ಗುರುವಾರ , ಮೇ 13, 2021
39 °C

ರೈತರಿಗೆ ಪರಿಹಾರ ಒದಗಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಮಲಪ್ರಭಾ ಕಾಲುವೆ ಸಲುವಾಗಿ ಭೂಮಿಯನ್ನು ನೀಡಿದ್ದು, ಇಲ್ಲಿಯವರೆಗೂ ರೈತರಿಗೆ ಯಾವುದೇ ಪರಿಹಾರ ಬಂದಿಲ್ಲ. ಭೂಮಿಯನ್ನು ನೀಡಿದ ರೈತರಿಗೆ ಕೂಡಲೇ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ಗದಗ ಜಿಲ್ಲೆಯ ನರಗುಂದ ಹಾಗೂ ರೋಣ ಭಾಗದ ರೈತರು ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಮಲಪ್ರಭಾ ಕಾಲುವೆಗಾಗಿ ಭೂಮಿಯನ್ನು ನೀಡಿದ ರೈತರಿಗೆ ಹೆಚ್ಚಿನ ಪರಿಹಾರ ನೀಡುವ ಉದ್ದೇಶದಿಂದ ಕೋರ್ಟ್‌ನಲ್ಲಿ ಮೊಕದ್ದಮೆಯನ್ನು ದಾಖಲು ಮಾಡಲಾಗಿತ್ತು. ಈ ಮೊಕದ್ದಮೆಯಲ್ಲಿ ರೋಣದ ಸಿವಿಲ್ ವಕೀಲರು ಹಾಗೂ ಗದಗ ಜಿಲ್ಲೆಯ ಸಿವಿಲ್ ವಕೀಲರು ಮಿಸಲೇಯನ್ ಪ್ರಕರಣಗಳಲ್ಲಿ ಕಾಗದ ಪತ್ರಗಳನ್ನು ಕೋರ್ಟ್‌ಗೆ ಕಳಿಸಿ ಕೊಡಲು ಧಾರವಾಡದ ಮೂರನೇ ಮಲಪ್ರಭಾ ಯೋಜನೆಯ ಭೂಸ್ವಾಧೀನ ಅಧಿಕಾರಿಗಳಿಗೆ ಆದೇಶ ಮಾಡಿದ್ದರು.

ಈ ಆದೇಶ ಪ್ರತಿಗಳನ್ನು ಪಡೆದುಕೊಂಡು ರೈತರು ಅರ್ಜಿಗಳನ್ನು ಭೂಸ್ವಾಧೀನ ಅಧಿಕಾರಿಗಳಲ್ಲಿ ಕೊಟ್ಟು ಈ ಅರ್ಜಿಗಳಿಗೆ ಸ್ವೀಕೃತಿ ದಿನಾಂಕವನ್ನೂ ಸಹಿತ ಹಾಕಿ ಕೊಟ್ಟಿದ್ದಾರೆ. ಈ ಅರ್ಜಿಗಳನ್ನು ಕೊಟ್ಟು ಎರಡು ವರ್ಷಗಳಾದರೂ ಕೂಡ ಭೂಸ್ವಾಧೀನ ಕಚೇರಿಯ ಅಧಿಕಾರಿಗಳು ಇಲ್ಲಿಯವರೆಗೂ ಯಾವುದೇ ಕಾಗದ ಪತ್ರಗಳನ್ನು ಕೋರ್ಟ್‌ಗೆ ಕಳುಹಿಸಿಲ್ಲ. ಈಗಾಗಲೇ ಭೂಮಿ ಕಳೆದುಕೊಂಡ ಎಲ್ಲ ರೈತರು ಜಿಲ್ಲಾಧಿಕಾರಿಗಳಿಗೆ ಅರ್ಜಿಯನ್ನು ಸಲ್ಲಿಸಿದರೂ ಕೂಡಾ ಕ್ರಮ ಕೈಗೊಂಡಿಲ್ಲ.

ಸರ್ಕಾರಿ ಅಧಿಕಾರಿಗಳಾದ ಜಿಲ್ಲಾಧಿಕಾರಿಗಳು ಈ ರೀತಿ ಸುಮ್ಮನೆ ಇರುವುದರಿಂದ ರೈತರ ಗೋಳನ್ನು ಕೇಳುವವರ‌್ಯಾರು? ಆದ್ದರಿಂದ ರೈತರು ಸಲ್ಲಿಸಿದ ಅರ್ಜಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ರೈತರಿಗೆ ಪರಿಹಾರ ಒದಗಿಸಿಕೊಡಬೇಕು. ಇಲ್ಲದೇ ಹೋದರೆ ಭೂಸ್ವಾಧೀನ ಅಧಿಕಾರಿಗಳ ಕಚೇರಿಯ ಮುಂದೆ ಧರಣಿ ಮಾಡಲಾಗುವುದು ಎಂದು ರೈತರು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಶರಣಪ್ಪ ಯಂಡಿಗೇರಿ, ಸಿದ್ಧಲಿಂಗಪ್ಪ ಯಾಳಗಿ, ನೆಹರು ಕಂಬಿ, ಗೋವಿಂದಪ್ಪ ಜಾಲಗಾರ, ಎಚ್.ಎಫ್.ಕಟಗಿ, ಬಿ.ಎಲ್.ಪಾಟೀಲ, ವೆಂಕನಗೌಡ ಮೆಣಸಗಿ, ಹನುಮಂತಪ್ಪ ಚಲವಾದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.