ಮಂಗಳವಾರ, ಮೇ 18, 2021
22 °C

ರೈತರೊಂದಿಗೆ ಕೃಷಿ ವಿದ್ಯಾರ್ಥಿಗಳ ಸಾಮಾನ್ಯ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ : ರಾಯಚೂರಿನ ಕೃಷಿ ವಿಶ್ವವಿದ್ಯಾಲಯ ಹಾಗೂ ಭೀಮರಾಯ ಗುಡಿಯ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ  ವಿದ್ಯಾರ್ಥಿಗಳು ಬುಧವಾರ ತಾಲ್ಲೂಕಿನ ಹತ್ತಿಕುಣಿ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ರೈತರೊಂದಿಗೆ ಗ್ರಾಮೀಣ ಕೃಷಿ ಕಾರ್ಯಾನುಭವ ಅಡಿಯಲ್ಲಿ ಸಮಾನ್ಯ ಸಭೆ ನಡೆಸಿದರು.ಕೃಷಿ ಅಧಿಕಾರಿ ವಿಶ್ವನಾಥ ಮಾತನಾಡಿ, ಕೃಷಿ ಮಹಾವಿದ್ಯಾಲಯ ವಿದ್ಯಾರ್ಥಿಗಳು ಮೂರು ವರ್ಷ ಕೃಷಿ ಬಗ್ಗೆ ಪಠ್ಯ ಪುಸ್ತಕ ಅಧ್ಯಯನ ಮಾಡಿ ವಾಸ್ತವಿಕ ಅಧ್ಯಯನಕ್ಕಾಗಿ ಗ್ರಾಮಕ್ಕೆ ಆಗಮಿಸಿದ್ದಾರೆ. ಅವರು ಈ ಭಾಗದ ರೈತರೊಂದಿಗೆ ಉತ್ತಮ ಸಂಪರ್ಕ ಸಾಧಿಸಿ ಅವರಿಗೆ ಆಧುನಿಕ ಕೃಷಿ ತಂತ್ರಜ್ಞಾನ ಬಳಕೆ ಕುರಿತು ಮಾಹಿತಿ ನೀಡುವುದರ ಜೊತೆಗೆ ಅವರೂ ಅನುಭವ ಕೂಡ ಅನುಭವ ಪಡೆದುಕೊಳ್ಳಲು ಬಂದಿದ್ದಾರೆ ಎಂದರು.ಕೃಷಿ ವಿದ್ಯಾರ್ಥಿ ಗಿರೀಶ ಇರಾವಟ್ಟಿ ಮಾತನಾಡಿ ನಾವು ಗ್ರಾಮದಲ್ಲಿ 3 ತಿಂಗಳ ಕಾಲ ವಾಸ ಮಾಡಿ ರೈತರ ಬದುಕು ಮತ್ತು ಅವರ ಕೃಷಿ ಚಟುವಟಿಕೆ ಕುರಿತು ಅಧ್ಯಯನ ಮಾಡುವುದಾಗಿ ತಿಳಿಸಿದರು. ಮಣ್ಣು ಪರೀಕ್ಷೆ, ಬೀಜ, ಬೀಜೋಪಚಾರ, ಗೊಬ್ಬರ, ಕೀಟನಾಶಕಗಳ ಬಳಕೆ, ಸಾವಯುವ ಕೃಷಿ ಪದ್ದತಿ ಅಳವಡಿಕೆ ಹಾಗೂ ಆಧುನಿಕ ಕೃಷಿ ತಂತ್ರಜ್ಞಾನ ಕುರಿತು ಅವರೊಂದಿಗೆ ಚರ್ಚಿಸಿ ಅಗತ್ಯ ಮಾಹಿತಿ ನೀಡುತ್ತೆವೆ ಎಂದರು. ರೈತರಾದ ಬಸವರಾಜಪ್ಪ ಪ್ಯಾಟಿ ಮಾತನಾಡಿ, ಗ್ರಾಮಕ್ಕೆ ಆಗಮಿಸಿರುವ ಕೃಷಿ ಪದವಿ ವಿದ್ಯಾರ್ಥಿಗಳಿಗೆ ರೈತರು ಅಗತ್ಯ ಸಹಕಾರ ನೀಡಿ ಅವರಿಂದ ಹೆಚ್ಚಿನ ಉಪಯೋಗ ಪಡೆದುಕೊಂಡು ಬದಲಾವಣೆ ಸಾಧಿಸಬೇಕು ಎಂದು ಹೇಳಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮೀಕಾಂತ ತಮ್ಮಣೋರ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.