ಮಂಗಳವಾರ, ಮಾರ್ಚ್ 2, 2021
31 °C
198ನೇ ದಿನದತ್ತ ಹೋರಾಟ; ಪ್ರಧಾನಿಗೆ ಮನವಿ

ರೈತರಿಗೆ ಆಸರೆಯಾಗಿ: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈತರಿಗೆ ಆಸರೆಯಾಗಿ: ಆಗ್ರಹ

ನರಗುಂದ: ಮಹಾದಾಯಿ ಯೋಜನೆ ಜಾರಿಗೆ ಖುದ್ದಾಗಿ ಪ್ರಧಾನಿಮಂತ್ರಿ ಮುಂದಾಗಬೇಕು ಎಂದು ರೈತ ಸಂಘದ ಶಹರ ಘಟಕದ ಅಧ್ಯಕ್ಷ ವಿಠ್ಠಲ ಜಾಧವ ಆಗ್ರಹಿಸಿದರು.ಪಟ್ಟಣದಲ್ಲಿ ನಡೆಯುತ್ತಿರುವ ಮಹಾದಾಯಿ ಧರಣಿಯ 198ನೇ ದಿನವಾದ ಶುಕ್ರವಾರ ಮಾತನಾಡಿದರು.  ಈ ಭಾಗದ ಜನಪ್ರತಿನಿಧಿಗಳು ಸ್ವಾರ್ಥಕ್ಕಾಗಿ ನಮ್ಮನ್ನೇ ಬಲಿ ಕೊಡುವ ಹುನ್ನಾರ ನಡೆಸಿದ್ದಾರೆ. ಅವರಿಗೆ ಈ ಯೋಜನೆ ಆಗುವುದು ಬೇಕಿಲ್ಲ. ಅವರಿಂದ ನಮಗೆ ನೀರು ಬರುವುದು ಕನಸಾಗಿದೆ ಎಂದು ಹೇಳಿದರು.ಇಡೀ ಭಾರತದ ರೈತ ಚಳವಳಿಯಲ್ಲಿ ಮಹಾದಾಯಿ ಹೋರಾಟ ದಾಖಲೆಯಾಗಿದೆ. ಮುಖ್ಯಮಂತ್ರಿ ಗೋವಾಗೆ ಪತ್ರ ಬರೆಯುತ್ತೇನೆ, ಸಚಿವರ ನಿಯೋಗ ಕಳಿಸಿಕೊಡುತ್ತೇನೆ ಎಂದು ತಿಂಗಳು ಗತಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.ಹೋರಾಟದ ವೇದಿಕೆಗೆ ರೈತರು ಹಸಿರು ಬಣ್ಣ ಬಳಿಯುವ ಮೂಲಕ ವೇದಿಕೆಗೆ ಚೈತನ್ಯ ತುಂಬಿದರು. ಧರಣಿಯಲ್ಲಿ ಶ್ರೀಶೈಲ ಮೇಟಿ, ರಾಘವೇಂದ್ರ ಗುಜಮಾಗಡಿ, ಚನ್ನಪ್ಪಗೌಡ ಪಾಟೀಲ, ಎಸ್‌.ಬಿ.ಕೊಣ್ಣೂರು, ಬಸಮ್ಮ ಐನಾಪೂರ, ಎಸ್‌.ಕೆ.ಗಿರಿಯಣ್ಣವರ, ಈರಣ್ಣ ಗಡಗಿ, ಎಲ್‌.ಬಿ.ಮುನೇನಕೊಪ್ಪ, ಸಿ.ಎಸ್‌.ಪಾಟೀಲ, ಎಸ್‌.ಬಿ.ಕೊಣ್ಣೂರು, ರುದ್ರಯ್ಯ ಕುರವತ್ತಿಮಠ, ಪುಂಡಲೀಕ, ಎಸ್‌.ಕೆ.ಗಿರಿಯಣ್ಣವರ ಇದ್ದರು.ಸರ್ಕಾರ ಹೋರಾಟವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನ್ಯಾಯಮಂಡಳಿ ರಚಿಸಿ ಸರ್ಕಾರಗಳು ಕೈ ತೊಳೆದುಕೊಂಡಿವೆ

- ವೀರಬಸಪ್ಪ ಹೂಗಾರ,


ಮಹಾದಾಯಿ ಹೋರಾಟ ಸಮಿತಿ ಅಧ್ಯಕ್ಷ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.