ಬುಧವಾರ, ಜೂನ್ 16, 2021
22 °C

ರೈತರಿಗೆ ಕಣ್ಣೀರು ತರಿಸಿದ ಒಣ ಮೆಣಸಿನಕಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ರೈತರ ಕಣ್ಣಲ್ಲಿ ಈಗ ನೀರು ತರಿಸುವ ಸರದಿ ಒಣ ಮೆಣಸಿನಕಾಯಿಯದು. ವರ್ಷದ ಹಿಂದೆ ಕ್ವಿಂಟಲ್ ಒಣ ಮೆಣಸಿನಕಾಯಿಗೆ  ₨22 ಸಾವಿರ ಇತ್ತು. ಈಗ ₨ 11 ಸಾವಿರಕ್ಕೆ ಕುಸಿದಿದೆ. ಇನ್ನೊಂದೆಡೆ ಇಳುವರಿ ಕೂಡ ಎಕರೆಗೆ 15ರಿಂದ 8 ಕ್ವಿಂಟಲ್‌ನಷ್ಟು ಕಡಿಮೆಯಾಗಿದ್ದು, ರೈತರಲ್ಲಿ ಆತಂಕಕ್ಕೀಡು ಮಾಡಿದೆ.ಮೆಣಸಿನ ಕಾಯಿ ಬೆಳೆದು ಲಾಭ ಗಿಟ್ಟಿಸುತ್ತಿದ್ದ ರೈತರೀಗ ನಷ್ಟದ ಪ್ರಮಾಣ ಲೆಕ್ಕ ಹಾಕುತ್ತಿದ್ದಾರೆ. ತಾಲ್ಲೂಕಿನ ತಂಬ್ರಹಳ್ಳಿಯ ರೈತ ಮ್ಯಾಗಳ ಮನಿ ಶಿವಾನಂದಪ್ಪ ಹಾಗೂ ತೋಟೇಶ್ ಎಂಬುವವರು 4.5 ಎಕರೆ ನೀರಾವರಿ ಜಮೀನಿನಲ್ಲಿ ಕೇವಲ 36 ಕ್ವಿಂಟಲ್ ಬೆಳೆದು ನಷ್ಟಕ್ಕೀಡಾಗಿದ್ದಾರೆ.  ಕಳೆದ ವರ್ಷ ಇದೇ ಜಮೀನಿನಲ್ಲಿ 50 ಕ್ವಿಂಟಲ್ ಬೆಳೆದಿದ್ದರು. ಉತ್ತಮ ಬೆಳೆ ಜೊತೆಗೆ ಬೆಲೆಯೂ ಹೆಚ್ಚಾಗಿ ಇದ್ದಿದ್ದರಿಂದ ನಿರೀಕ್ಷೆಗೂ ಮೀರಿ ಲಾಭ ಗಳಿಸಿದ್ದರು.ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಬೆಳೆಗೆ ಮುಟುರು ರೋಗ ಹಾಗೂ ಬೂದಿ ರೋಗ ಆವರಿಸಿ, ಇಳುವರಿ ಕಡಿಮೆಯಾಯಿತು. ತಾಲ್ಲೂಕಿನ ರೈತರು ಹಿಂಗಾರಿಗೆ 2250 ಎಕರೆ ಮೆಣಸಿನಕಾಯಿ ಬೆಳೆದಿದ್ದು, ಬಹುತೇಕ ರೈತರು ನಷ್ಟದ ಹಾದಿಯಲ್ಲಿದ್ದಾರೆ.ಬ್ಯಾಡಗಿ ಮಾರುಕಟ್ಟೆಯಲ್ಲಿ ಹಗರಿಬೊಮ್ಮನಹಳ್ಳಿಯ ಮೆಣಸಿನ ಕಾಯಿಗೆ ಪ್ರತಿಬಾರಿ ಉತ್ತಮ ಬೆಲೆ ದೊರೆಯುತ್ತಿತ್ತು ಈ ಬಾರಿ ಬೆಲೆ ಇಳಿದಿದ್ದು ಹಾಕಿದ ಬಂಡವಾಳ ಬರದಂತಹ ಪರಿಸ್ಥಿತಿ ಎದುರಾಗಿದೆ ಎನ್ನುತ್ತಾರೆ ರೈತ ಮ್ಯಾಗಳಮನಿ ತೋಟೇಶ್. ಈರುಳ್ಳಿ ಬೆಲೆಯ ದಿಢೀರ್ ಕುಸಿತದಿಂದಾಗಿ ರೈತರು ಕಣ್ಣೀರು ಹರಿಸುತ್ತಿರುವ ಬೆನ್ನಲ್ಲೇ ಮೆಣಸಿನಕಾಯಿ ಬೆಳೆದ ರೈತರು ಅವರೊಂದಿಗೆ ಸೇರಿಕೊಂಡಂತಾಗಿದೆ. ರೈತರ ಮುಖ ಬಾಡುವಂತೆ ಮಾಡಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.