ಈ ವಿಷಯ ಸ್ಪಷ್ಟಪಡಿಸಿದರು.ನಾರಾಯಣಪುರ ಮತ್ತು ಆಲಮಟ್ಟಿ ಅವಳಿ ಜಲಾಶಯಗಳ ಸ್ಥಿತಿಗತಿಯನ್ನು ಅವಲೋಕಿಸಿದ್ದು ಸದ್ಯ ಎರಡು ಜಲಾಶಯಗಳಲ್ಲಿ ಸುಮಾರು 79.125 ಟಿಎಂಸಿ ನೀರು ಇದ್ದು ಅದರಲ್ಲಿ ಕೃಷಿ ಬಳಕೆಗೆ ಸುಮಾರು 57.125 ಟಿಎಂಸಿ  ನೀರಿನ ಲಭ್ಯತೆ ಇದೆ. ಅದಕ್ಕನುಗಣವಾಗಿ  ನೀರು ಹರಿಸಲಾಗುವುದು. ನಂತರ ಆಯಾ ವಿಭಾಗದ ವ್ಯಾಪ್ತಿಯ ವಿತರಣಾ ಕಾಲುವೆಗೆ ಅಗತ್ಯಕ್ಕನುಗುಣವಾಗಿ ವಾರಾಬಂದಿ ಮಾಡಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಇದರಿಂದಾಗಿ ಮಾರ್ಚ್ 10ರ ವರೆಗೆ ನೀರು ಹರಿಸಲು ಸಾಧ್ಯವಾಗುತ್ತದೆ.ಸೋಮವಾರವೇ ಕೃಷ್ಣಾ ಅಚ್ಚುಕಟ್ಟು ಪ್ರದೇಶ ಶಾಸಕರ ನಿಯೋಗದೊಂದಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಮತ್ತು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅರೊಂದಿಗೆ ಮಾತನಾಡಿ, ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಿ ಮಹಾರಾಷ್ಟ್ರ ಸರ್ಕಾರರೊಂದಿಗೆ ಮಾತುಕತೆ ನಡೆಸಿ ಕೊಯ್ನಾ ಜಲಾಶಯದಿಂದ ಸುಮಾರು 15 ಟಿಂ.ಸಿ. ನೀರು ತರಿಸಲು ಕ್ರಮಗೊಳ್ಳುವದಾಗಿ ಭರವಸೆ ನೀಡಿದರು.ಇದು ತುಂಬಾ ಸಂಕಷ್ಟದ ಕಾಲವಾಗಿದ್ದು ರೈತರು ಅಧಿಕಾರಿಗಳಿಗೆ ಸಹಕರಿಸಿ ನೀರನ್ನು ಮಿತವಾಗಿ ಬಳಸಿ ಹಿಂದಿನ ಭಾಗದ ರೈತರಿಗೂ ನೀರನ್ನು ಒದಗಿಸಿಕೊಡುವ ಅನಿವಾರ್ಯತೆ ಇದೆ. ಆದ್ದರಿಂದ ಮಿತವಾಗಿ ನೀರನ್ನು ಬಳಸಿ ಎಂದರು.ಸಭೆಯಲ್ಲಿ ರಾಜಾ ಹನುಮಪ್ಪನಾಯಕ ತಾತಾ, ರೈತ ಮುಖಂಡರಾದ ನಾಗಣ್ಣ ದಂಡಿನ್, ಚಂದ್ರಶೇಖರಗೌಡ ಮಾಗನೂರ, ಸಂಗನಗೌಡ ವಜ್ಜಲ, ಯಲ್ಲಪ್ಪ ಕುರಕುಂದಿ, ಗದ್ದೆಪ್ಪ ಪೂಜಾರಿ, ವಿರೇಶ ಚಿಂಚೋಳಿ, ಬಸವರಾಜ ಸ್ಥಾವರಮಠ, ರಾಜು ಹವಾಲ್ದಾರ, ಗೌಡಪ್ಪಬಾಲಗೌಡ್ರ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

ಮುಂಜಾಗ್ರತಾ ಕ್ರಮವಾಗಿ ಹುಣಸಗಿ ಸಿಪಿಐ ಸತ್ಯನಾರಾಯಣ ನೇತೃತ್ವದಲ್ಲಿ  ಪೊಲೀಸ್  ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry