ಭಾನುವಾರ, ಏಪ್ರಿಲ್ 11, 2021
32 °C

ರೈತರೊಂದಿಗೆ ಸಂಸ್ಥೆ ಅಭಿವೃದ್ಧಿಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಳಗಿ: ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ತಮಗೆ ಸಿಗುವ ಸೌಲಭ್ಯಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಶಕ್ತರಾಗಬೇಕು ಎಂದು ಜಿಪಂ ಸದಸ್ಯ ಎಚ್.ಆರ್. ನಿರಾಣಿ ಹೇಳಿದರು. ಬೀಳಗಿ ಕೃಷಿ ಉತ್ಪನ್ನ ಮಾರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ರೈತರ ಅಭಿವೃದ್ಧಿಗಾಗಿಯೇ ಸ್ಥಾಪನೆಯಾಗಿರುವ ಕೃಷಿ ಉತ್ಪನ್ನ ಮಾರಾಟ ಸಮಿತಿಯನ್ನೂ ಆರ್ಥಿಕವಾಗಿ ಭದ್ರಗೊಳಿಸಬೇಕು ಎಂದು ಅವರು ತಿಳಿಸಿದರು.ಕರ್ನಾಟಕ ಭೂಷಣ ಪ್ರಶಸ್ತಿ ಪುರಸ್ಕೃತರಾದ ರಾಜ್ಯ ಕೃಷಿ ಮಾರಾಟ ಮಂಡಳಿ ನಿರ್ದೇಶಕ ಕೆ.ವಿ. ಪಾಟೀಲ ಅವರನ್ನು ಸನ್ಮಾನಿಸಲಾಯಿತು. ವರ್ತಕರಾದ ಎಂ.ಎಂ. ಶಂಭೋಜಿ, ವಿ.ಜಿ. ರೇವಡಿಗಾರ, ವಿ.ಎಸ್. ಕೋಲಾರ ಮಾತನಾಡಿದರು. ಸಮಿತಿ ಉಪಾಧ್ಯಕ್ಷ ಅನಿಲ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕರಾದ ಎಸ್.ಆರ್, ಕದಾಂಪೂರ, ಎಂ.ಎಸ್. ಬೆಳವಲ, ಎಸ್.ವೈ. ಮಾದರ, ಶೋಭಾ ಹಂಚಿನಾಳ, ಎಸ್.ಎಸ್. ಯಂಕಂಚಿಮಠ, ಎಸ್.ವೈ. ಒಡೆಯರ, ವರ್ತಕರಾದ ವಿ.ಎಸ್. ಕೋಲಾರ, ಹುಚ್ಚಯ್ಯ ಯಂಕಂಚಿಮಠ, ಬಸವರಾಜ ಮೋದಿ, ಜಿ.ಎಂ. ನಾಗರಾಳ, ಎಸ್.ಎಂ. ಕಟಗೇರಿ, ಪ್ರಕಾಶ ಕಟಗೇರಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.