ಗುರುವಾರ , ಮೇ 13, 2021
39 °C

ರೈತರಿಗೆ ಹಣ ಪಾವತಿ ಮಾಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿರುವ ರೈತರಿಗೆ ಹಣ ಪಾವತಿ ಮಾಡಿ ಎಂದು ಕಾರ್ಖಾನೆಯ ಅಧ್ಯಕ್ಷ ನಾಗರಾಜಪ್ಪ ಅವರನ್ನು ರೈತ ಸಂಘದ ಮುಖಂಡರು ಶುಕ್ರವಾರ ಒತ್ತಾಯಿಸಿದರು.ಬೆಳಿಗ್ಗೆ ಕಾರ್ಖಾನೆಯ ಅಧ್ಯಕ್ಷರನ್ನು ಭೇಟಿ ಮಾಡಿದ ರೈತ ಮುಖಂಡರು, ಪ್ರಸಕ್ತ ಸಾಲಿನ ಬಾಕಿ ಹಣ, ಮುಂಗಡ ಹಣ ಹಾಗೂ ಕಳೆದ ಸಾಲಿನ 100 ರೂ.ಗಳನ್ನು ಕೂಡಲೇ ಪಾವತಿ ಮಾಡಬೇಕೆಂದು ಒತ್ತಾಯಿಸಿದರು. ಕಬ್ಬು ಕಟಾವು ಮಾಡಿದ ಕೂಲಿ ಮತ್ತು ಸಾಗಾಣಿಕೆಯ ಹಣವನ್ನು ತಕ್ಷಣ ಬಿಡುಗಡೆ ಮಾಡಿ, ಇಲ್ಲದಿದ್ದರೆ ಕಬ್ಬು ಬೆಳೆಗಾರರು ತೊಂದರೆಗೆ ಒಳಗಾಗಲಿದ್ದಾರೆ ಎಂದರು.ರೈತ ಸಂಘದ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕಾರ್ಖಾನೆ ಉತ್ತಮವಾಗಿ ನಡೆದಿದೆ. ಆದರೆ ಹಣ ಪಾವತಿ ವಿಳಂಬ ಮಾಡಬೇಡಿ, ಮುಂದಿನ ಸಾಲಿನಲ್ಲಿ ಕಾರ್ಖಾನೆ ಪ್ರಾರಂಭಿಸಲು ಈಗಿನಿಂದಲೇ ಕಾರ್ಯಪ್ರವೃತ್ತರಾಗಿ, ಕಾರ್ಖಾನೆ ಸುಸ್ಥಿರದ ಬಗ್ಗೆ ಸಿಎಂನೊಂದಿಗೆ ಚರ್ಚಿಸಲು ಒಂದು ನಿಯೋಗ ಹೋಗಲು ತಯಾರು ಮಾಡಬೇಕಾಗಿದೆ ಎಂದರು.ಹಣ ಪಾವತಿಗೆ ಕ್ರಮ: ಕಾರ್ಖಾನೆಯ ಅಧ್ಯಕ್ಷ ನಾಗರಾಜಪ್ಪ ಮಾತನಾಡಿ, ಕಬ್ಬು ಸರಬರಾಜು ಮಾಡಿದ ರೈತರಿಗೆ ಮೇ ಮೊದಲ ವಾರದಲ್ಲಿ ಹಣ ಪಾವತಿ ಮಾಡಲಾಗುವುದು. ಪ್ರಸಕ್ತ ಸಾಲಿನಲ್ಲಿ 200 ದಿನಗಳು ಕಾರ್ಖಾನೆ ಕಬ್ಬು ಅರೆದಿದ್ದು, 3,49,883. 342 ಮೆಟ್ರಿಕ್ ಟನ್ ಕಬ್ಬು ನುರಿಸಿದೆ.2,79,220 ಕ್ವಿಂಟಲ್ ಸಕ್ಕರೆ ಉತ್ಪಾದನೆಯಾಗಿ ಹಾಲಿ ದಾಸ್ತಾನಿ ನಲ್ಲಿ 40.30 ಕೋಟಿ ಮೌಲ್ಯದ 1,54,975 ಕ್ವಿಂಟಲ್ ಸಕ್ಕರೆಯಿದೆ. ಅಲ್ಲದೆ 1.53 ಕೋಟಿ ಮೌಲ್ಯದ 4,755 ಮೆಟ್ರಿಕ್ ಟನ್ ಮಲಾಸಿಸ್ ಇದೆ. 69.97 ಕೋಟಿ ಹಣವನ್ನು ಕಬ್ಬು ಸರಬರಾಜು ದಾರರಿಗೆ  ಪಾವತಿ ಮಾಡಬೇಕಾಗಿದ್ದರಲ್ಲಿ ಈಗಾಗಲೇ 48.51ಕೋಟಿ ಹಣವನ್ನು ಪಾವತಿ ಮಾಡಿದ್ದೇವೆ. ಉಳಿಕೆ 21.46 ಕೋಟಿ ರೂ.ಗಳನ್ನು ಪಾವತಿಸ ಬೇಕಾಗಿದೆ ಎಂದರು.ಕೇಂದ್ರ ಸರ್ಕಾರವು ಏಪ್ರಿಲ್ 2012ರ ಮಾಹೆಗೆ ಮುಕ್ತ ಮಾರುಕಟ್ಟೆ ಸಕ್ಕರೆಯನ್ನು ಬಿಡುಗಡೆ ಮಾಡಿರುವುದಿಲ್ಲ. ಕಾರ್ಖಾನೆಯು ಮುಕ್ತ ಮಾರುಕಟ್ಟೆ ಸಕ್ಕರೆಯನ್ನು ಬಿಡುಗಡೆ ಮಾಡುವ ಬಗ್ಗೆ ಮುಂದಾ ಲೋಚನಾ ಕ್ರಮವಾಗಿ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಅರ್ಜಿಯನ್ನು ಪರಿಶೀಲಿಸಿ ಮಾರ್ಚ್ 2012ರಲ್ಲಿ ದಾಸ್ತಾನಿದ್ದ ಸಕ್ಕರೆಯ ಶೇ.50 ಭಾಗದ 52,407 ಕ್ವಿಂಟಲ್ ಸಕ್ಕರೆಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಆದೇಶ ನೀಡಿರುತ್ತಾರೆ.ಅದರಂತೆ ಏಪ್ರಿಲ್ 25ರಂದು ಸಕ್ಕರೆ ಮಾರಾಟ ಸಭೆಯನ್ನು ಕರೆಯ ಲಾಗಿದೆ. ಸಕ್ಕರೆ ಮಾರಾಟವಾದರೆ 14 ಕೋಟಿ ಹಣ ಕಾರ್ಖಾನೆಗೆ ಬರಲಿದೆ. ನಂತರ ಮತ್ತೆ ನ್ಯಾಯಾಲಯ ಎರಡನೆ ಹಂತವಾಗಿ ಸಕ್ಕರೆ ಮಾರಾಟಕ್ಕೆ ಅನುಮತಿ ಕೊಡಲಿದೆ. ಹಾಗಾಗಿ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.ಸಿಎಂ ಬಳಿ ನಿಯೋಗ: ರೈತ ಸಂಘದ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ದರಸಗುಪ್ಪೆ ಧನಂಜಯ ಹಾಗೂ ಕಾರ್ಖಾ ನೆಯ ಅಧ್ಯಕ್ಷ ನಾಗರಾಜಪ್ಪ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಇಷ್ಟರಲ್ಲಿಯೇ ಭೇಟಿ ಮಾಡಿ ಕಾರ್ಖಾನೆಯ ಸುಸ್ಥಿರದ ಬಗ್ಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.ಕಬ್ಬು ಬೆಳೆಗಾರರ ಸಂಘದ ದರಸಗುಪ್ಪೆ ಧನಂಜಯ, ಜಿ.ಪಂ. ಸದಸ್ಯ ಎ.ಎಲ್.ಕೆಂಪೂಗೌಡ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹರವು ಪ್ರಕಾಶ್, ಮುಖಂಡರಾದ ಕೆನ್ನಾಳು ನಾಗರಾಜು, ದಯಾನಂದ, ಕಾರ್ಖಾನೆಯ ಪ್ರಭಾರ ವ್ಯವಸ್ಥಾಪಕ ಡಿ.ರಾಮ ಲಿಂಗಂ, ಪ್ರಧಾನ ವ್ಯವಸ್ಥಾಪಕ ಆಲ್ಪಾನ್ಸ್‌ರಾಜ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.