ಗುರುವಾರ , ನವೆಂಬರ್ 14, 2019
22 °C

ರೈತರಿಗೆ ತಲುಪದ ಕಾರ‌್ಯಕ್ರಮಗಳು

Published:
Updated:

ರೈತರ ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳಲ್ಲಿ ಕೃಷಿ ಪರಿಕರಗಳಿಗೆ ರಿಯಾಯಿತಿ, ಸಣ್ಣ ಅತಿಸಣ್ಣ ರೈತರಿಗೆ ಬಿತ್ತನೆ ಬೀಜ ರಿಯಾಯಿತಿ, ಫಲವತ್ತತೆ ಆಧರಿಸಿ ಬೆಳೆ ಹೆಚ್ಚಿಸಲು ಪ್ರೋತ್ಸಾಹ, ಕಡಿಮೆ ಬಡ್ಡಿ ದರದಲ್ಲಿ ಸಾಲ, ಬೆಂಬಲ ಬೆಲೆಯಲ್ಲಿ ಕೃಷಿ ಉತ್ಪನ್ನ ಖರೀದಿ ಇಂತಹ ಯೋಜನೆಗಳು ಬಂದಿದ್ದು ಸರಿ ಇದ್ದರೂ ಸಕಾಲಕ್ಕೆ ಸೂಕ್ತವಾಗಿ ಸಮರ್ಪಕವಾಗಿ ಯೋಜನೆ ಅನುಷ್ಠಾನ ಮಾಡಲು ಮಾರ್ಗಸೂಚಿಗಳು ಹಾಗೂ ಯೋಜನೆಗಳನ್ನು ಬದಲಿಸಲು ಅಗತ್ಯವಿದೆ.ಸರ್ಕಾರದ ಲೆಕ್ಕದಲ್ಲಿ 2004 ರಿಂದ 2011 ರವರೆಗೆ 2603 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸಾಮಾನ್ಯ ಲೆಕ್ಕದಲ್ಲಿ 5800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿತ್ರದುರ್ಗ ಸರ್ಕಾರ ಲೆಕ್ಕದಲ್ಲಿ 167, ಸಾಮಾನ್ಯ ಲೆಕ್ಕದಲ್ಲಿ 322 ಜನರನ್ನು ಮೀರಿದೆ. ಶಿವಮೊಗ್ಗ 156 ಸಾಮಾನ್ಯ ಲೆಕ್ಕದಲ್ಲಿ 270 ಹಾಗೆಯೇ ಹಾವೇರಿ 108, ಬಿಜಾಪುರ 124, ತುಮಕೂರು 122, ಗುಲ್ಬರ್ಗ 180, ಮಂಡ್ಯ 104 ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರದೇಶಗಳಾದ ಬೆಳಗಾವಿ 191, ಬೀದರ್ 202, ಹಾಸನ 268 ಸರ್ಕಾರದ ಲೆಕ್ಕದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಸರ್ಕಾರ ಮಾಡಿದ ಯೋಜನೆ ಯಾವುದೇ ರೈತನ ಆತ್ಮಹತ್ಯೆ ತಡೆಗಟ್ಟುವಲ್ಲಿ ಸೋಲು ಕಂಡಿದೆ.ರೈತ ಸಾಲ ಮಾಡಿ ಸಕಾಲಕ್ಕೆ ಬೆಳೆ ಬೆಳೆದು ಉತ್ತಮ ಇಳುವರಿ ಬಂದು ನಿರೀಕ್ಷಿತ ದರ ಸಿಕ್ಕು ಸಂತೋಷಗೊಳ್ಳುವ ಅವಕಾಶಗಳಿಲ್ಲದೆ ಸಾಲವನ್ನು ತೀರಿಸಲು ಸಾಧ್ಯವಾಗದೆ ನಿರಂತರ ಸಾಲಗಾರರಾಗಿರುತ್ತಾರೆ. ಸಾಲದ ಶೂಲ ನಿರಂತರ ರೈತರ ನೇಣಿನ ಕುಣಿಕೆಯಾಗಿರುತ್ತದೆ. ಇದರಿಂದ ಬಿಡುಗಡೆಗೊಳ್ಳಲು ರೈತನ ಆತ್ಮವಿಶ್ವಾಸ ತುಂಬಲು ಸರ್ಕಾರ ಸಕಾಲಿಕ ಯೋಜನೆಗಳ ಜಾರಿ ಅವಶ್ಯಕವಿದೆ.

ಪ್ರತಿಕ್ರಿಯಿಸಿ (+)