ಶನಿವಾರ, ಜೂನ್ 19, 2021
27 °C

ರೈತರಿಗೆ ರಾಜಕಾರಣಿಗಳ ನಿರಂತರ ಮೋಸ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊನ್ನಾಳಿ: ರಾಜಕಾರಣಿಗಳು ರೈತರಿಗೆ ನಿರಂತರವಾಗಿ ಮೋಸ ಮಾಡುತ್ತಿದ್ದಾರೆ ಎಂದು ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಸ್ವಾಮಿ ಆರೋಪಿಸಿದರು.ಇಲ್ಲಿನ ಕುಂಬಾರ ಬೀದಿಯ ಬಸವೇಶ್ವರ ಸಮುದಾಯ ಭವನದಲ್ಲಿ ಶನಿವಾರ ರೈತಸಂಘ ಮತ್ತು ಹಸಿರು ಸೇನೆಯ ದುರ್ಗಮ್ಮದೇವಿ ಸರ್ಕಲ್‌ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ, ಗುಣಮಟ್ಟದ ಬಿತ್ತನೆ ಬೀಜ, ಸಾಕಷ್ಟು ವೇಳೆ ಸಮರ್ಪಕ ವಿದ್ಯುತ್‌ ವಿತರಣೆ ಮಾಡದೇ ರೈತರಿಗೆ ನಮ್ಮ ಸರ್ಕಾರ–ಅಧಿಕಾರಿ ವರ್ಗದವರು ಸಂಘಟಿತವಾಗಿ ಮೋಸ ಮಾಡುತ್ತಿದ್ದಾರೆ ಎಂದು ಹೇಳಿದರು.‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು  ರೈತರನ್ನು ಹೊಗಳಿ, ಅಟ್ಟಕ್ಕೇರಿಸಿ ಓಟು ಪಡೆದು ಗದ್ದುಗೆ ಏರಿದ ತಕ್ಷಣ ರೈತರನ್ನು ಮರೆತುಬಿಡುತ್ತಾರೆ. ಸ್ವಾರ್ಥಕ್ಕಾಗಿ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ. ದೇಶವನ್ನು ಕೊಳ್ಳೆ ಹೊಡೆಯುತ್ತಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.ರೈತ ಸಂಘದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಎಂ.ಪಿ.ಕರಿಬಸಪ್ಪಗೌಡ ಮಾತನಾಡಿ, ಗುಣಮಟ್ಟದ, ಸಮರ್ಪಕ ವಿದ್ಯುತ್‌ ಇಲ್ಲದ ಕಾರಣ ರೈತರು ಕೃಷಿ ಚಟುವಟಿಕೆಗಳಿಂದ ವಿಮುಖರಾಗಿ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಬಲ್ಲೂರು ರವಿಕುಮಾರ್‌, ಜಿಲ್ಲಾ ಘಟಕದ ಅಧ್ಯಕ್ಷ ರೇವಣಸಿದ್ದಪ್ಪ, ಮುಖಂಡ ಅರುಣ್‌ಕುಮಾರ್‌ ಕುರುಡಿ ಇತರರು ಮಾತನಾಡಿದರು.ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಹದೇವಪ್ಪ ರೆಡ್ಡಿ, ಕಾರ್ಯಾಧ್ಯಕ್ಷ ಎಚ್‌.ಮಲ್ಲಿಕಾರ್ಜುನ್‌, ಮುಖಂಡರಾದ ಮಹೇಶ್ವರಪ್ಪ ರೆಡ್ಡಿ, ಹರಳಹಳ್ಳಿ ನಿಂಗಪ್ಪ, ಸಿದ್ದೇಶ್‌, ಗಣೇಶ್‌, ಪಟೇಲ್‌ ಬಸವರಾಜಪ್ಪ, ಭೈರಪ್ಪ, ಪಿ.ದೊಡ್ಡಪ್ಪ ಇದ್ದರು.ಪೂಜಾರ ಬಸಪ್ಪ ಕರುಗೂಳಿ, ಎಚ್‌.ಎ.ಪ್ರಭಾಕರ್‌, ಹೋಬಳದಾರ ಹಳದಪ್ಪ, ಸರಳಿನಮನೆ ಸುರೇಶ್‌, ಕೆ.ಜಿ.ಮಹೇಶ್ವರಪ್ಪ, ಸಫ್ತರ್‌ ಅಲಿ ಖಾನ್‌ ಅಫ್ರೀದಿ, ಪ್ರಭು ದುರ್ಗಪ್ಪ, ಎಚ್‌.ಅಶೋಕ್‌, ಮಲ್ಲಿಕಾರ್ಜುನಯ್ಯ, ಸುರೇಶ್‌ ಅಂಗಡಿ, ರಮೇಶ್‌ ಕುಂಬಾರ್‌, ಶರಣಪ್ಪ, ನವಾಬ್‌ ಅನ್ವರ್‌ ಸಾಬ್‌, ಓಂಕಾರಪ್ಪ, ಕೃಷ್ಣಪ್ಪ ಸುಣಗಾರ್‌, ಕಂಬಳಿ ನಾಗರಾಜ್, ಮಂಜಪ್ಪ ಬಲಮುರಿ, ಹಳದಪ್ಪ, ಲಿಂಗರಾಜಪ್ಪ, ಷಣ್ಮುಖಪ್ಪ ಕುಂಬಾರ್‌, ಸಿದ್ದಪ್ಪ ಬಲಮುರಿ, ಸುರೇಶ್‌, ಸತೀಶ್‌, ನಂಜುಂಡಪ್ಪ ಕುಂಬಾರ್‌ ಇತರರಿಗೆ ಹಸಿರು ಶಾಲು ದೀಕ್ಷೆ ನೀಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.