ರೈತರಿಗೆ ನೆರವಾಗಿ: ಪುನೀತ್

7

ರೈತರಿಗೆ ನೆರವಾಗಿ: ಪುನೀತ್

Published:
Updated:
ರೈತರಿಗೆ ನೆರವಾಗಿ: ಪುನೀತ್

ಬೆಂಗಳೂರು: `ಜನರು ಹಾಲು ಹಾಗೂ ಎಳನೀರು ಹೆಚ್ಚಿನ ಪ್ರಮಾಣದಲ್ಲಿ ಬಳಸಿ ರೈತ ಸಮುದಾಯಕ್ಕೆ ನೆರವಾಗಬೇಕು~ ಎಂದು ಸಿನಿಮಾ ನಟ ಪುನೀತ್ ರಾಜ್ ಕುಮಾರ್ ವಿನಂತಿಸಿದರು.ಕರ್ನಾಟಕ ಹಾಲು ಮಹಾಮಂಡಳಿಯ ಮದರ್ ಡೇರಿಯ ಆಶ್ರಯದಲ್ಲಿ ವಿಶ್ವ ಹಾಲು ದಿನಾಚರಣೆಯ ಅಂಗವಾಗಿ ನಗರದ ಆರ್.ಟಿ. ನಗರದ ಫ್ಲಾರೆನ್ಸ್ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಮಕ್ಕಳಿಗೆ ಉಚಿತ ನಂದಿನಿ ಹಾಲು ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.   ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಎನ್. ವೆಂಕಟರಾಮು ಮಾತನಾಡಿ, `ಪಟ್ಟಭದ್ರ ಹಿತಾಸಕ್ತಿಗಳು ಹಾಲಿನ ಬಗ್ಗೆ ತಪ್ಪು ತಿಳಿವಳಿಕೆ ಮೂಡಿಸುತ್ತಿವೆ. ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಮುಗಿಬಿದ್ದ ಚಿಣ್ಣರು :ಮದರ್ ಡೇರಿಯ ಆಶ್ರಯದಲ್ಲಿ ನಗರದ ಹೆಬ್ಬಾಳದ ಸುಮಂಗಲಿ ಸೇವಾಶ್ರಮದಲ್ಲಿ ಶುಕ್ರವಾರ ನಡೆದ ಉಚಿತ ಹಾಲು ವಿತರಣೆ ಕಾರ್ಯಕ್ರಮದಲ್ಲಿ ಸಿನಿಮಾ ನಟ ಪುನೀತ್ ರಾಜ್ ಕುಮಾರ್ ಅವರ ಕೈಕುಲುಕಲು, ಮಾತನಾಡಿಸಲು ಚಿಣ್ಣರು ಮುಗಿಬಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry