ಭಾನುವಾರ, ಮೇ 16, 2021
24 °C

ರೈತರು ಬೇಡುವವರಾಗದಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೇಡಂ: ಈ ಭಾಗದ ಜನರಿಗೆ ಬರ ಹೊಸದಲ್ಲ ಇದು ವರವಾಗಿದೆ. ಆದ್ದರಿಂದ `ಬರ ನಿರೋಧ ಯೋಜನೆ~ ಜಾರಿಗೆ ಬರಲಿ ಎಂದು ಕರ್ನಾಟಕ ಕೃಷಿಕ್ ಸಮಾಜದ ಗುಲ್ಬರ್ಗ ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ದಂಗಾಪೂರ ಅಭಿಪ್ರಾಯಪಟ್ಟರು.ಅವರು ಗುರುವಾರ ಕೃಷಿ ಇಲಾಖೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಭೂ ಚೇತನ ಕಾರ್ಯಾಗಾರವನ್ನು ಉದ್ಘಾಟಿಸಿ ರೈತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.ಮನೆಗೊಂದು ಹಸು, ಬದುವಿಗೊಂದು 5 ಮರವಿರಬೇಕು. ಜಮೀನಿನಲ್ಲಿ ಕೃಷಿ ಹೊಂಡ ಮತ್ತು ಪ್ರತಿ ಗ್ರಾಮಕ್ಕೆ ಒಂದು ಕೆರೆ ನಿರ್ಮಾಣ ಆದಾಗ ಮಾತ್ರ ಬರ ದೂರವಾಗಲು ಸಾಧ್ಯ. ಸರ್ಕಾರದ ಮೇಲೆ ಅವಲಂಬಿತರಾಗದೇ ಕೃಷಿ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ರೈತರೊಂದಿಗೆ ಜರುಗಿದ ನೇರ ಸಂವಾದದಲ್ಲಿ ಇಲಾಖೆ ಮೂಲಕ ನೀಡುವ  ರಿಯಾಯತಿ ದರದ  ಸಕಲ ಕೃಷಿ ಪರಿಕರ ಮತ್ತು ಯಂತ್ರಗಳು ನೇರವಾಗಿ ರೈತರಿಗೆ ಸಿಗುವಂತೆ ಆಗಬೇಕು. ರೈತರ ಪರ ಯೋಜನೆಗಳು ಮನೆ ಬಾಗಿಲಿಗೆ ಬರಲಿ.ಉದ್ಯೋಗ ಖಾತ್ರಿ ಯೋಜನೆ ರೈತರಿಗೆ ನೇರವಾಗಿ ಅಳವಡಿಸಬೇಕು, ಉತ್ತಮ ಬೀಜ, ಗೊಬ್ಬರ, ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಅಡಿಯಲ್ಲಿ `ಹಾಣಾದಿ~ ಹೊಲಗಳಿಗೆ ಹೋಗುವ ರಸ್ತೆ ಸಂಪರ್ಕ ಕಲ್ಪಿಸುವ ವಿಶೇಷ ಯೋಜನೆಗಳು ಕಾರ್ಯರೂಪಕ್ಕೆ ಬರಲಿ ಎಂದು ನೀಡಿದ ಸಲಹೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.ಸಂವಾದದಲ್ಲಿ ಜಿಲ್ಲಾ ಉಪಾಧ್ಯಕ್ಷ ಮತ್ತು ತಾಲ್ಲೂಕು ಅಧ್ಯಕ್ಷ ಡಾ. ನಾಗರೆಡ್ಡಿ ಪಾಟೀಲ, ಗೋಪಿಕಿಶನ ಲಡ್ಡಾ, ರಘುನಾಥ ರೆಡ್ಡಿ ಮುಧೋಳ, ನಾಗೇಶ್ವರರಾವ ಮಾಲಿಪಾಟೀಲ, ದತ್ತಾತ್ರೇಯ ಇಲ್ಲಾಳ ಆಡಕಿ, ರಾಮಯ್ಯ ಪೂಜಾರಿ, ಅನಂತರೆಡ್ಡಿ ಹಾಸನಪಲ್ಲಿ ಬಟಗೇರಾ, ರಾಚಣ್ಣ ಯಡ್ಡಳ್ಳಿ, ಬಸವರಾಜ ಮಾಲಿಪಾಟೀಲ ಮಳಖೇಡ, ಬಸವರಾಜ ಪಾಟೀಲ ಊಡಗಿ, ಗಣಪತರಾವ ಚಿಮ್ಮನ್‌ಚೋಡಕರ್, ಸಿದ್ದು ಕೂದಾಂಪೂರ, ಕರೆಪ್ಪ ಪಿಲ್ಲಿ, ರಾಜಪ್ಪ ಮಂಗಾ, ಶಿವಕುಮಾರ ನೂಲಾ, ವಿನೋಧ ಕುರಕುಂಟಾ  ರಾಜು ಕುಲಕರ್ಣಿ ಭಾಗವಹಿಸಿದ್ದರು. ಸಹಾಯಕ ಕೃಷಿ ನಿರ್ದೇಶಕ ಡಾ. ಡಿ. ಲಿಂಗಮಾಂತು ನಿರೂಪಿಸಿದರು. ಸಹಾಯಕ ತೋಟಗಾರಿಕೆ ನಿರ್ದೇಶಕ ನಾಗರಾಜ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.